ಅಧಿಕಾರಿಶಾಹಿ ವ್ಯವಸ್ಥೆ ವೈಭವೀಕರಣ, ರಾಜ್ಯಪಾಲರ ಗಮನಸೆಳೆದ ಕಾಡಶೆಟ್ಟಿಹಳ್ಳಿ ಸತೀಶ್​

ಮಸಾಲೆ ದೋಸೆ, ಮದ್ದೂರು ವಡೆ ಸವಿದ ಡಾ.ಸುಧಾ ಯಾದವ್​ ಶೀಬಿ ದೇವಸ್ಥಾನಕ್ಕೆ ಭೇಟಿ
Karnataka New Governor Dr.Sudha Yadav on the way to Bangalore visit Sira IB.
ರಾಜ್ಯಪಾಲರಾದ ಡಾ.ಸುಧಾ ಯಾದವ್​ ಶಿರಾ ಪ್ರವಾಸಿ ಮಂದಿರದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಸಂವಾದ ನಡೆಸಿದರು. ಟಿ.ಬಿ.ಜಯಚಂದ್ರ, ಮಹೇಶ್​, ಕಾಡಶೆಟ್ಟಿಹಳ್ಳಿ ಸತೀಶ್​, ಶ್ರೀನಿವಾಸ್​, ಶುಭಕಲ್ಯಾಣ್​ ಮತ್ತಿತರರು ಇದ್ದರು.
Published on: 

ತುಮಕೂರು: ರಾಜ್ಯದಲ್ಲಿ ಸ್ಥಳಿಯ ಸಂಸ್ಥೆಗಳ ಚುನಾವಣೆಯನ್ನು ನಡೆಸದಿರುವುದು ಎಲ್ಲೆಡೆಯೂ ಅಧಿಕಾರಶಾಹಿ ವ್ಯವಸ್ಥೆಯ ವೈಭವೀಕರಣಕ್ಕೆ ಕಾರಣವಾಗಿದೆ. ಕೂಡಲೇ ರಾಜ್ಯದಲ್ಲಿ ತಾಪಂ, ಜಿಪಂ ಚುನಾವಣೆಯನ್ನು ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಕರ್ನಾಟಕ ಪಂಚಾಯತ್​ ರಾಜ್​ ಪರಿಷತ್​ ಪ್ರಧಾನ ಕಾರ್ಯದರ್ಶಿ ಕಾಡಶೆಟ್ಟಿಹಳ್ಳಿ ಸತೀಶ್​ ರಾಜ್ಯಪಾಲರಲ್ಲಿ ಮನವಿ ಮಾಡಿದರು.

ರಾಜ್ಯಪಾಲೆ ಡಾ.ಸುಧಾ ಯಾದವ್​ ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂಜೆ ಜಿಲ್ಲೆಯ ವಿವಿಧ ಕ್ಷೇತ್ರಗಳ 20 ಗಣ್ಯರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸತೀಶ್​, ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲಿ ಅಧಿಕಾರಿಶಾಹಿ ವ್ಯವಸ್ಥೆಯಿಂದ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದನೆ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.

ಶಾಸಕ ಟಿ.ಬಿ.ಜಯಚಂದ್ರ, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್​, ಜನಪದ ಅಕಾಡಮಿ ಸದಸ್ಯ ಮಲ್ಲಿಕಾರ್ಜುನ, ನಾಟಕ ಅಕಾಡಮಿ ಸದಸ್ಯ ಉಗಮ ಶ್ರೀನಿವಾಸ್​ ಮತ್ತಿತರರ ಗಣ್ಯರೊಂದಿಗೆ ರಾಜ್ಯಪಾಲರು ಮಸಾಲೆ ದೋಸೆ ರುಚಿ ಸವಿದರು. ಸಂವಾದದಲ್ಲಿ ಭಾಗವಹಿಸಿದ್ದ ಗಣ್ಯರು ಜಿಲ್ಲೆಯ ಜನಪದ ವೈವಿಧ್ಯತೆ, ನಾಟಕ, ಕಲೆ, ರೈತರ ಬದುಕು, ಬವಣೆಗಳ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಶುಭಕಲ್ಯಾಣ್​ ಕೂಡ ಜಿಲ್ಲೆಯಲ್ಲಿ ನಡೆಸಿರುವ ಇವೆಂಟ್​ಗಳಿಗೆ ಸಂಬಂಧಪಟ್ಟಂತೆ ತಯಾರಿಸಿಕೊಂಡಿರುವ ಕಾಫಿಟೇಬಲ್​ ಪುಸ್ತಕವನ್ನು ರಾಜ್ಯಪಾಲರಿಗೆ ಕೊಟ್ಟು ಸಾಧನೆಯನ್ನು ಹೇಳಿಕೊಂಡಿದ್ದು ವಿಶೇಷ ಎನ್ನಿಸಿತು. ಗಣ್ಯರೊಂದಿಗೆ ಸಂವಾದ ಏರ್ಪಡಿಸಿದ್ದರೂ ಶುಭಕಲ್ಯಾಣ್​ ಅವರೇ ರಾಜ್ಯಪಾಲರೊಂದಿಗೆ ಹೆಚ್ಚು ಮಾತನಾಡಿದ್ದು ಗಣ್ಯರಿಗೆ ಪರಿಚಯಿಸಿಕೊಳ್ಳಲಷ್ಟೇ ಅವಕಾಶವಾಯಿತು.