ಬಸ್​ ಪ್ರಯಾಣ ದರ ಏರಿಕೆ ಹಿಂಪಡೆಯಿರಿ

ಕೆಆರ್​ಎಸ್​ ಜಿಲ್ಲಾ ಸಮಿತಿ ಆಗ್ರಹ
KRS Party Tumakuru District unit urges cutdown bus fare hike.
ಕೆಆರ್​ಎಸ್​ ಪಕ್ಷ ತುಮಕೂರು ಜಿಲ್ಲಾ ಸಮಿತಿ ವತಿಯಿಂದ ಹಾಲು,ಸಾರಿಗೆ ಬಸ್​ ಪ್ರಯಾಣ ದರ ಏರಿಕೆ ಹಿಂಪಡೆಯುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಮೂಲಕ ಸರ್ಕಾರಕ್ಕೆ ಮನವಿ ನೀಡಲಾಯಿತು. ಸಿ.ಎನ್​.ನರಸಿಂಹರಾಜು, ಪ್ರದಿಪ್​ ಕುಮಾರ್​, ರಂಗನಾಥಗೌಡ, ಪಟೇಲ್​ ಗಂಗಾಧರಗೌಡ, ಎ.ಪಿ.ನಾಗರಾಜು ಮತ್ತಿತರರು ಇದ್ದರು.
Published on: 

ತುಮಕೂರು: ಹಾಲು,ಸಾರಿಗೆ ಬಸ್​ ಪ್ರಯಾಣ ದರ ಏರಿಕೆಯನ್ನು ಹಿಂಪಡೆಯಲು ಹಾಗೂ ಭ್ರಷ್ಟಾಚಾರ ನಿಗ್ರಹಿಸುವ ಮೂಲಕ ಅಗತ್ಯ ಸಂಪನ್ಮೂಲ ಕ್ರೂಢಿಕರಿಸುವಂತೆ ರಾಜ್ಯ ಸರ್ಕಾರವನ್ನು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್​ಎಸ್​) ಪಕ್ಷ ಜಿಲ್ಲಾ ಸಮಿತಿ ಆಗ್ರಹಿಸಿದೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಕೆಆರ್​ಎಸ್​ ಎಸ್ಸಿಎಸ್ಟಿ ಟಕದ ರಾಜ್ಯ ಪ್ರಧಾನಕಾರ್ಯದರ್ಶಿ ಸಿ.ಎನ್​.ನರಸಿಂಹರಾಜು ನೇತೃತ್ವದ ನಿಯೋಗವು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಮೂಲಕ ಸರ್ಕಾರಕ್ಕೆ ಮನವಿ ಪತ್ರ ನೀಡಿ, ರಾಜ್ಯದ ಜನರನ್ನು ರಕ್ಷಿಸಬೇಕಾದ ಸರ್ಕಾರವು, ಅವರನ್ನು ಸುಲಿಗೆ ಮಾಡಲು ಮುಂದಾಗಿರುವುದು ದುರದೃಷ್ಟಕರ. ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ತಕ್ಷಣವೇ ಹಾಲು, ಬಸ್​ ಪ್ರಯಾಣ ದರ ಮತ್ತು ಇತರೆ ಅಗತ್ಯವಸ್ತುಗಳ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಹಾಗೂ ಭ್ರಷ್ಟಾಚಾರ ನಿಗ್ರಹಿಸುವ ಮೂಲಕ ಅಗತ್ಯ ಸಂಪನ್ಮೂಲ ಕ್ರೂಢಿಕರಣಕ್ಕೆ ಕ್ರಮವಹಿಸುವಂತೆ ಆಗ್ರಹಿಸಿತು.

ಆಹಾರ ಧಾನ್ಯಗಳು, ತರಕಾರಿ, ಪೆಟ್ರೋಲ್​, ಡೀಸೆಲ್​ -ಡೀಸೆಲ್​ ದರಗಳ ಏರಿಕೆಯಿಂದ ಬಡ ಮತ್ತು ಮಧ್ಯಮವರ್ಗದ ಜನರು ತತ್ತರಿಸಿದ್ದಾರೆ. ಈಗ ಹಾಲು, ಬಸ್​ ಟಿಕೆಟ್​ ದರ ಹೆಚ್ಚಿಸಿ ರಾಜ್ಯ ಸರ್ಕಾರವು ಗಾಯದ ಮೇಲೆ ಬರೆ ಎಳೆದಿದೆ. ಬಾಟಲಿ ನೀರಿನ ದರ ಏರಿಕೆಯಾದಾಗ ಯಾರು ಪ್ರತಿಭಟಿಸುವುದಿಲ್ಲ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿರುವುದು ಸಮರ್ಥನೆಯಲ್ಲ. ಇದು ಅಸಹಾಯಕ ಸಾಮಾನ್ಯ ಜನರ ಅಪಹಾಸ್ಯ ಮಾಡಿದಂತಿದೆ. ನೀರಿನ ಬಾಟಲ್​ ಅನ್ನು ಎಲ್ಲಾ ಜನರು ಖರೀದಿ ಮಾಡಿ ಬಳುಸತ್ತಾರೆ ಎಂಬುದು ತಪು$್ಪ. ಇಂತಹ ಮಾತುಗಳನ್ನು ಜನರು ಸಹಿಸಿಕೊಳ್ಳುತ್ತಾರೆ ಎಂದು ತಾವು ಭಾವಿಸಿದ್ದರೆ ಅದು ತಪ್ಪಾಗಿರುತ್ತದೆ. ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಸಿ.ಎನ್​.ನರಸಿಂಹರಾಜು ಎಚ್ಚರಿಸಿದರು.

ರೈತರ ಹೆಸರೇಳಿ ಹಾಲಿನ ದರ ಏರಿಸಲಾಗಿದೆ. ಆದರೆ, ಕೆಎಂಎ್​ ಒಕ್ಕೂಟಗಳಲ್ಲಿ ಅವ್ಯವಹಾರ, ಅಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇದಕ್ಕೆ ತಾಜಾ ಉದಾಹರಣೆ ಮಂಡ್ಯ ಹಾಲು ಒಕ್ಕೂಟದಲ್ಲಿನ ಕಲಬೆರೆಕೆ ಪ್ರಕರಣ. ಇದು ಕೇವಲ ಒಂದು ಒಕ್ಕೂಟದಲ್ಲಿ ನಡೆಯುತ್ತಿರುವುದಲ್ಲ. ರಾಜ್ಯದ ಎಲ್ಲಾ ಹಾಲು ಉತ್ಪಾದಕ ಒಕ್ಕೂಟಗಳನ್ನು ಸಾಮಾನ್ಯವಾಗಿದೆ. ರೈತರ ಹೆಸರಿನಲ್ಲಿ ಒಕ್ಕೂಟಗಳು ಅಂದಾದುಂಧಿಯಲ್ಲಿ ತೊಡಗಿಕೊಂಡಿದ್ದು, ಅತ್ತ ರೈತರಿಗೂ ನ್ಯಾಯಯುತ ದರ ಸಿಗುತ್ತಿಲ್ಲ, ಇನ್ನೊಂದೆಡೆ ಸಾಮಾನ್ಯ ಗ್ರಾಹಕರ ಏರಿಕೆ ಹೊರೆ ಹೊರಿಸಲಾಗುತ್ತಿದೆ. ಇದೇ ರೀತಿ ಆದರೆ, ಗ್ರಾಹಕರು ನಂದಿನಿ ಹಾಲು ಮತ್ತು ಇತರೆ ಉತ್ಪನ್ನಗಳನ್ನು ಖರೀದಿ ಮಾಡುವುದನ್ನು ನಿಲ್ಲಿಸುತ್ತಾರೆ. ಇದರಿಂದ ನಷ್ಟವಾಗುವುದು ರಾಜ್ಯದ ರೈತರಿಗೆ ಮತ್ತು ಹಾಲು ಒಕ್ಕೂಟಗಳಿಗೆ ಎಂದರು.

ಸಾರಿಗೆ ನಿಗಮಗಳಲ್ಲಿನ ಭ್ರಷ್ಟಾಚಾರವನ್ನು ನಿಗ್ರಹಿಸಿ, ದಕ್ಷತೆಯಿಂದ ಕಾರ್ಯಾಚರಣೆ ಮಾಡಿದರೆ, ಟಿಕೆಟ್​ ದರ ಏರಿಕೆಗಿಂತ ಮುಂಚಿತವಾಗಿ ಇದ್ದ ದರಕ್ಕಿಂತಲು ಕಡಿಮೆ ದರದಲ್ಲಿ ಸಾರಿಗೆ ಸೇವೆಯನ್ನು ಒದಗಿಸಬಹುದು. ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಾಗ ಭಾಗ್ಯಗಳನ್ನು ನೀಡಿದಾಗ ಕೆಆರ್​ಎಸ್​ ಪಕ್ಷ$ವು, ಈ ಸರ್ಕಾರವು ಭಾಗ್ಯಗಳ ಭಾರದಿಂದ ಕುಸಿದು ಬೀಳಲಿದೆ, ಅದು ತಪ್ಪಬೇಕೆಂದರೆ, ಭ್ರಷ್ಟಾಚಾರವನ್ನು ನಿಗ್ರಹಿಸಿ, ಸಂಪನ್ಮೂಲನ್ನು ಕ್ರೂಢಿಕರಿಸಲು ಮುಂದಾಗಬೇಕು ಎಂದು ಎಚ್ಚರಿಸಿತ್ತು. ಈಗ ಸರ್ಕಾರವು ಒಂದು ಕಡೆ ಭಾಗ್ಯಗಳನ್ನು ನೀಡಿ, ಮತ್ತೊಂದೆಡೆ ಜರನ್ನು ದರೋಡೆ ಮಾಡುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಉಪಾಧ್ಯಕ್ಷ ಪ್ರದಿಪ್​ ಕುಮಾರ್​ ಆರೋಪಿಸಿದರು.

ನಿಯೋಗದಲ್ಲಿ ಜಿಲ್ಲಾ ಸಂಚಾಲಕರಾದ ರಂಗನಾಥ ಗೌಡ, ಪಟೇಲ್​ ಗಂಗಾಧರ ಗೌಡ, ಎ.ಪಿ.ನಾಗರಾಜು, ಸದಸ್ಯ ಚಿಕ್ಕನರಸಪ್ಪ ಹಾಜರಿದ್ದರು.