

ತುಮಕೂರು: ಕುಣಿಗಲ್ ತಾಲೂಕು ಹೊಸಪಾಳ್ಯದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಬೀಗ ಮುರಿದು ನಗದು ಸೇರಿದಂತೆ ಲಕ್ಷಾಂತರೂ ಮೌಲ್ಯದ ಚಿನ್ನಾಭರಣ ದೋಚಲಾಗಿದೆ.
ದೇವಾಲಯದ ಅರ್ಚಕ ಚಂದ್ರಯ್ಯ ಎಂದಿನAತೆ ಮಂಗಳವಾದ ದೇವಾಲಯಕ್ಕೆ ಪೂಜೆಗೆ ಬಂದಾಗ ಕೃತ್ಯ ಬದಲಾಗಿದೆ.ಊರಿನ ಹೊರಗಡೆಯ ತಿಪ್ಪೆ ಗುಂಡಿಯಲ್ಲಿ ದೇವಾಲಯಕ್ಕೆ ಸೇರಿದ ಬಾಣ ಗಂಟೆಯಲ್ಲಿ ಕಟ್ಟಿದ ಬೆಳ್ಳಿಯ 4 ನಾಗಾಭರಣ ಹಾಗೂ 4 ಛತ್ರಿಗಳು ಪತ್ತೆಯಾಗಿವೆ.
ದೇವಸ್ಥಾನದ ಬಾಗಿಲ ಬೀಗವನ್ನು ಆರೆಯಿಂದ ಮೀಟಿ ಬೀಗ ಹೊಡೆದಿರುವ ಖದೀಮರು ಹರಕೆ ಹುಂಡಿ ಹಾಗೂ ಗಾಡ್ರೇಜ್ ಬೀರು ಹೊಡೆದು. ಬೀರುನಲ್ಲಿ ಇದ್ದ 4 ಬೆಳ್ಳಿ ಛತ್ರಿ, 4 ಬೆಳ್ಳಿ ನಾಗಾಭರಣ ಹಾಗೂ ದೇವರ ಮೇಲೆ ಹಾಕಿದ್ದ ಚಿನ್ನದ ತಾಳಿಯನ್ನು ಹಾಗೂ ಹುಂಡಿಯಲ್ಲಿ ಇದ್ದ ಹಣ ದೋಚಿದ್ದಾರೆ.