

ತುಮಕೂರು: ತುಮಕೂರು ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಅಚ್ಚರಿಯೊಂದು ನಡೆಯಿತು, ಪ್ರಯಾಣಿಕರೇ ಖುದ್ದು ಹಳಿಯ ಮೇಲಿಳಿದು ಸ್ವಚ್ಛಗೊಳಿಸಿದ್ದು ವಿಶೇಷ ಎನ್ನಿಸಿತು.
ರಾಷ್ಟçಪಿತ ಮಹಾತ್ಮಗಾಂಧಿ ಅವರ ಜಯಂತಿ ಅಂಗವಾಗಿ ಸೋಮವಾರ ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ವತಿಯಿಂದ ತುಮಕೂರು ರೈಲ್ವೇ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವೇದಿಕೆ ಅಧ್ಯಕ್ಷೆ ಬಾ.ಹ.ರಮಾಕುಮಾರಿ ನೇತೃತ್ವದಲ್ಲಿ ನಿಲ್ದಾಣದ ರೈಲು ಹಳಿಗಳು, ಪ್ಲಾಟ್ ಫಾರಂ, ಟಿಕೆಟ್ ಕೌಂಟರ್ ಆವರಣ, ಹೊರ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ಉಪಾಧ್ಯಕ್ಷ ಪರಮೇಶ್ವರ್, ಕಾರ್ಯದರ್ಶಿ ಕರಣಂ ರಮೇಶ್, ಜಂಟಿ ಕಾರ್ಯದರ್ಶಿಗಳಾದ ರಘು ರಾಮಚಂದ್ರಯ್ಯ, ಸಗರ ಚಕ್ರವರ್ತಿ, ಖಜಾಂಚಿ ಆರ್.ಬಾಲಾಜಿ, ನಿರ್ದೇಶಕರಾದ ರಾಮಾಂಜನೇಯ, ಶಿವಕುಮಾರ್, ಸಿದ್ದಲಿಂಗಯ್ಯ, ವೀರಪ್ಪ, ರೋಟರಿ ಅಧ್ಯಕ್ಷ ಸಿ.ನಾಗರಾಜ್, ಕಾರ್ಯದರ್ಶಿ ಶಿವಕುಮಾರಸ್ವಾಮಿ ಮತ್ತಿತರರು ಇದ್ದರು.
ನಂತರ ನಡೆದ ಸರಳ ಸಮಾರಂಭದಲ್ಲಿ ಮಹಾತ್ಮಗಾಂಧೀಜಿ ಫೋಟೋಗೆ ಪುಷ್ಪನಮನ ಸಲ್ಲಿಸಲಾಯಿತು. ರೈಲು ನಿಲ್ದಾಣದ ವ್ಯವಸ್ಥಾಪಕ ಎ.ಎಲ್.ನಾಗರಾಜ್ ಮತ್ತು ಸಿಬ್ಬಂದಿ ಜತೆಗಿದ್ದರು.