ಪರಮೇಶ್ವರ್​ಗೆ ಮಠಾಧೀಶರ ಸಾಥ್​

ತುಮಕೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಪರ ವಿವಿಧ ಮಠಾಧೀಶರು ಹಕ್ಕೋತ್ತಾಯ ಮಂಡನೆ ಸಭೆ ನಡೆಸಿದರು.
ತುಮಕೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಪರ ವಿವಿಧ ಮಠಾಧೀಶರು ಹಕ್ಕೋತ್ತಾಯ ಮಂಡನೆ ಸಭೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಂಗೆ ಮುಖ್ಯಮಂತ್ರಿ ಸ್ಥಾನ ನೀಡಲಿ
  • ಹೈಕಮಾಂಡ್​ ಮೇಲೆ ಒತ್ತಡ
  • ದೆಹಲಿಗೆ ಸ್ವಾಮೀಜಿಗಳ ನಿಯೋಗ
ತುಮಕೂರು: ರಾಜ್ಯದಲ್ಲಿ ಸಿಎಂ ಕುರ್ಚಿ ಚರ್ಚೆ ಬೆನ್ನಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಪರ ಜಿಲ್ಲೆಯ 30ಕ್ಕು ಹೆಚ್ಚು ಮಠಾಧೀಶರು ಬೆಂಬಲಕ್ಕೆ ನಿಲ್ಲುವ ಮೂಲಕ "ದಲಿತ ಸಿಂ ಕೂಗಿ'ಗೆ ಧ್ವನಿಗೂಡಿಸಿದರು. ಸಜ್ಜರು, ಸುಶಿತರು ಆಗಿರುವ ಪರಮೇಶ್ವರ್​ರನ್ನು ಮುಖ್ಯಮಂತ್ರಿಗಳನ್ನಾಗಿ ನೇಮಿಸುವಂತೆ ಜಿಲ್ಲೆಯ ಎಲ್ಲಾ ಜಾತಿಯ ಮಠಾಧೀಶರು ಹಕ್ಕೋತ್ತಾಯ ಮಂಡನೆ ಮೂಲಕ ಹೈಕಮಾಂಡ್​ ಮೇಲೆ ಒತ್ತಡ ಹೇರಿದರು.
ನಗರದ ಕೊಲ್ಹಾಪುರದಮ್ಮ ಸಮುದಾಯಭವನದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಡಾ.ಹನುಮಂತನಾಥ ಸ್ವಾಮೀಜಿ, 2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ$ವನ್ನು ಮುನ್ನಡೆಸಿದ್ದ ಪರಮೇಶ್ವರ್​ ರಾಜ್ಯದ ಉದ್ದಗಲಕ್ಕು ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಕಂಡಿದ್ದರು. ಆದರೆ, ದುರಾದೃಷ್ಟವಶಾತ್​ ತಮ್ಮ ಕ್ಷೇತ್ರದಲ್ಲಿ ಸೋಲುಕಂಡಿದ್ದರು.
ಅವತ್ತು ಹೈಕಮಾಂಡ್​ ಪರಮೇಶ್ವರ್​ಗೆ ಸಿಎಂ ಮಾಡುತ್ತೀವಿ ಅನ್ನುವ ಭರವಸೆ ಕೊಟ್ಟಿತ್ತು. ಆ ಮಾತು ಸತ್ಯವಾಗಬೇಕಾದರೆ ಪರಮೇಶ್ವರ್​ರನ್ನು ಸಿಎಂ ಮಾಡಬೇಕು. ಹೈಕಮಾಂಡ್​ ತನ್ನ ಮಾತಿಗೆ ಬದ್ಧ ಎಂಬ ನಿಲುವನ್ನು ತೋರಿಸಲು ಸದಾವಕಾಶವಿದು ಎಂಬುದು ನಮ್ಮ ಅಭಿಪ್ರಾಯ ಎಂದರು.
ಡಿ.ಕೆ.ಶಿವಕುಮಾರ್​ಗೆ ಬೇರೆ ಕಾರಣಗಳಿಂದ ಸಿಎಂ ಸ್ಥಾನ ಕೈತಪ್ಪಿದ ಪಕ್ಷದಲ್ಲಿ ಅಥವಾ ಹೈಕಮಾಂಡ್​ ಕೈಗೊಳ್ಳುವ ತೀರ್ಮಾನ ಒಳ್ಳಯದಾಗಿದ್ದಲ್ಲಿ ಪರಮೇಶ್ವರ್​ಗೆ ಸಿಎಂ ಸ್ಥಾನ ಕೊಡಿ ಎಂಬುದು ನಮ್ಮ ಒತ್ತಾಯವಾಗಿದೆ. ಸಿಎಂ ಆಗಿ ಜಿಲ್ಲೆಗೆ ಹಾಗೂ ರಾಜ್ಯ ಕೊಡುಗೆ ನೀಡಬೇಕೆಂಬ ಆಸೆ ಅವರದ್ದಾಗಿದೆ. ಈ ಬಗ್ಗೆ ಹಲವು ಬಾಗಿ ನಮ್ಮ ಬಳಿ ಮನದಾಳದ ಮಾತುಗಳನ್ನಾಡಿದ್ದಾರೆ. ಹೈಕಮಾಂಡ್​ ಸಿಎಂ ಅಧಿಕಾರ ಕೊಟ್ಟರೆ ಸಮಗ್ರವಾಗಿ ಅಧಿಕಾರ ನಿಭಾಯಿಸುತ್ತೇನೆ ಎಂಬ ಮಾತುಗಳನ್ನು ನಮ್ಮ ಬಳಿ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್​ ಮನವೊಲಿಸಲು ಜಿಲ್ಲೆಯ ಮಠಾಧಿಪತಿಗಳು ನಿರ್ಧರಿಸಿದ್ದೇವೆ ಎಂದರು.
ದೆಹಲಿಗೆ ಸ್ವಾಮೀಜಿಗಳ ನಿಯೋಗ: ನಮ್ಮ ಜಿಲಾ ್ಲಉಸ್ತುವಾರಿ ಸಚಿವರು ಸಿಎಂ ಆಗಲಿ ಎಂಬ ಸಂಕಲ್ಪ ಮಾಡಿದ್ದೇವೆ. ರಾಜ್ಯ ಕಾಂಗ್ರೆಸ್​ ಪಕ್ಷದೊಳಗೆ ನಾಯಕತ್ವ ಬದಲಾವಣೆ ಭಾವನೆ ಕಾಣುತ್ತಿದ್ದೇವೆ. ಹಾಗಾಗಿ, ಸಿಎಂ ಆಗಲಿ ಎಂಬ ಕನಸು ಇಟ್ಟುಕೊಂಡಿರುವ ಪರಮೇಶ್ವರ್​ ಪರ ನಾವೆಲ್ಲಾ ಮಠಾಧೀಶರು ದೆಹಲಿಗೆ ಹೋಗಿ ಹೈಕಮಾಂಡ್​ ಮೇಲೆ ಒತ್ತಡ ಹೇರುತ್ತೇವೆ ಎಂದು ಬೆಳ್ಳಾವಿ ಕಾರದ ಮಠದ ಕಾರದ ಶ್ರೀ ವೀರಬಸವ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮೀಜಿ, ಅರೆಶಂಕರಮಠದ ಶ್ರೀಸಿದ್ದರಾಮಚೈತನ್ಯಸ್ವಾಮೀಜಿ, ವಿಶ್ವಕರ್ಮ ಮಠದ ಶ್ರೀ ನೀಲಕಂಠಸ್ವಾಮೀಜಿ, ಗೋಡೆಕೆರೆಯ ಮೃತ್ಯುಂಜಯಸ್ವಾಮೀಜಿ, ಬಿಂದುಶೇಖರ ಓಡೆಯರ್​, ಗೊಲ್ಲಹಳ್ಳಿಯ ಶ್ರೀ ವಿದ್ಯಾವಿಭವ ಸ್ವಾಮೀಜಿ ಸೇರಿದಂತೆ 25ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಪಕ್ಷದ ಚೌಕಟ್ಟಿನಲ್ಲಿ ನಿಟ್ಟಿನಲ್ಲಿ ನಾನು ಸಿಎಂ ಎಂದು ಬಹಿರಂಗವಾಗಿ ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ಒಬ್ಬ ವಿದ್ಯಾವಂತ ರಾಜಕಾರಣಿಯಾಗಿರುವುದರಿಂದ ಎಲ್ಲೂ ಬಹಿರಂಗವಾಗಿ ಪರಮೇಶ್ವರ್​ ತೋರ್ಪಡಿಸಿಕೊಂಡಿಲ್ಲ ಎಂಬುದು ನಮ್ಮ ಭಾವನೆ. ಅವರು ಸಹ ನಾನು ಪಕ್ಷಕ್ಕಾಗಿ ದುಡಿದ್ದೇನೆ. ಸಿಎಂ ರೇಸ್​ನಲ್ಲಿ ಇದ್ದೇನೆ ಎಂಬುದನ್ನು ಸಾಕಷ್ಟು ಬಾರಿ ಮಾಧ್ಯಮದ ಮುಂದೆ ಹೇಳಿರುವುದನ್ನು ಗಮನಿಸಿದ್ದೇವೆ. ಬದಲಾವಣೆ ಸಂದರ್ಭದಲ್ಲಿ ಅವರ ಹೆಸರನ್ನು ಸಿಎಂ ಸ್ಥಾನಕ್ಕೆ ಪರಿಗಣಿಸುವಂತೆ ಹೈಕಮಾಂಡ್​ ಮೇಲೆ ಒತ್ತಡ ಹೇರುತ್ತೇವೆ.
ಡಾ.ಹನುಮಂತನಾಥ ಸ್ವಾಮೀಜಿ
ಕುಂಚಿಟಿಗ ಮಹಾಸಂಸ್ಥಾನ, ಎಲೆರಾಂಪುರ
8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದಲ್ಲಿ ಪಕ್ಷ$ವನ್ನು ಸಂಟಿಸಿದ್ದ ಪರಮೇಶ್ವರ್​ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವರ ಪಕ್ಷ ನಿಷ್ಠೆಗೆ ಹೈಕಮಾಂಡ್​ ಮನ್ನಣೆ ನೀಡಿ, ನಾಯಕತ್ವ ಬದಲಾವಣೆ ಸಂದರ್ಭದಲ್ಲಿ ಅವರ ಹೆಸರನ್ನು ಪರಿಗಣಿಸಬೇಕು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಅವರು ಸಿಎಂ ಆಗಬೇಕೆಂಬುದು ನಮ್ಮೆಲ್ಲರ ಭಾವನೆ. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಕಾರ್ಯನಿರ್ವಹಿಸಿರುವ ಅವರನ್ನು ಪಕ್ಷದ ಹೈಕಮಾಂಡ್​ ಮುಖ್ಯಮಂತ್ರಿಯಾಗಿ ಘೋಷಿಸಬೇಕು.
ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ
ಸಿದ್ದರಬೆಟ್ಟ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net