

ತುಮಕೂರು: ಮಾರುಕಟ್ಟೆಯಲ್ಲಿ ಮಾರಲು ರೈತರು ತಾವು ಬೆಳೆದ ಅಡಕೆಯನ್ನು ತೆಗೆದುಕೊಂಡು ಹೋಗುವಾಗ ಲಾರಿಯನ್ನು ತಡೆದು ವಶಪಡಿಸಿಕೊಂಡಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಕಚೇರಿ ಎದುರು ರೈತರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ಸಾರಿಗೆ ವೆಚ್ಚ ತಗ್ಗಿಸುವ ದೃಷ್ಠಿಯಿಂದ ಗುಬ್ಬಿ ತಾಲೂಕು ಅಮ್ಮನಘಟ್ಟ ಗ್ರಾಮದ ರೈತರು 12 ಟನ್ ಅಡಕೆಯನ್ನು ಲಾರಿಯನ್ನು ತುಂಬಿಕೊAಡು ಮಂಗಳವಾರ ಶಿವಮೊಗ್ಗದ ಅಡಕೆ ಮಂಡಿಗೆ ಹೊರಟಿದ್ದರು. ತಿಪಟೂರು ಹೊರವಲಯದಲ್ಲಿ ಲಾರಿಯನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ಸೆ.23ರAದು ವಶಪಡಿಸಿಕೊಂಡಿದ್ದ ಲಾರಿಯನ್ನು ದಾಖಲೆಗಳನ್ನು ನೀಡಿದರೂ ಬಿಡದ ಹಿನ್ನೆಲೆಯಲ್ಲಿ ಬೇಸತ್ತ ನೂರಾರು ರೈತರು ತಿಪಟೂರು ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆಗೆ ಮುಂದಾಗಿದ್ದಾರೆ.