ಚಿಂದೋಡಿ ಲೀಲಾ ದತ್ತಿ: ಜಿಲ್ಲಾ ರಂಗಭೂಮಿ ಕಲಾವಿದರ ಸಂದ ಅಧ್ಯಕ್ಷರು ಆದ ನ್ಯಾಯಾಂಗ ಇಲಾಖೆಯ ನಿವೃತ್ತ ನೌಕರ ವೈ.ಎನ್.ಶಿವಣ್ಣ ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪ್ರಶಸ್ತಿಗೆ ಪುರಸ್ಕಾರಗೊಂಡಿದ್ದಾರೆ. 72 ವರ್ಷದ ಶಿವಣ್ಣ ಮೂಲತ@ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಯಲದಾಹಳ್ಳಿಯವರು. 1980ರಲ್ಲಿ ರಂಗಭೂಮಿಯ ಸೆಳೆತದಿಂದ ಶಿವಣ್ಣರನ್ನು ಕಲಾಸೇವೆಯೆಡೆಗೆ ಆಕರ್ಷಿಸಿತು. ಅಭಿನಯವನ್ನು ಪ್ರವೃತ್ತಿಯಾಗಿಸಿಕೊಂಡ ಶಿವಣ್ಣ ಪೌರಾಣಿಕ ನಾಟಕಗಳಲ್ಲಿ ಶ್ರೀರಾಮ, ಆಂಜನೇಯ, ಅರ್ಜುನ, ಕರ್ಣ, ವಿದುರ,ದಶರಥ ಮುಂದಾತ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಜಿಲ್ಲೆಯಲ್ಲಿ ತಮ್ಮ ಛಾಪು ಮೂಡಿಸಿದರು. ರಂಗಭೂಮಿ ಕಲಾವಿದರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಜಿಲ್ಲಾಮಟ್ಟದಲ್ಲಿ ಸಂಟನೆ ಕಟ್ಟಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಬಿರುದುಗಳಿಗೆ ಶಿವಣ್ಣ ಭಾಜನರಾಗಿದ್ದಾರೆ.