

ಮದುಗಿರಿ: ಸಾಂಸಾರಿಕ ಕಲಹದಿಂದ ಬೇಸತ್ತ ಮಹಿಳೆ ತನ್ನ ಹೆಣ್ಣು ಮಕ್ಕಳಿಬ್ಬರೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸಿದ್ದಾಪುರ ಕೆರೆಯಲ್ಲಿ ಗುರುವಾರ ಬೆಳಕಿಗೆ ಬಂದಿದೆ.
ಮಧುಗಿರಿ ಪಟ್ಟಣದ ಒಂದನೇ ಬ್ಲಾಕ್ ನ ಅಲ್ಪಾ ಮೇಡಿಕಲ್ಸ್ ಸಮೀಪದ ವಾಸಿಗಳಾದ ಮಹಮ್ಮದ್ ಶಫಿ ಪತ್ನಿ ಹಸೀನಾ (25) ಅವರ 3 ವರ್ಷದ ಪುತ್ರಿ ಅಲ್ಪಿಯಾ ಕೊನೆನ್ ನರ್ಸರಿ ವಿಧ್ಯಾರ್ಥಿ, 8 ವರ್ಷದ ಅಫಿಯ ಕೊನೆನ್ 3 ನೇ ತರಗತಿ ಇಬ್ಬರು ಎಸ್.ಎಂ.ಶಾಲೆಯ ವಿಧ್ಯಾರ್ಥಿಗಳು ಮೃತಪಟ್ಟ ದುರ್ದೈವಿ.
ಅಗ್ನಿಶಾಮಕ ದಳದವರು ಶವ ಹೊರೆ ತೆಗೆದಿದ್ದಾರೆ ಮಧುಗಿರಿ ಪೋಲಿಸ್ ಘಟನಾ ಸ್ಥಳಕ್ಕೆ ಬೇಟಿ ನೀಡಿದರು.