

ಬಂಟ್ವಾಳ: ತಾಲೂಕುಮಟ್ಟದ ಪ್ರಾಚ್ಯ ಪ್ರಜ್ಞೆ ಸ್ಪರ್ಧಾ ಕಾರ್ಯಕ್ರಮ ತುಂಬೆ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆಯಿತು.
ಪ್ರಾಂಶುಪಾಲ ವಿ.ಸುಬ್ರಹ್ಮಣ್ಯಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಚ್ಯ ಪ್ರಜ್ಞೆಯ ಅರಿವನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡು, ಗುಡಿ ಗೋಪುರಗಳ, ಕೋಟೆ ಕೊತ್ತಲಗಳ, ಹಿಂದಿನ ಆಳ್ವಿಕೆಗಳ ರಾಜರ ಬಗ್ಗೆ ತಿಳಿದುಕೊಂಡು ಮುಂದಿನ ಪೀಳಿಗೆಗೆ ಈ ಜ್ಞಾನ ಪಸರಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕಿ ವಿದ್ಯಾ, ಬಿಐಇಆರ್‌ಟಿ ಸುರೇಖಾ, ಸಿಆರ್‌ಪಿಗಳಾದ ಪ್ರೇಮಲತಾ ಮತ್ತು ಆಂಜನೇಯ ಆಲದ ಕಟ್ಟಿ, ತುಂಬೆ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ಬಿ.ರೈ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಅನಂತಪದ್ಮನಾಭ, ಸುಬ್ರಹ್ಮಣ್ಯ ರಾವ್, ಮಹೇಶ್, ಕಿಶೋರ್, ಪುಷ್ಪಲತಾ, ಮುರಳಿ ಕೃಷ್ಣರಾವ್, ಸತ್ಯ ಶಂಕರ ಭಾಗವಹಿಸಿದ್ದರು.
18 ಪ್ರೌಢಶಾಲಾ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು. ಪ್ರೌಢಶಾಲಾ ಶಿಕ್ಷಕಿ ರೇಖಾ ಸ್ವಾಗತಿಸಿದರು. ಶಿಕ್ಷಕ ರಮೇಶ್ ನಿರೂಪಿಸಿದರು.