

ತುಮಕೂರು: ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗುವುದಾಗಿ ಪ್ರಚಾರ ಆರಂಭಿಸಿರುವ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್.ಅನಿಲ್‌ಕುಮಾರ್ ವಿರುದ್ಧ ನೂರಾರು ಕೋಟಿ ರೂ. ಭ್ರಷ್ಟಾಚಾರದ ಆರೋಪವನ್ನು ಅಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ.ಬಿ.ಎಲ್.ವಿಶ್ವನಾಥ್ ಮಾಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಕಮಿಷನರ್ ಆಗಿದ್ದಾಗ ಅನಿಲ್‌ಕುಮಾರ್ ಸ್ಮಾರ್ಟ್ ಪಾರ್ಕಿಂಗ್ ಕಾಮಗಾರಿಯಲ್ಲಿ 31.6, ಕೆರೆಯಲ್ಲಿ ಹೂಳು ತೆಗೆಯುವ ಕಾಮಗಾರಿಯಲ್ಲಿ 36ಕೋಟಿ ರೂ. ಕೊಳವೆಬಾವಿ ಹೆಸರಿನಲ್ಲಿ 939ಕೋಟಿ ರೂ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಕರೊನಾ ಸಂದರ್ಭದಲ್ಲಿ ಸೋಂಕಿತರ ಕಾಳಜಿ ಕೇಂದ್ರದ ಹೆಸರಿನಲ್ಲಿಯೂ ಬಹುದೊಡ್ಡ ಅವ್ಯವಹಾರ ನಡೆದಿದೆ ಒಟ್ಟು 1300ಕೋಟಿ ರೂ. ಮೊತ್ತದ ಅಕ್ರಮಗಳು ನಡೆದಿವೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಎಎಪಿ ಕಾನೂನು ವಿಭಾಗದ ರಮೇಶ್‌ನಾಯ್ಕ್, ಜಿಲ್ಲಾಧ್ಯಕ್ಷ ಪ್ರೇಮ್‌ಕುಮಾರ್, ಮುಖಂಡ ಮಹಮ್ಮದ್ ಗೌಸ್ ಇದ್ದರು.