ವಿವಿ ಜ್ಞಾನಸಿರಿ ಕ್ಯಾಂಪಸ್​ ಬಳಿ ಚಿರತೆ ಪ್ರತ್ಯಕ್ಷ!

ತೆಂಗಿನಮರ ಏರಿ ಕುಳಿತ ಚಿರತೆ
Leopard
ತುಮಕೂರು ವಿವಿ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
Published on: 

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್​ ಬಳಿ ಬೆಳ್ಳಂಬೆಳಗ್ಗೆ ಚಿರತೆ ಪ್ರತ್ಯಕ್ಷ$ವಾಗಿದೆ. ತೆಂಗಿನಮರ ಏರಿ ಕುಳಿತ ಚಿರತೆ ಕೆಲಕಾಲ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು.

ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ಚಿರತೆ ಕಂಡು ಗ್ರಾಮಸ್ಥರು ಆತಂಕಗೊಂಡಿದ್ದರು. ಗುರುವಾರ ಬೆಳಗಿನ ಜಾವ ಮನೆಯೊಂದಕ್ಕೆ ನುಗ್ಗಿ ನುಗ್ಗಿ ಕೋಳಿ ಹಿಡಿದ ಚಿರತೆ ಬಳಿಕ ನಾಯಿಗಳು ಅಟ್ಟಿಸಿಕೊಂಡು ಬಂದಾಗ ಗಾಬರಿಯಿಂದ ತೆಂಗಿನ ಮರ ಏರಿ ಕುಳಿತುಕೊಂಡಿರಬಹುದು ಎನ್ನಲಾಗಿದೆ.

ಸ್ವ ರಕ್ಷಣೆಗಾಗಿ ತೆಂಗಿನಮರದಲ್ಲಿ ಕುಳಿತಿದ್ದನ್ನು ಕಂಡ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಕಾರ್ಯಾಚರಣೆಗೆ ಮುಂದಾಗಿತ್ತು. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಚಿರತೆ ತೆಂಗಿನಮರದಿಂದ ಇಳಿದು ಕ್ಷಣಾರ್ಧದಲ್ಲೇ ತಪ್ಪಿಸಿಕೊಂಡು ಮರೆಯಾಗಿದೆ.

ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ ಹಿನ್ನೆಲೆ ಬೋನು ಇರಿಸಿಲಾಗಿದೆ.

ಸ್ಥಳಕ್ಕೆ ಎಸಿಎ್​ ಪವಿತ್ರ, ಆರ್​ಎ್​ಒ ಬಸವರಾಜು, ಎಆರ್​ಎ್​ಒ ರಬ್ಬಾನಿ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಚಿರತೆ ಸೆರೆಗೆ ಪ್ರಯತ್ನ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net