ತುಮಕೂರು ಬಳಿ ಅಪಘಾತ: ಅಂತ್ಯಕ್ರಿಯೆಗೆ ಹೊರಟ ಸಹೋದರರ ಸಾವು

Tumkur, accident, death of brothers,
Published on

ಮಾಯಕೊಂಡ: ಬೆಂಗಳೂರಿನಲ್ಲಿದ್ದ ಅಂತ್ಯಸಂಸ್ಕಾರಕ್ಕೆ ಹೊರಟ ಸಹೋದರರಿಬ್ಬರು ತುಮಕೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದ ಅಪಘಾತದಲ್ಲಿ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ದಾವಣಗೆರೆ ತಾಲೂಕಿನ ನಲ್ಕುಂದ ಗ್ರಾಮದ ಎನ್.ಈ. ರಾಜಪ್ಪ (56) ಮತ್ತು ಎನ್.ಈ. ಗಂಗಾಧರ್ (50) ಮೃತರು. ಶುಕ್ರವಾರ ರಾತ್ರಿ 1ಕ್ಕೆ ನಲ್ಕುಂದ ಗ್ರಾಮದಿಂದ ಬೆಂಗಳೂರಿಗೆ ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆ ಕಾರಿನಲ್ಲಿ ತೆರಳುತ್ತಿದ್ದರು.

ಮಾರ್ಗಮಧ್ಯೆದ ತುಮಕೂರು ಬಳಿ ಹೆದ್ದಾರಿಯಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ನಾಲ್ವರಲ್ಲಿ ಸಹೋದರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ, ಇನ್ನೊಬ್ಬ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಿಕೊಂಡು ಶುಕ್ರವಾರ ಸಂಜೆ 5ಕ್ಕೆ ಸ್ವಗ್ರಾಮ ನಲ್ಕುಂದಕ್ಕೆ ದೇಹಗಳನ್ನು ತರಲಾಯಿತು.

ಮೃತ ಎನ್.ವಿ. ರಾಜಪ್ಪ ಅವರಿಗೆ ಪತ್ನಿ, ಒಬ್ಬ ಪುತ್ರ, ಪುತ್ರಿ ಇದ್ದಾರೆ ಹಾಗೂ ಎನ್.ಎ. ಗಂಗಾಧರ್ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಮೃತ ಸಹೋದರರ ಅಂತ್ಯಸಂಸ್ಕಾರವನ್ನು ಸ್ವಗ್ರಾಮ ನಲ್ಕುಂದದಲ್ಲಿ ಶುಕ್ರವಾರ ಸಂಜೆ ತೋಟದಲ್ಲಿ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net