ಬಡ ಟೈಲರ್​ ಮಗಳ ವೈದ್ಯಳಾಗುವ ಕನಸು

ಸಾದಿಯಾಬಾನು
ಸಾದಿಯಾಬಾನು
Published on

ಪ್ರಮುಖ ಮುಖ್ಯಾಂಶಗಳು

  • ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಟಾಪರ್​
  • ಶ್ರೀದೇವಿ ವಿದ್ಯಾಮಂದಿರ
  • ಬಡತನದಲ್ಲಿ ಅರಳಿದ ಪ್ರತಿಭೆ
ತುಮಕೂರು: ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಟಾಪರ್​ ಸ್ರೇಯಕ್ಕೆ ಪಾತ್ರರಾಗಿರುವ ಸಾದಿಯಾಬಾನು ಬಡ ದರ್ಜಿ (ಟೈಲರ್​)ಯ ಪುತ್ರಿ.
ನಗರದ ಶಿರಾಗೇಟ್​ನ ಎಸ್​ಎನ್​ ಪಾಳ್ಯದ ಮಹಮ್ಮದ್​ ಜಫ್ರುದ್ದೀನ್​ ಹಾಗೂ ವಹಿದಾಬಾನು ದಂಪತಿ ಪುತ್ರಿ ಸಾದಿಯಾಬಾನು 625ಕ್ಕೆ 624 ಅಂಕಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ, ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಾರೆ. ಸಾದಿಯಾಬಾನು ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಶ್ರೀದೇವಿ ವಿದ್ಯಾಮಂದಿರದ ವಿದ್ಯಾರ್ಥಿ.
ಜ್ರುದ್ದೀನ್​ ಕುಟುಂಬ ನಿರ್ವಹಣೆಗೆ ಜಫ್ರುದ್ದೀನ್ ಟೈಲರ್​ ವೃತ್ತಿ ಮಾಡಲಿದ್ದು ತನ್ನಿಬ್ಬರ ಮಕ್ಕಳ ಶಿಕ್ಷಣಕ್ಕೆ ಇಡೀ ದುಡಿಮೆಯನ್ನು ಮುಡಿಪಾಗಿಟ್ಟಿದ್ದಾರೆ. ಮಕ್ಕಳು ಕೂಡ ಅಪ್ಪನ ಶ್ರಮಕ್ಕೆ ತಕ್ಕಂತೆ ಓದುತ್ತಿದ್ದು ಸಾದಿಯಬಾನು ಉತ್ತಮ ಸಾಧನೆಗೈದಿದ್ದಾರೆ.
ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳಲಿದ್ದು ಎಂಬಿಬಿಎಸ್​ ಓದುವ ಕನಸು ನನ್ನದು. ಚರ್ಮರೋಗ ತಜ್ಞೆ ಆಗಬೇಕೆಂಬ ಗುರಿಹೊಂದಿದ್ದು ಪ್ರತಿನಿತ್ಯ ರಾತ್ರಿ 1 ರವರೆಗೆ ಓದುತ್ತಿದ್ದದು ಕಠಿಣ ಪರಿಶ್ರಮ ನನ್ನೀ ಸಾಧನೆಗೆ ಕಾರಣ ಎನ್ನುತ್ತಾರೆ ಸಾದಿಯಾಬಾನು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net