ಎಸ್‌ಎಸ್‌ಐಟಿ ಹಾಸ್ಟೆಲ್‌ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮ*ತ್ಯೆ

1111
Published on

ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ ಒಡೆತನದ ನಗರದ ಶ್ರೀಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿರುವ ವಿದ್ಯಾರ್ಥಿನಿಯರ ನಿಲಯದಲ್ಲಿ ಇಂಜಿನಿಯರಿಂಗ್ ಎರಡನೇ ವರ್ಷದ ವಿದ್ಯಾರ್ಥಿನಿ ಬನಸಿರಿ(20) ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಶಿವಪುರದ ಬನಸಿರಿ ಎಸ್‌ಎಸ್‌ಐಟಿ ಕಾಲೇಜಿನಲ್ಲಿ ತೃತೀಯ ಸೆಮಿಸ್ಟರ್ ಟೆಲಿಕಾಂ ವಿಭಾಗದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದರು. ಕಾಲೇಜು ಆವರಣದಲ್ಲಿಯೇ ಇರುವ ಹಾಸ್ಟೆಲ್‌ನ್ನ 101ಬಿ ಕೋಠಡಿಯಲ್ಲಿ ತಂಗಿದ್ದರು.

ಮಧ್ಯಾಹ್ನ 2ರ ಸಮಯದಲ್ಲಿ ಊಟ ಮುಗಿಸಿಕೊಂಡು ವಾಪಸ್ ಕೊಠಡಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ನೇಹಿತರು ನೋಡಿ ವಾರ್ಡನ್‌ಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.

ತಿಲಕ್‌ಪಾರ್ಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net