

ತುಮಕೂರು: ಸೇವೆ ಖಾಯಮಾತಿಗೆ ಆಗ್ರಹಿಸಿ ತರಗತಿ ಭಹಿಷ್ಕರಿಸಿ ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಹೋರಾಟ 22ನೇ ದಿನಕ್ಕೆ ಕಾಲಿಟ್ಟಿದೆ.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ಕಡಲೆಕಾಯಿ ಮತ್ತು ಹಣ್ಣುಗಳನ್ನು ಮಾರಾಟ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದರು.
ಅತಿಥಿ ಉಪನ್ಯಾಸಕಿ ಚೈತ್ರಾ ಮಾತನಾಡಿ, ಸರ್ಕಾರಗಳು, ರಾಜಕೀಯ ನಾಯಕರು ವಿರೋಧ ಪಕ್ಷದಲ್ಲಿದ್ದಾಗ ಮಾತನಾಡುವುದೇ ಬೇರೆ, ಸರ್ಕಾರ ನಡೆಸುತ್ತಿರುವಾಗ ಮಾತನಾಡುವುದೇ ಬೇರೆ ಆಗಬಾರದು. ಯಾವಾಗಲೂ ಒಂದೇ ರೀತಿಯಾಗಿ ವರ್ತಿಸಬೇಕು.
ಕನಿಷ್ಠ ಸೌಲಭ್ಯಗಳಿಲ್ಲದೆ ದುಡಿಯುತ್ತಿರುವ ಏಕೈಕ ವರ್ಗ ಎನ್ನಿಸಿರುವ ಅತಿಥಿ ಉಪನ್ಯಾಸಕರು ಕಳೆದ 22ದಿನದಿಂದಲೂ ಬೀದಿಯಲ್ಲಿ ಕುಳಿತಿದ್ದರೂ ಸರ್ಕಾರ ನಮ್ಮ ಸಮಸ್ಯೆ ಬಗೆಹರಿಸದಿರುವುದು ವ್ಯವಸ್ಥೆಯ ಬಗ್ಗೆ ನಂಬಿಕೆಯನ್ನೇ ಕಳೆದಿದೆ. ಸೇವೆ ಖಾಯಮಾತಿ ಮಾಡುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.
ಸAಘದ ಜಿಲ್ಲಾಧ್ಯಕ್ಷ ಡಾ.ಕೆ.ಎಚ್.ಧರ್ಮವೀರ ಮಾತನಾಡಿದರು. ಅತಿಥಿ ಉಪನ್ಯಾಸಕರುಗಳಾದ ಡಾ.ಸವಿತ, ಡಾ.ಶಿವಣ್ಣತಿಮ್ಲಾಪುರ್, ಡಾ.ಎಂ.ಟಿ.ಮಲ್ಲಿಕಾರ್ಜುನ್. ಕಾಂತರಾಜು, ಶಂಕರಪ್ಪ, ಟಿ.ಆರ್.ಗಿರಿಜಮ್ಮ ಮತ್ತಿತರರು ಇದ್ದರು.