ಬೈಕ್​ಗೆ ಬಸ್​ ಡಿಕ್ಕಿ, ಅಜ್ಜಿ ಪಾರು !

ಎಸ್​ಎಸ್​ ಸ್ಕ್ವೇರ್​ನಲ್ಲಿ ಅಪಘಾತ
KSRTC Bus -Bike Accident in Tumakuru SS Square
ತುಮಕೂರಿನ ಎಸ್​ಎಸ್​ ಸ್ಕ್ವೇರ್​ನಲ್ಲಿ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿಯಿಂದ ದ್ವಿಚಕ್ರವಾಹನದಲ್ಲಿ ಹಿಂಬದಿ ಕುಳಿತಿದ್ದ ಅಜ್ಜಿ ಕೆಳಗೆ ಬಿದ್ದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ.
Published on: 

ತುಮಕೂರು: ಎಲ್​ಇಡಿ ಡಿಸ್​ಪ್ಲೇ ಬೋರ್ಡ್​ ಅಳವಡಿಸಿರುವ ಎಸ್​ಎಸ್​ ಸ್ಕ್ವೇರ್​ನಲ್ಲಿ ಸೋಮವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರವಾಹನದಲ್ಲಿ ಹಿಂಬದಿ ಕುಳಿತ್ತಿದ್ದ ಅಜ್ಜಿಯೊಬ್ಬರು ಅದೃಷ್ಟವಶಾತ್​ ಪಾರಾಗಿದ್ದಾರೆ. ಸಿಗ್ನಲ್​ ಬಿಟ್ಟ ವೇಳೆ ಬೈಕ್​ ಮುಂದೆ ಹೊರಡುವಾಗ ಪಕ್ಕದಲ್ಲಿದ್ದ ಕೆಎಸ್​ಆರ್​ಟಿಸಿ ಬಸ್​ ಗುದ್ದಿದೆ. ಹಿಂಬದಿಯಲ್ಲಿ ಕುಳಿತಿದ್ದ ಅಜ್ಜಿ ರಸ್ತೆ ಕಡೆಗೆ ಬಿದ್ದಿದ್ದಾರೆ. ಪ್ರಯಾಣಿಕರು ಜೋರಾಗಿ ಕೂಗಿಕೊಂಡಾಗ ಚಾಲಕ ಬಸ್​ ಅನ್ನು ತಕ್ಷಣವೇ ನಿಲ್ಲಿಸಿದ್ದು ಯಾವುದೇ ಅನಾಹುತ ಸಂಭವಿಸಲಿಲ್ಲ. ಸಣ್ಣಪುಟ್ಟ ಗಾಯದಿಂದ ಗಾಬರಿಗೊಂಡಿದ್ದ ಅಜ್ಜಿ ಮೇಲೇಳಲು ಹರಸಾಹಸ ಪಡುವಂತಾಯಿತು. ಎಲ್​ಇಡಿ ಸ್ಕ್ರೀನ್​ ಸಂಬಂಧ ನಡೆಯುತ್ತಿರುವ ಸಣ್ಣಪುಟ್ಟ ಕಾಮಗಾರಿ ಹಿನ್ನೆಲೆ ರಸ್ತೆಯಲ್ಲೇ ದೊಡ್ಡ ದೊಡ್ಡ ಬ್ಯಾರಿಕೇಡ್​ಗಳು ಇನ್ನೂ ಇವೆ. ಅವಡ ಸಂಭವಿಸಿದ ವೇಳೆ ಎಲ್​ಇಡಿ ಸ್ಕ್ರೀನ್​ ಚಾಲನೆಯಲ್ಲಿ ಇರಲಿಲ್ಲ.