

ತುಮಕೂರು: ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿ ವರ್ಗಾವಣೆಗೊಂಡಿರುವ ಕೆ.ವಿ.ಅಶೋಕ್ಗೆ ಗುರುವಾರ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು. ಕಳೆದ 3 ವರ್ಷ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯನಿರ್ವಹಿಸಿದ್ದ ಅಶೋಕ್ಗೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಎಸ್ಪಿ ಕಚೇರಿ ಸಿಬ್ಬಂದಿ ಗೌರವಪೂರ್ವಕವಾಗಿ ಬೀಳ್ಕೋಟ್ಟರು.
ಹೂಮಳೆ: ಎಸ್ಪಿ ಅಶೋಕ್ ಬೆಂಗಳೂರಿಗೆ ವರ್ಗಾವಣೆಗೊಂಡ ಹಿನ್ನೆಲೆ ಎಎಸ್ಪಿ ಸಿ.ಗೋಪಾಲ್ಗೆ ಅಧಿಕಾರ ಹಸ್ತಾಂತರವಹಿಸಿಕೊಟ್ಟ ಬಳಿಕ ಕಚೇರಿಯಿಂದ ಹೊರಬರುತ್ತಿದ್ದಂತೆ ಹೊರಭಾಗದಲ್ಲಿ ಶುಭಕೋರಲು ಸಾಲಿನಲ್ಲಿ ನಿಂತಿದ್ದ ಪೊಲೀಸ್ ಅಧಿಕಾರಿಗಳು ಹೂಮಳೆ ಸುರಿಸಿದರು. ಈ ಗೌರವ ವಿದಾಯದಿಂದ ಅಕ್ಷರಷ@ ಅಶೋಕ್ ಕಣ್ಣಾಲಿಗಳು ತೇವಗೊಂಡಿದ್ದವು. ಕಚೇರಿ ಮೆಟ್ಟಿಲು ಮೇಲೆ ನಿಂತು ಎಲ್ಲರೊಂದಿಗೆ ೋಟೋಗೆ ಪೋಸ್ ಕೊಟ್ಟ ಹೊರಟ ಅಶೋಕ್ಗೆ ಪೊಲೀಸ್ ಸಿಬ್ಬಂದಿಯಿಂದ ಅಚ್ಚರಿ ಕಾದಿತ್ತು.
ತೇರಿನಂತೆ ಎಳೆದ ಸಿಬ್ಬಂದಿ: ಅಶೋಕ್ ಅವರನ್ನು ಉತ್ಸವ ಮೂರ್ತಿಯನ್ನಾಗಿಸಿ ತೆರೆದ ಜೀಪಿಗೆ ಹಗ್ಗ ಕಟ್ಟಿ ಎಸ್ಪಿ ಕಚೇರಿ ಆವರಣದಿಂದ ಬಿಎಚ್ ರಸ್ತೆವರೆಗೆ ತೇರು ಎಳೆದಂತೆ ಪೊಲೀಸ್ ಸಿಬ್ಬಂದಿ ಜೀಪನ್ನು ಎಳೆದಿದ್ದು ವಿಶೇಷವಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.