ರಾಹುಲ್‌ಗಾಂಧಿ ತುಮಕೂರಿಗೆ ಬರೊದು ಗೊತ್ತಿಲ್ಲ; ಡಾ.ಜಿ.ಪರಮೇಶ್ವರ

10TMK_RG_
Published on

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ವರಿಷ್ಠ ರಾಹುಲï‌ಗಾಂಧಿ ಸ್ಪರ್ಧೆ ಬಗ್ಗೆ ಟಿ.ಬಿ.ಜಯಚಂದ್ರ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಮೀಸಲು ಕ್ಷೇತ್ರಗಳನ್ನು ಬಿಟ್ಟು ದೇಶದ ಉಳಿದೆಲ್ಲಾ ಕ್ಷೇತ್ರಗಳಲ್ಲಿಯೂ ರಾಹುಲ್‌ಗಾಂಧಿ ಸ್ಫರ್ಧೆ ಮಾಡಬಹುದು. ನಾವ್ಯಾರು ಅವರನ್ನು ಆಹ್ವಾನಿಸುವ ಅಗತ್ಯವಿಲ್ಲ ಅವರು ಬಯಸಿದರೆ ನಾವು ಬೇಡ ಎನ್ನುತ್ತೇವೆಯೇ ಎಂದರು.

ಟಿ.ಬಿ.ಜಯಚAದ್ರ ಅವರು ಹಿರಿಯ ನಾಯಕರು, ದೆಹಲಿ ವಿಶೇಷ ಪ್ರತಿನಿಧಿ ಅವರಿಗೆ ಈ ಬಗ್ಗೆ ಮಾಹಿತಿ ಇರಬಹುದು ಅವರು ಬಂದರೆ ನಮ್ಮ ಸಹಮತ ಇದ್ದೇ ಇರುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net