ಶಿವಮೊಗ್ಗ, ಬೆಂಗಳೂರು ದಕ್ಷಿಣ ಚಾಂಪಿಯನ್​

ಬೆಂಗಳೂರು ವಿಭಾಗ ಮಟ್ಟದ 14 ಹಾಗೂ 17 ವರ್ಷ ವಯೋಮಿತಿ ಕಬಡ್ಡಿ ಪಂದ್ಯಾವಳಿ
Bangalore Divisional U17 Boys and Girls Kabaddi championship won by Shimogga team held in Tiptur.
ತಿಪಟೂರಿನ ಕಲ್ಪತರು ಕ್ರೀಡಾಂಗಣಲ್ಲಿ ನಡೆದ ಬೆಂಗಳೂರು ವಿಭಾಗ ಮಟ್ಟದ 17 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಶಿವಮೊಗ್ಗ ಬಾಲಕ ಹಾಗೂ ಬಾಲಕಿಯರ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದವು.
Published on: 

ತಿಪಟೂರು: ಶಿವಮೊಗ್ಗ ಬಾಲಕ ಹಾಗೂ ಬಾಲಕಿಯರ ತಂಡವು ಬೆಂಗಳೂರು ವಿಭಾಗ ಮಟ್ಟದ 17 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಕಬಡ್ಡಿ ಪಂದ್ಯವಾಳಿಯ ಚಾಂಪಿಯನ್​ ಆಗಿ ಹೊರಹೊಮ್ಮಿವೆ. 14 ವರ್ಷ ವಯೋಮಿತಿ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ತಂಡ ಬಾಲಕ, ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ವಿದ್ಯಾಪಿಠ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗ ಮಟ್ಟದ 14 ಹಾಗೂ 17 ವರ್ಷ ವಯೋಮಿತಿಯ ಬಾಲಕ, ಬಾಲಕಿಯರ ಕಬಡ್ಡಿ ಚಾಂಪಿಯನ್​ಶಿಪ್​ನಲ್ಲಿ ಶುಕ್ರವಾರ ಶಿವಮೊಗ್ಗ ಹಾಗೂ ಬೆಂಗಳೂರು ದಕ್ಷಿಣ ತಂಡ ಪ್ರಶಸ್ತಿ "ಡಬಲ್​' ಸಾಧನೆಗೈದವು.

17 ವರ್ಷ ವಯೋಮಿತಿ ವಿಭಾಗದ ಬಾಲಕರ ಫೈನಲ್​ನಲ್ಲಿ 24&18 ರಿಂದ ಆತಿಥೇಯ ತುಮಕೂರು ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ಶಿವಮೊಗ್ಗ ಪರ ತರುಣ್​, ಪ್ರಶಾಂತ್​, ಯಶವಂತ್​ ಉತ್ತಮ ಪ್ರದರ್ಶನ ತೋರಿದರು. ಸಮದ್​, ನಿಶಾಂತ್​, ಮಹಮ್ಮದ್​ ರಕ್ಷಣೆಯಲ್ಲಿ ಮಿಂಚಿದರು.

ಬಾಲಕಿಯರ ವಿಭಾಗದ ಫೈನಲ್​ನಲ್ಲಿ ಶಿವಮೊಗ್ಗ ತಂಡ 45&20 ಅಂಕಗಳ ಅಂತರದಿಂದ ರಾಮನಗರ ತಂಡದ ವಿರುದ್ಧ ಜಯಭೇರಿ ಬಾರಿಸಿತು.

ಇನ್ನೂ 14 ವಯೋಮಾನದ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ತಂಡ ಪ್ರಶಸ್ತಿ ಡಬಲ್​ ಸಾಧನೆ ಮಾಡಿತು. ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ತಂಡ 22-17 ಅಂಕಗಳಿಂದ ಬೆಂಗಳೂರು ಉತ್ತರ ತಂಡವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿತ್ತು. ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ತಂಡ 26-10 ಅಂಕಗಳ ಅಂತರದಿಂದ ಬೆಂಗಳೂರು ಉತ್ತರ ತಂಡವನ್ನು ಮಣಿಸಿ ಚಾಂಪಿಯನ್​ ಆಗಿ ಹೊರಹೊಮ್ಮಿತು.

ತಿಪಟೂರಿನ ಕಲ್ಪತರು ಕ್ರೀಡಾಂಗಣಲ್ಲಿ ನಡೆದ ಬೆಂಗಳೂರು ವಿಭಾಗ ಮಟ್ಟದ 17 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಶಿವಮೊಗ್ಗ ಬಾಲಕ ಹಾಗೂ ಬಾಲಕಿಯರ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದವು.