ಗಾಂಜಾ ಮಾರಾಟ, 6 ಪೆಡ್ಲರ್​ಗಳ ಬಂಧನ

ತುಮಕೂರಿನಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಸುದ್ದಿಗೋಷ್ಠಿಯಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟ ಜಾಲದವರಿಂದ ವಶ ಪಡಿಸಿಕೊಂಡ ಮಾಲುಗಳನ್ನು ಪರಿಶೀಲಿಸಿದರು.
ತುಮಕೂರಿನಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಸುದ್ದಿಗೋಷ್ಠಿಯಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟ ಜಾಲದವರಿಂದ ವಶ ಪಡಿಸಿಕೊಂಡ ಮಾಲುಗಳನ್ನು ಪರಿಶೀಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • 8 ಕೆಜಿ ಗಾಂಜಾ ಸೊಪ್ಪು ವಶ
  • ಮಹಾರಾಷ್ಟ್ರ, ಒರಿಸ್ಸಾ ರಾಜ್ಯಗಳಿಂದ ಅಕ್ರಮ ಸಾಗಾಣಿಕೆ
  • ಜಾಲ ಪತ್ತೆಹಚ್ಚಿದ ತುಮಕೂರು ಪೊಲೀಸರು
ತುಮಕೂರು: ಮಾದಕ ವಸ್ತುಗಳ ಅಕ್ರಮ ಮಾರಾಟ ಹಾಗೂ ಸೇವನೆ ಜಾಲವನ್ನು ಭೇಧಿಸುವಲ್ಲಿ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ, ಒರಿಸ್ಸಾ, ಛತ್ತೀಸ್​ಗಡ ರಾಜ್ಯಗಳಿಂದ ಅಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ಬಂದು ತುಮಕೂರಿನಲ್ಲಿ ಮಾರಾಟ ಮಾಡಲು ಪ್ರಯತ್ನಿಸಿದ 6 ಪೆಡ್ಲರ್​ ಗಳನ್ನು ಬಂಧಿಸಿರುವ ಪೊಲೀಸರು 9.6 ಲಕ್ಷ ರೂ., ಮೌಲ್ಯದ 8 ಕೆಜಿ ಗಾಂಜಾ ಸೊಪ್ಪು, 78 ಸಾವಿರ ರೂ., ಬೆಳೆಬಾಳುವ ಎಂಡಿಎಂಎ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನೆಲಮಂಗಲದ ಶೇಖ್​ ಸಾಹಿಲ್​ ಅಕ್ಬರ್​ (24), ತುಮಕೂರಿನ ವಸೀಂ (27), ರೋಷನ್​ ಸಮೀರ್​ (29 ). ನಯಿಮ್​ (38) ಫಾರೂಖ್​ ಹುಸೇನ್​ (45) ಹಾಗೂ ಮೈಸೂರಿನ ಶೋಯೆಬ್​ (22) ಬಂಧಿತ ಆರೋಪಿಗಳು. ಆರೋಪಿಗಳು ಆಟೋ, ಕಾರು, ಲಾರಿ ಚಾಲಕ ವೃತ್ತಿ ಮಾಡುತ್ತಿದ್ದು ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿಶೇಷ ತಂಡ: ನಗರ ಮತ್ತು ಹೊರವಲಯದಲ್ಲಿ ಹಾಗೂ ಶಾಲಾ ಕಾಲೇಜುಗಳ ಸಮೀಪದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುವ ದಂಧೆ ಬಗ್ಗೆ ಸಾಕಷ್ಟು ದೂರುಗಳ ಬಂಧ ಹಿನ್ನೆಲೆ ತಿಲಕ್​ಪಾರ್ಕ್​ ಸಿಪಿಐ ಜಿ.ಪುರುಷೋತ್ತಮ್​ ನೇತೃತ್ವದಲ್ಲಿ ಸಬ್​ ಇನ್ಸ್​ಪೆಕ್ಟರ್​ಗಳಾದ ಸಂಜಯ್​ ಕುಮಾರ್​ ಕಾಂಬ್ಳೆ, ಪದ್ಮಾವತಿ, ಪೇದೆಗಳಾದ ನಿಜಾಂಉದ್ದೀನ್​-ಷಾ, ರಾಮಕೃಷ್ಣ, ಶಶಿಕುಮಾರನಾಯ್ಕ, ಮಂಜುನಾಥ, ಲೋಕೇಶ್​ರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಕೃತ್ಯಕ್ಕೆ ಬಳಸಿದ್ದ 2 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net