ಮದ್ಯ ಕೊಡಿಸಲಿಲ್ಲವೆಂದು ಸ್ನೇಹಿತನಿಗೆ ಹಿಗ್ಗಾಮುಗ್ಗಾ ಥಳಿತ; ವೀಡಿಯೋ ವೈರಲ್, ಆರೋಪಿಗಳ ಅಂದರ್

Alcohal-Web
Published on

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನಲ್ಲಿ ಯುವಕರ ಗುಂಪೊAದು ಮತ್ತೊಬ್ಬ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಲ್ಲೆ ನಡೆಸಿರುವ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹುಳಿಯಾರಿನ ಪ್ರಾರ್ಥನಾ ಮಂದಿರದ ಪಕ್ಕದಲ್ಲಿ ಯುವಕನೋರ್ವನ ಕೊರಳ ಪಟ್ಟಿ ಹಿಡಿದು ಎಳೆಂಟು ಮಂದಿ ಎಳೆದಾಡಿಕೊಂಡು ಮನಸ್ಸೋ, ಇಚ್ಚೆ ಹಿಗ್ಗಾಮುಗ್ಗಾ ಥಳಿಸಿ, ಅಶ್ಲೀಲವಾಗಿಯೂ ನಿಂದಿಸಿರುವ ದೃಶ್ಯ ವೀಡಿಯೋದಲ್ಲಿದೆ.

ಸೈಯದ್ ಸತ್ತಾರ್, ಮಧು, ಆಕಾಶ, ದರ್ಶನ್, ನವೀನ್ ಕುಮಾರ, ದೇಕೇರಿ, ಅಭಿಷೇಕ, ವಾಸಿಂ ಮತ್ತು ಶಶಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮದ್ಯ ಕೊಡಿಸಲಿಲ್ಲವೆಂದು ಹಲ್ಲೆ!?
ಹುಳಿಯಾರಿನ ಇಂದಿರಾನಗರದ ಪೆಯಿಂಟ್ ಕೆಲಸ ಮಾಡುವ ಕೀರ್ತಿನಾಯಕ್ ತನ್ನ ಸ್ನೇಹಿತರಾದ ಶಿವಣ್ಣ ಮತ್ತು ಜಬಿ ಜತೆ ಮದ್ಯಪಾನ ಮಾಡುವಾಗ ಹುಳಿಯಾರಿನ ವಠಾರದ ವಾಸಿ ಸೈಯದ್ ಸತ್ತಾರ್ ಬಂದು ತನಗೂ ಮದ್ಯ ಕೊಡಿಸುವಂತೆ ಕೇಳಿಕೊಂಡಿದ್ದಾನೆ. ಹಣವಿಲ್ಲವೆಂದು ಮದ್ಯ ಕೊಡಿಸದೆ ನಿರಾಕರಿಸಿದಕ್ಕೆ ಮಾತಿನ ಚಕಮಕಿ ನಡೆದಿದೆ. ಇದೇ ಉz್ದೆÃಶದಿಂದ ಆ. 23 ಸತ್ತಾರ್ ತನ್ನ 8 ಮಂದಿ ಸಹಚರರೊಂದಿಗೆ ಬಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net