

ಸೋರಲಮಾವು ಶ್ರೀಹರ್ಷ
ತುಮಕೂರು: ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಜಗ್ಗೇಶ್ ಈವರೆಗೆ ಬಿಡುಗಡೆಯಾಗಿರುವ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ನಯಾಪೈಸೆಯನ್ನು ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ನೀಡದಿರುವುದು ಅಚ್ಚರಿ ಮೂಡಿಸಿದೆ.
2022 ಆಗಸ್ಟ್ನಲ್ಲಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದ ಜಗ್ಗೇಶ್ ಮೂಲತಃ ತುರುವೇಕೆರೆ ತಾಲೂಕು ಮಾಯಸಂದ್ರದವಾಗಿದ್ದು ಅವರ ಸ್ವಗ್ರಾಮ ಸೇರಿದಂತೆ ಜಿಲ್ಲೆಯ ಯಾವೊಂದು ಕಾಮಗಾರಿಗಳಿಗೂ ಈವರೆಗೆ ಅನುದಾನ ನೀಡಿಲ್ಲ.
ಜಗ್ಗೇಶ್ ತುಮಕೂರು ಜಿಲ್ಲೆಯನ್ನೇ ಅವರ ನೋಡಲ್ ಜಿಲ್ಲೆಯಾಗಿ ಘೋಷಿಸಿಕೊಂಡಿದ್ದು ಅವರ ಅನುದಾನ ತುಮಕೂರು ಜಿಲ್ಲೆಯಿಂದಲೇ ಬಿಡುಗಡೆಯಾಗುತ್ತಿದೆ. ಈವರೆಗೆ ಬಿಡುಗಡೆಯಾಗಿರುವ 2.50ಕೋಟಿ ರೂ. ಅನುದಾನದಲ್ಲಿ ಯಾವೊಂದು ಕಾಮಗಾರಿಯೂ ಜಿಲ್ಲೆಯಲ್ಲಿಲ್ಲ.
ಸಂಸದರ ಆದರ್ಶ ಗ್ರಾಮವಾಗಿ ತುರುವೇಕೆರೆ ತಾಲೂಕು ಮಾಯಸಂದ್ರ ಆಯ್ಕೆಮಾಡಿಕೊಂಡಿರುವ ಜಗ್ಗೇಶ್ ಈವರೆಗೂ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ನಯಾಪೈಸೆಯನ್ನು ಈ ಗ್ರಾಮಗಳಿಗೆ ನೀಡಿಲ್ಲ ಎಂಬುದು `ವಿಜಯವಾಣಿ' ಪತ್ರಿಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೀಡಿದ ಅಂಕಿ, ಅಂಶದಿAದಲೇ ಬಯಲಾಗಿದೆ.
ಬೆಂಗಳೂರಿನ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.57ರ ಕಗ್ಗದಾಸಪುರದಲ್ಲಿ ಒಂದು ರಸ್ತೆಗೆ 50 ಲಕ್ಷ ರೂ., ಮಾರಗೊಂಡನಹಳ್ಳಿಗೆ 44.91 ಲಕ್ಷ ರೂ., ಕಲುಬುರಗಿ ಜಿಲ್ಲೆಗೆ 10 ಲಕ್ಷ ರೂ., ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆನ್ನಾಗರ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ 24 ಕಾಮಗಾರಿಗಳಿಗೆ 1.19ಕೋಟಿ ರೂ. ನೀಡಿರುವುದು ಸ್ವಂತ ಜಿಲ್ಲೆ ತುಮಕೂರಿನ ಜನರಿಗೆ ನಿರಾಸೆ ತಂದಿದೆ.
ಬೆಂಗಳೂರಿನ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.57ರ ಕಗ್ಗದಾಸಪುರ ವ್ಯಾಪ್ತಿಯ 19ನೇ ಅಡ್ಡ ರಸ್ತೆಯಲ್ಲಿ 4.20ಕಿಮೀ ಸಿಸಿ ರಸ್ತೆ ಕಾಮಗಾರಿಗೆ ತಲಾ 5 ಲಕ್ಷದ ಹತ್ತು ಪ್ಯಾಕೇಜ್‌ಗಳನ್ನು ಮಾಡಿ ಬರೋಬ್ಬರಿ 50 ಲಕ್ಷ ರೂ. ಅನುದಾನವನ್ನು ನೀಡಿದ್ದಾರೆ.
ಮಾಜಿ ರಾಜ್ಯಸಭಾ ಸದಸ್ಯರ ಅವಧಿಯಲ್ಲಿ ಖರ್ಚಾಗದೆ ಉಳಿದಿದ್ದ 25 ಲಕ್ಷ ರೂ., ಅನುದಾನವನ್ನು ಬೆಂಗಳೂರಿಗೆ ನೀಡಿದ್ದಾರೆ. ಯಲಹಂಕ ತಾಲೂಕು ಪಾಕೇಗೌಡನಪಾಳ್ಯಕ್ಕೆ 5 ಲಕ್ಷ ರೂ., ರಾಜನಕುಂಟೆಗೆ 5 ಲಕ್ಷ ರೂ., ಹೆಸರುಘಟ್ಟಕ್ಕೆ 5 ಲಕ್ಷ ರೂ., ಪಾಕೇಗೌಡನಪಾಳ್ಯಕ್ಕೆ 5 ಲಕ್ಷ ರೂ., ಬೆಂಗಳೂರು ಉತ್ತರ ಗೋಪಾಲಪುರಕ್ಕೆ 5 ಲಕ್ಷ ರೂ. ಅನುದಾನವನ್ನು ಹಂಚಿದ್ದಾರೆ.
ಬೆAಗಳೂರು ದಕ್ಷಿಣ ಹುಲಿಮಂಗಲ ಗ್ರಾಪಂ ವ್ಯಾಪ್ತಿಯ ಮಾರಗೊಂಡನಹಳ್ಳಿಗೆ 44.91 ಲಕ್ಷ ರೂ., ಯಶವಂತಪುರ ಕ್ಷೇತ್ರದ ಲಕ್ಕಪ್ಪೆ ಗ್ರಾಮಕ್ಕೆ 4.99 ಲಕ್ಷ ರೂ. ಅನುನಾನ ನೀಡಿದ್ದಾರೆ.
ಕಲುಬುರಗಿ ಜಿಲ್ಲೆಯ ಫಿಸಾಡಿ ವಿವಿಧೋದ್ದೇಶ ಸೇವಾ ಸಂಘಕ್ಕೆ 10 ಲಕ್ಷ ರೂ., ಹೀಗೆ.. ಅವರಿಗೆ ಲಭ್ಯವಾದ 2.50 ಕೋಟಿ ರೂ. ಅನುದಾನ ಬಹುಪಾಲು ಬೆಂಗಳೂರು ಪಾಲಾಗಿದೆ.
ಜಗ್ಗೇಶ್ ಅವರ ಅನುದಾನದಲ್ಲಿ ತುಮಕೂರು ಜಿಲ್ಲೆಯಲ್ಲಿ ಬಳಕೆಯಾಗಿರುವ 5 ಲಕ್ಷ ರೂ. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯ ವಿಭಾಗದ ಕಚೇರಿ ನಿರ್ವಹಣೆಗೆ ಮಾತ್ರ ಹಾಗಾಗಿ, ಸಂಸದರ ಆದರ್ಶ ಗ್ರಾಮದ ಮಾಯಸಂದ್ರ, ಜಗ್ಗೇಶ್ ಹುಟ್ಟೂರು ಆನಡಗು ಸೇರಿದಂತೆ ತುಮಕೂರು ಜಿಲ್ಲೆಯ ಯಾವೊಂದು ಗ್ರಾಮಕ್ಕೂ ಅವರ ಅನುದಾನ ಬಳಕೆಯಾಗಿಲ್ಲ ಎಂಬುದು ಅಚ್ಚರಿಗೆ ಕಾರಣವಾಗಿದೆ.