

ಬಂಟ್ವಾಳ: ತುಂಬೆಯ ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕದ ವಾರ್ಷಿಕೋತ್ಸವ ಹಾಗೂ ಮಹಾಸಭೆಯು ತುಂಬೆ ರಾಮಲ್‌ಕಟ್ಟೆಯಲ್ಲಿ ನಡೆಯಿತು.
ಬೆಳಗ್ಗೆ ಸಂಘದ ಅಧ್ಯಕ್ಷ ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಜೆ ಮಹಾಸಭೆಯನ್ನು ರಾರಾಸಂ ಫೌಂಡೇಶನ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ್ ಉದ್ಘಾಟಿಸಿದರು.
ಮಂಗಳೂರಿನ ವಕೀಲ ರಾಮಪ್ರಸಾದ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸಂಘದ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಲತಾ ಗೋಪಾಲ ಗೋವಿಂತೊಟ, ಉಪಾಧ್ಯಕ್ಷೆ ಪ್ರಿಯಾ ಸತೀಶ್ ಉಪಸ್ಥಿತರಿದ್ದರು. ರಂಗಭೂಮಿ ಕಲಾವಿದ ನಿತಿನ್ ತುಂಬೆ, ಕೃಷಿಕ ಮಹಿಳೆ ಹೊನ್ನಮ್ಮ, ಕೂಸಪ್ಪ ಮೂಲ್ಯ, ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ನಿಧಿಷಾ, ಸಂಜನಾ ಅವರನ್ನು ಗೌರವಿಸಲಾಯಿತು.
ಸಂಘಟನಾ ಕಾರ್ಯದರ್ಶಿ ಭಾಸ್ಕರ್ ಕುಲಾಲ್ ಸ್ವಾಗತಿಸಿದರು. ಗೌರವ ಸಲಹೆಗಾರ ಶೇಷಪ್ಪ ಮಾಸ್ಟರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಾನಂದ ಕುಲಾಲ್ ವರದಿ ಮಂಡಿಸಿದರು. ಕಾರ್ಯದರ್ಶಿ ಸಂದೀಪ್ ಮುದಲ್ಮೆ ವಂದಿಸಿದರು. ಸೌಮ್ಯ ದಿವಾಕರ ಹಾಗೂ ಭಾರತಿ ಶೇಷಪ್ಪ ನಿರೂಪಿಸಿದರು.