ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು; ಖಾಸಗಿ ಲಾಬಿಗೆ ಮಣಿಯಲ್ಲ ಎಂದ ಪರಮೇಶ್ವರ

15_PP
Published on

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನೀಡಬೇಕು ಎಂದು ಎಲ್ಲಾ ಶಾಸಕರು ಸಿಎಂಗೆ ಬೇಡಿಕೆ ಸಲ್ಲಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಭರವಸೆ ನೀಡಿದರು.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೇ ಖಾಸಗಿ ವೈದ್ಯಕೀಯ ಕಾಲೇಜು ನಡೆಸುತ್ತಿದ್ದೇನೆ, ನಾನೇ ಸಿಎಂ ಬಳಿ ಸರ್ಕಾರಿ ಕಾಲೇಜಿಗೆ ಬೇಡಿಕೆಯಿಟ್ಟಿದ್ದೇನೆ ಹಾಗಾಗಿ, ಸರ್ಕಾರಿ ಕಾಲೇಜು ವಿರುದ್ಧ ಯಾವುದೇ ಲಾಬಿಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net