ರೆಡ್​ಕ್ರಾಸ್​ ಮತ ಎಣಿಕೆ, ಫಲಿತಾಂಶ ಸಸ್ಪೆನ್ಸ್​ !

ಟಿ.ಬಿ.ಶೇಖರ್​ ಬಣ ಮೇಲುಗೈ
INdian Redcross Society Tumakuru District Unit Election Counting
ತುಮಕೂರಿನಲ್ಲಿ ಭಾರತೀಯ ರೆಡ್​ಕ್ರಾಸ್​ ಜಿಲ್ಲಾ ಶಾಖೆ ಆಡಳಿತ ಮಂಡಳಿ ಮತದಾನ ಎಣಿಕೆ ನಡೆಯಿತು.
Published on: 

ತುಮಕೂರು: ಭಾರತೀಯ ರೆಡ್​ಕ್ರಾಸ್​ ತುಮಕೂರು ಜಿಲ್ಲಾ ಶಾಖೆ ಆಡಳಿತ ಮಂಡಳಿಗೆ ಚುನಾವಣೆ ನಡೆದು 8 ತಿಂಗಳ ಬಳಿಕ ಮತ ಏಣಿಕೆ ನಡೆದಿದೆ. ಮತ ಎಣಿಕೆಯು ಹೈಕೋರ್ಟ್​ ಅಂತಿಮ ತೀರ್ಪಿಗೆ ಒಳಪಟ್ಟಿರುವುದರಿಂದ ಫಲಿತಾಂಶ ಪ್ರಕಟಿಸದೇ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯದ ಸುಪರ್ದಿಗೆ ಒಪ್ಪಿಸಲಾಗಿದೆ.

ಪ್ರತಿಷ್ಠಿತ ಭಾರತೀಯ ರೆಡ್​ ಕ್ರಾಸ್​ ತುಮಕೂರು ಜಿಲ್ಲಾ ಶಾಖೆ ಆಡಳಿತ ಮಂಡಳಿಯ 2026&27 ಹಾಗೂ 2027&28ನೇ ಎರಡು ವರ್ಷ ಅವಧಿಗೆ ಮಾರ್ಚ್​ 22 ರಂದು ಚುನಾವಣೆ ನಡೆದಿದ್ದು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದ 73 ಸದಸ್ಯರು ಹೈಕೋರ್ಟ್​ನಿಂದ ಪ್ರತ್ಯೇಕ ಮತಚಲಾವಣೆ ಅವಕಾಶ ಪಡೆದಿದ್ದರಿಂದ ಮತ ಎಣಿಕೆ ವಿಳಂಬವಾಗಿತ್ತು. 15 ಸ್ಥಾನಗಳಿಗೆ 30 ಅಭ್ಯರ್ಥಿಗಳ ಸ್ಪರ್ಧಿಸಿದ್ದು 8 ತಿಂಗಳ ಬಳಿಕ ಹೈಕೋರ್ಟ್​ ಆದೇಶದಂತೆ ಶನಿವಾರ (ನ.7ರಂದು) ಮತ ಎಣಿಕೆ ನಡೆಯಿತು. ಜಿಲ್ಲಾ ಸಹಕಾರ ಸಂಗಳ ಪ್ರಭಾರ ಉಪನಿಬಂಧಕ ಚಂದ್ರಶೇಖರ್​ ನೇತೃತ್ವದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1.30ರವರೆಗೆ ಮತ ಎಣಿಕೆ ಶಾಂತಿಯುತವಾಗಿ ನಡೆದಿದ್ದು ಹೈಕೋರ್ಟ್​ ಆದೇಶ ಹಿನ್ನೆಲೆಯಲ್ಲಿ ಫಲಿತಾಂಶವನ್ನು ಪ್ರಕಟಿಸಲಿಲ್ಲ.

ಖಜಾನೆಯಲ್ಲಿದ್ದ ಮತಪೆಟ್ಟಿಗೆ: ರೆಡ್​ಕ್ರಾಸ್​ ಸಂಸ್ಥೆಗೆ ಮಾ.22 ರಂದು ಚುನಾವಣೆ ನಡೆದಿದ್ದು ಮತಪೆಟ್ಟಿಗೆಯನ್ನು ಜಿಲ್ಲಾ ಖಜಾನೆಯಲ್ಲಿ ಭದ್ರವಾಗಿರಿಸಲಾಗಿತ್ತು. ಶನಿವಾರ ಬೆಳಗ್ಗೆ ಜಿಲ್ಲಾ ಸಹಕಾರ ಸಂಗಳ ಪ್ರಭಾರ ಉಪನಿಬಂಧಕ ಚಂದ್ರಶೇಖರ್​ ಎಲ್ಲಾ 30 ಅಭ್ಯರ್ಥಿಗಳ ಸಮ್ಮುಖದಲ್ಲಿ ಖಜಾನೆಯಿಂದ ಮತಪೆಟ್ಟಿಗೆಗಳನ್ನು ತಂದು ಬೆಳಗ್ಗೆ 9 ರಿಂದ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭಿಸಿದರು. ಮಧ್ಯಾಹ್ನ 1.30ಕ್ಕೆ ಮತ ಎಣಿಕೆ ಪೂರ್ಣಗೊಂಡಿದ್ದು ಹೈಕೋರ್ಟ್​ನಿಂದ ಮತದಾನ ಹಕ್ಕು ಪಡೆದಿದ್ದವರ ಪ್ರತ್ಯೇಕ ಮತ ಎಣಿಕೆ ಬಳಿಕ ಎಲ್ಲಾ ಮತಗಳನ್ನು ಕ್ರೂಢಿಕರಿಸಿ ಅತಿಹೆಚ್ಚು ಅಂಕಗಳನ್ನು ಪಡೆದ ಮೊದಲ 15 ಅಭ್ಯರ್ಥಿಗಳ ಮತಗಳ ಲೆಕ್ಕಾಚಾರ ಮಾಡಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವ ಪ್ರಕ್ರಿಯೆಯನ್ನು ಚುನಾವಣಾ ಸಿಬ್ಬಂದಿ ನಡೆಸಿದರು.

ಒಟ್ಟಾರೆ ಮತ ಎಣಿಕೆ ಪ್ರಕ್ರಿಯೆ ಸಂದರ್ಭದಲ್ಲಿ ರೆಡ್​ ಕ್ರಾಸ್​ ಜಿಲ್ಲಾ ಕಾರ್ಯದರ್ಶಿ ಡಿಎಚ್​ಒ ಡಾ.ಚಂದ್ರಶೇಕರ್​ ಉಸ್ತುವಾರಿ ವಹಿಸಿದ್ದರು.

ಪ್ರತ್ಯೇಕ ಮತ ಎಣಿಕೆ

ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದ 73 ಸದಸ್ಯರು ಹೈಕೋರ್ಟ್​ ಮೂಲಕ ಮತದಾನದ ಹಕ್ಕು ಪಡೆದಿದ್ದರು. ಮಾ.22 ರಂದು ನಡೆದ ಮತದಾನದಲ್ಲಿ 73 ಮಂದಿಯಲ್ಲಿ 62 ಸದಸ್ಯರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಮತಪತ್ರಗಳನ್ನು ಪ್ರತ್ಯೇಕವಾದ ಮತಪಟ್ಟಿಗೆಯಲ್ಲಿರಿಸಿ ಮತ ಚಲಾಯಿಸಲಾಗಿತ್ತು. ಕೊನೆಯಲ್ಲಿ ಈ ಮತಗಳ ಎಣಿಕೆ ಮಾಡಲಾಗಿದ್ದು ಒಟ್ಟು ಮತಗಳನ್ನು ಕ್ರೂಢಿಕರಿಸಿ 30 ಅಭ್ಯರ್ಥಿಗಳಲ್ಲಿ 15 ಸ್ಥಾನಗಳಲ್ಲಿ ಯಾರು ಹೆಚ್ಚು ಮತಗಳನ್ನು ಪಡೆದಿರುವ ಮೊದಲ 15 ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಕ್ಕೆ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಭಾರ ಡಿಆರ್​ಸಿಎಸ್​ ಪೂರ್ಣಗೊಳಿಸಿದರು.

ಶೇಖರ್​ ಬಣಕ್ಕೆ ಮೇಲುಗೈ

ಹೈಕೋರ್ಟ್​ ಆದೇಶ ಹಿನ್ನೆಲೆಯಲ್ಲಿ ಅಧಿಕೃತ ಲಿತಾಂಶ ಪ್ರಕಟಿಸಿಲ್ಲ. ಬದಲಿಗೆ ಮತ ಎಣಿಕೆ ವೇಳೆ ಹಾಜರಿದ್ದ ಅಭ್ಯರ್ಥಿಗಳು ತಾವು ಪಡೆದ ಮತಗಳ ಆಧರಿಸಿದ ಫಲಿತಾಂಶದಲ್ಲಿ 15 ಅಭ್ಯರ್ಥಿಗಳು ಗೆಲುವನ್ನು ಅಂದಾಜಿಸಲಾಗಿದೆ. ಈ ಬಾರಿ ಟಿ.ಬಿ.ಶೇಖರ್​ ಹಾಗೂ ಎಸ್​.ನಾಗಣ್ಣ ನೇತೃತ್ವದಲ್ಲಿ ಎರಡು ತಂಡಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಜಿದ್ದಾಜಿದ್ದಿ ಏರ್ಪಟ್ಟಿತ್ತು.

ಸಮಾಜಮುಖ ಚಿಂತಕರ ತಂಡದಿಂದ ಟಿ.ಬಿ.ಶೇಖರ್​ (442 ಮತ) , ಡಿ.ಆರ್​.ಮಲ್ಲೇಶಯ್ಯ (437ಮತ) , ರಾಕ್​ಲೈನ್​ರವಿಕುಮಾರ್​ (412 ಮತ) , ಆರ್​.ಕೃಷ್ಣಯ್ಯ (379 ಮತ), ಟಿ.ಸಿ.ಸ್ವರೂಪ್​ (372 ಮತ), ಟಿ.ಎಸ್​.ಕರುಣಾರಾಧ್ಯ (350 ಮತ), ಟಿ.ಕೆ.ಲಕ್ಷಿ$್ಮನಾರಾಯಣರೆಡ್ಡಿ (343) ಹಾಗೂ ಕೆ.ಎಸ್​.ಪಂಡಿತ್​ (322 ಮತ) ಜಯಗಳಿಸಿದ್ದಾರೆ.

ಇನ್ನೂ ಸೇವಾಭಿವೃದ್ಧಿ ತಂಡದಿಂದ ಡಾ.ಎಸ್​.ಪರಮೇಶ್​ (490 ಮತ), ಗಣೇಶ್​ ಎಂ.ಬಾವಿಕಟ್ಟೆ (430 ಮತ), ಎಸ್​.ಪಿ.ಚಿದಾನಂದ್​ (371 ಮತ), ಟಿ.ಆರ್​.ಲೋಕೇಶ್​ (350 ಮತ), ಟಿ.ಎಸ್​.ಬದರೀಶ್​ (344 ಮತ), ಎಸ್​.ನಾಗಣ್ಣ (341 ಮತ), ಎಂ.ಎನ್​.ಲೋಕೇಶ್​ (325 ಮತ) ಜಯಗಳಿಸಿದ್ದಾರೆ.