ಜಿಲ್ಲಾಸ್ಪತ್ರೆ ಟ್ರಾಮಾ ಸೆಂಟರ್ ಮುಂದೆ ಶವವಿಟ್ಟು ಪ್ರತಿಭಟನೆ

DDDD
Published on

ತುಮಕೂರು: ಅಪಘಾತದಲ್ಲಿ ಗಾಯಗೊಂಡ ಯುವಕನ ಸಾವಿಗೆ ವೈದ್ಯರ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ ಕಾರಣ ಎಂದು ಆರೋಪಿಸಿ ಆತನ ಸಂಬಂಧಿಕರು ಜಿಲ್ಲಾ ಆಸ್ಪತ್ರೆಯ ನೂತನ ಟ್ರಾಮಾ ಕೇರ್ ಸೆಂಟರ್ ಬಳಿ ಆಕ್ರೋಶ ಹೊರಹಾಕಿರುವ ಪ್ರಸಂಗ ಮಂಗಳವಾರ ರಾತ್ರಿ ನಡೆದಿದೆ.

ಡಿ.17ರಂದು ರಾತ್ರಿವೇಳೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ಅಗ್ರಹಾರ ಬಳಿ ಬೈಕ್‌ನಿಂದು ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಯೋಗೀಶ್ (32) ಎಂಬಾತ ಬೆಂಗಳೂರಿನ ನಿಮ್ಹಾನ್ಸ್ ಆಸ್ಪçತೆಯಲ್ಲಿ ಚಿಕಿತ್ಸೆ ಪಡೆದು ತುಮಕೂರಿನ ಜಿಲ್ಲಾ ಆಸ್ಪತ್ರೆಯ ಟ್ರಾಮಾ ಕೇರ್‌ಸೆಂಟರ್‌ಗೆ ಮುಂದುವರೆದ ಚಿಕಿತ್ಸೆಗೆ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದರು.

ಮಂಗಳವಾರ ಸಂಜೆ ವೇಳೆಗೆ ಎಳನೀರು ಕುಡಿದ ಬಳಿಕ ಯೋಗೀಶ್ ಪ್ರಜ್ಞಾಹೀನನಾಗಿ ಸಾವನ್ನಪ್ಪಿದ್ದು ಸೂಕ್ತ ಚಿಕಿತ್ಸೆ ನೀಡದ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷÈವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಲ್ಲದೆ, ಚಿಕಿತ್ಸೆ ನೀಡಿದ ನರರೋಗ ತಜ್ಞ ವೈದ್ಯರು ಬರುವವರೆಗೆ ಮೃತದೇಹ ಎತ್ತಲು ಬಿಡುವುದಿಲ್ಲವೆಂದು ಪಟ್ಟುಹಿಡಿದು ಕುಳಿತರು.

ಪೊಲೀಸರ ಹರಸಾಹಸ: ಈ ವೇಳೆ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕಿ ಡಾ.ವೀಣಾ ಹಾಗೂ ಪೊಲೀಸ್ ಅಧಿಕಾರಿಗಳು ಮೃತನ ಕುಟುಂಬಸ್ಥರನ್ನು ಮನವೊಲಿಸಲು ಮುಂದಾದರಾದರೂ ವೈದ್ಯರು ಬರುವವರೆಗೆ ಮೃತದೇಹ ಮುಟ್ಟಲು ಅವಕಾಶ ಕೊಡುವುದಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

ಅಂತುಇಂತೂ ಕುಟುಂಬಸ್ಥರನ್ನು ಸಮಾಧಾನ ಮಾಡಿ ಆ ರೀತಿ ಅನುಮಾನಗಳಿದ್ದರೆ ವೈದ್ಯರ ವಿರುದ್ಧ ದೂರು ನೀಡುವಂತೆ ಮನವೊಲಿಸಿ ಕೊನೆಗೆ ಮೃತದೇಹವನ್ನು ಶವಾಗಾರಕ್ಕೆ ಪೊಲೀಸರು ಸಾಗಿಸಿದರು.

ಗ್ರಾಮಾಂತರ ಠಾಣೆಯಲ್ಲಿ 304ಎ ಪ್ರಕರಣ ದಾಖಲಾಗಿದ್ದು ವೈದ್ಯರ ವಿರುದ್ಧ ಕುಟುಂಬಸ್ಥರು ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net