ದೇಶದ ಉದ್ಧಾರಕ್ಕೆ ಪವಿತ್ರ ದಿಕ್ಸೂಚಿ ಸಂವಿಧಾನ

ರಾಮಕೃಷ್ಣ ವಿವೇಕಾನಂಧ ಆಶ್ರಮದ ಮುಖ್ಯಸ್ಥ ಸ್ವಾಮಿ ವೀರೇಶಾನಂದ ಸರಸ್ವತಿ
ಕುಣಿಗಲ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2026-&27ನೇ ಸಾಲಿನ ವಾರ್ಷಿಕ ಚಟುವಟಿಕೆ  ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸ್ವಾಮಿ ವೀರೇಶಾನಂದ ಸರಸ್ವತಿ ಅವರನ್ನು ಅಭಿನಂದಿಸಲಾಯಿತು. ಡಾ.ಎಚ್​.ಡಿ.ರಂಗನಾಥ್​, ಪ್ರೊ.ರಾಮಾಂಜಿನಪ್ಪ, ಆನಂದಸಿಂಗ್​, ಪ್ರೊ.ಈಶ್ವರಯ್ಯ, ಡಾ.ನರಸಿಂಹಮೂರ್ತಿ ಮತ್ತಿತರರು ಇದ್ದರು.
ಕುಣಿಗಲ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2026-&27ನೇ ಸಾಲಿನ ವಾರ್ಷಿಕ ಚಟುವಟಿಕೆ ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸ್ವಾಮಿ ವೀರೇಶಾನಂದ ಸರಸ್ವತಿ ಅವರನ್ನು ಅಭಿನಂದಿಸಲಾಯಿತು. ಡಾ.ಎಚ್​.ಡಿ.ರಂಗನಾಥ್​, ಪ್ರೊ.ರಾಮಾಂಜಿನಪ್ಪ, ಆನಂದಸಿಂಗ್​, ಪ್ರೊ.ಈಶ್ವರಯ್ಯ, ಡಾ.ನರಸಿಂಹಮೂರ್ತಿ ಮತ್ತಿತರರು ಇದ್ದರು. Kunigal Government first grade college organised Kannada Rajyotsava Programme.
Published on: 

ಕುಣಿಗಲ್​: ಸಂವಿಧಾನವು ಪಥದರ್ಶಿಯಾಗಿ, ಕೈದೀವಿಗೆಯಾಗಿ ಪ್ರಜೆಗಳನ್ನು ಬಹುಕಾಲದವರೆಗೆ ರಕ್ಷಿಸಿ ಮುನ್ನಡೆಸುವ ಧ್ಯೇಯೋದ್ದೇಶವನ್ನು ಹೊಂದಿರುತ್ತದೆ. ಆದರೆ ಮಾನವೋದ್ಧಾರಕ್ಕಾಗಿ ರೂಪಿತವಾಗಿರುವ ಸಂವಿಧಾನವು ಮೂರ್ಖರ, ಅವಿವೇಕಿಗಳ, ಭ್ರಷ್ಟರ, ವಂಚಕರ, ಮೋಸಗಾರರ ಕೈಗೆ ಸಿಕ್ಕಿದ್ದೇ ಆದರೆ ಆ ದೇಶದ ಸಂವಿಧಾನದ ಆಶೋತ್ತರಗಳು ಕಾರ್ಯರೂಪಗೊಳ್ಳಲು ಕಷ್ಟಸಾಧ್ಯ ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥ ಸ್ವಾಮಿ ವೀರೇಶಾನಂದ ಸರಸ್ವತಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2026-27ನೇ ಸಾಲಿನ ವಾರ್ಷಿಕ ಚಟುವಟಿಕೆಗಳನ್ನು ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ದೇಶವು ತನ್ನ ಪ್ರಜೆಗಳ ಉದ್ಧಾರಕ್ಕಾಗಿ, ಸಬಲೀಕರಣಕ್ಕಾಗಿ, ಅವರುಗಳನ್ನು ಪ್ರಜ್ಞಾವಂತರನ್ನಾಗಿ ರೂಪಿಸಲು ತನ್ನದೇ ಆದ ಸಂವಿಧಾನವನ್ನು ರಚಿಸಿಕೊಂಡಿರುತ್ತದೆ. ಯಾವ ಸಂವಿಧಾನವು ದೇಶದ ಉದ್ಧಾರಕ್ಕೆ ಪವಿತ್ರ ದಿಕ್ಸೂಚಿಯಾಗಿ ಯೋಜಿತವಾಗಿತ್ತೊ ಅದು ವಿಫಲವಾಗುವುದು ಮೋಸ, ಕಪಟ ಹಾಗೂ ವಂಚನೆಯನ್ನೇ ಆಶ್ರಯಿಸಿದ ಪ್ರಜೆಗಳ ಮುಖವಾಡ ಹೊತ್ತ ಮೋಸಗಾರರಿಂದ ಎಂದರು.

ಸ್ವಾಮಿ ವಿವೇಕಾನಂದರು ವ್ಯಕ್ತಿ ಮತ್ತು ಸಮಾಜದ ಸರ್ವಸಮಸ್ಯೆಗಳಿಗೆ ಶಿಕ್ಷಣವೇ ರಾಮಬಾಣವೆಂದಿದ್ದರು. ಪ್ರಜೆಗಳೆಂದರೆ ಅವರ ನಡವಳಿಕೆ ಮತ್ತು ಕಾರ್ಯವೈಖರಿ ವಿವೇಕಪೂರ್ಣವಾಗಿರಬೇಕು ಮತ್ತು ವೈಯಕ್ತಿಕ ಹಾಗೂ ರಾಷ್ಟ್ರಭವಿಷ್ಯದ ವಿಷಯದಲ್ಲಿ ಚೆಲ್ಲಾಟವಾಡಬಾರದು. ಯುವಕರ ಇಂದಿನ ನಡವಳಿಕೆ ನಾಳೆ ಅವರುಗಳು ಏರಬಲ್ಲ ಮಹೋನ್ನತ ಹಾಗೂ ಗುರುತರವಾದ ಸ್ಥಾನವನ್ನು ಸೂಚಿಸುವುದರಿಂದ ಅವರುಗಳು ತಮ್ಮ ಬೀಡಾಡಿ ದನಗಳ ಸ್ವಭಾವವನ್ನು ಕೊಡವಿಹಾಕಿ, ಜಿರಲೆತನವನ್ನು ಬಿಸಾಡಿ, ವಿವೇಕಾನಂದರು ಬಯಸಿದಂತೆ ಪುರುಷಸಿಂಹರು, ಸಿಂಹಿಣಿಯರಾಗಬೇಕು ಎಂದು ಕಿವಿಮಾತು ಹೇಳಿದರು.

ನಾಡಿನುದ್ದಕ್ಕೂ ತಮ್ಮ ಪ್ರವಚನ ಹಾಗೂ ಬರಹಗಳಿಂದ ಗೌರವಾದರಗಳಿಗೆ ಪಾತ್ರರಾಗಿರುವ ಪೂಜ್ಯ ಸ್ವಾಮಿ ವೀರೇಶಾನಂದರು ನಮ್ಮ ಕುಣಿಗಲ್ಲಿನವರು, ನಮ್ಮ ಕಾಲೇಜಿನಲ್ಲಿ 1989&-90ರಲ್ಲಿ ಗಣಿತಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲ್ಲಿಸಿದ್ದರೆಂಬ ವಿಷಯವು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ನನ್ನ ಕ್ಷೇತ್ರದ ಯುವ ಜನತೆಗೆ ಪೂಜ್ಯರ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕಿದೆ. ನನ್ನ ಕ್ಷೇತ್ರದ ಯುವಜನತೆಯ ಶೈಕ್ಷಣಿಕ ಏಳ್ಗೆಗಾಗಿ ನಾನು ಶಕ್ತಿಮೀರಿ ಸಹಾಯ-ಸಹಕಾರ ನೀಡುತ್ತೇನೆ ಎಂದು ಶಾಸಕ ಡಾ.ಎಚ್​.ಡಿ.ರಂಗನಾಥ್​ ಹೇಳಿದರು.

ಪ್ರಾಂಶುಪಾಲ ಪ್ರೊ. ರಾಮಾಂಜಿನಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಆನಂದಸಿಂಗ್​, ಸಾಂಸ್ಕತಿಕ ಸಮಿತಿಯ ಸಂಚಾಲಕ ಪ್ರೊ. ಈಶ್ವರಯ್ಯ, ಐಕ್ಯುಎಸಿ ಸಂಚಾಲಕ ಡಾ. ನರಸಿಂಹಮೂರ್ತಿ, ಕನ್ನಡಕುಮಾರ್​ ಮತ್ತಿತರರು ಇದ್ದರು.