

ತುಮಕೂರು: ಮಹಿಳೆಯರು ಮುಟ್ಟಾದಾಗ ಹಾಗೂ ಹೆರಿಗೆಯಾದ ಸಂದರ್ಭಗಳಲ್ಲಿ ಸೂತಕದ ಸಂಪ್ರದಾಯದ ಹೆಸರಿನಲ್ಲಿ ಆಕೆಯನ್ನು ಮನೆಯಿಂದ ಹೊರಗಿಡುವ ಗೊಲ್ಲರಹಟ್ಟಿಗಳ ಮೌಢ್ಯದ ಬಗ್ಗೆ ಜಾಗೃತಿ ಮುಂದುರಿದಿದೆ.
ಗುಬ್ಬಿ ತಾಲೂಕು ಹಾಗಲವಾಡಿ ಹೋಬಳಿ ಜುಂಜಪ್ಪನಹಟ್ಟಿಗೆ ನ್ಯಾಯಾಧೀಶರಾದ ಉಂಡಿ ಮಂಜುಳ ಶಿವಪ್ಪ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದರು. ಮಹಿಳೆಯರನ್ನು ಇಡುವ ಕೃಷ್ಣಕುಟೀರಕ್ಕೆ ಬೀಗ ಹಾಕಿಸಿ, ಮನೆಯಲ್ಲಿಯೇ ಹಾರೈಕೆ ಮಾಡುವಂತೆ ಮನವಿ ಮಾಡಿದರು.
ಗೊಲ್ಲರಹಟ್ಟಿಗಳಲ್ಲಿ ಸೂತಕದ ಸಂದರ್ಭದಲ್ಲಿ ಮಹಿಳೆಯರನ್ನು ಈ ಕೃಷ್ಣ ಕುಟೀರದಲ್ಲಿಡಲಾಗುತ್ತಿದೆ, ಇದೂ ಇಲ್ಲದ ಹಟ್ಟಿಗಳಲ್ಲಿ ಗುಡಿಸಲು ನಿರ್ಮಿಸಿ ಇಡುವ ಸಂಪ್ರದಾಯದಿAದ ಅನೇಕ ಪ್ರಾಣ ಹಾನಿಯೂ ಸಂಭವಿಸಿದೆ.
.
ವಕೀಲರ ಸಂಘದ ಅಧ್ಯಕ್ಷ ಬಿ.ಕೆ.ಚಿದಾನಂದ್, ಕಾರ್ಯದರ್ಶಿ ಸುರೇಶ್, ಕಾನೂನು ಸೇವಾ ಸಮಿತಿಯ ಸಿಬ್ಬಂದಿ ಕೃಷ್ಣ ಇದ್ದರು.