ತಿಪಟೂರಿನಲ್ಲಿ ಮಂಡ್ಯ ಯುವಕನ ಕೊಲೆ

Mahendra. (34)
Published on

ತಿಪಟೂರು: ನಗರದ ಕೆ.ಆರ್.ಬಡಾವಣೆಯಲ್ಲಿ ಶನಿವಾರ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಹೊಸಕೆರೆಯ ಮಹೇಂದ್ರ(34) ಎಂಬುವವನ ಮೃತದೇಹ ಪತ್ತೆಯಾಗಿದ್ದು ಕೊಲೆ ಎಂದು ಶಂಕಿಸಲಾಗಿದೆ.

ಶನಿವಾರ ಬೆಳಗ್ಗೆ ಈತನ ತೊಡೆಯ ಭಾಗದಲ್ಲಿ ಚಾಕುವಿನಿಂದ ಇರಿಯಲಾಗಿದ್ದು ತೀವ್ರ ರಕ್ತಸ್ರಾವದಿಂದ ಬಿದ್ದು ಒದ್ದಾಡಿದ್ದಾನೆ, ಚೀರಾಟ ಗಮನಿಸಿದ ಸ್ಥಳೀಯರು 108 ಆಂಬುಲೆನ್ಸ್ಗೆ ಕರೆ ಮಾಡಿದರೂ ಪ್ರಾಣ ಹೋಗಿದೆ.

ಮೃತನ ಬಳಿಯಿಂದ ಬ್ಯಾಗ್‌ನಲ್ಲಿದ್ದ ಕಾಗದಗಳಿಂದ ವಿಳಾಸ ಪತ್ತೆಯಾಗಿದೆ, ನಗರಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net