ಎಬಿವಿಪಿಯಿಂದ ಎಜುಕೇಷನ್​ ಮಿನಿಸ್ಟರ್​ವರೆಗಿನ ಪಯಣ

ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನ ‌ಬಿಜೆಪಿ ಕಚೇರಿಯಲ್ಲಿ ಬಿ.ಸಿ.ನಾಗೇಶ್  ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನ ‌ಬಿಜೆಪಿ ಕಚೇರಿಯಲ್ಲಿ ಬಿ.ಸಿ.ನಾಗೇಶ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
Published on

ಪ್ರಮುಖ ಮುಖ್ಯಾಂಶಗಳು

  • ಸರಳ, ಸಜ್ಜನಿಕೆಯ ನಾಯಕ ನಾಗೇಶ್​ ವಿದಾಯ
  • ಬೊಮ್ಮಾಯಿ ಸಂಪುಟದಲ್ಲಿ ಶಿಕ್ಷಣ ಇಲಾಖೆ ಹೊಣೆ
  • ಎರಡು ಬಾರಿ ತಿಪಟೂರು ಕ್ಷೇತ್ರದ ಶಾಸಕ

ತುಮಕೂರು: ವಿದ್ಯಾರ್ಥಿ ದಿಸೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ (ಎಬಿವಿಪಿ) ಮೂಲಕ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಧುಮುಕಿದ್ದ ಬಿ.ಸಿ.ನಾಗೇಶ್​ ಅವರು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರಾಗಿ ಸಮರ್ಥವಾಗಿ ಶಿಕ್ಷಣ ಇಲಾಖೆ ಜವಾಬ್ದಾರಿಯನ್ನು ನಿಭಾಯಿಸಿದ್ದ ದಕ್ಷ ಆಡಳಿತಗಾರನೆನಿಸಿದ್ದರು.

ಪಠ್ಯಪುಸ್ತಕ ಪರಿಷ್ಕರಣೆ, ಹಿಜಾಬ್​ ನಿಷೇಧ, ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನ, ವಿವೇಕ ಕೊಠಡಿ ನಿರ್ಮಾಣದಂತಹ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಶಿಕ್ಷಣ ಸಚಿವರಾಗಿ ಈ ವಿಚಾರಗಳಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದ ನಾಗೇಶ್​ ನಿಲುವು ಚರ್ಚೆಗೀಡಾಗಿತ್ತಲ್ಲದೆ ಆ ದಿನಗಳಲ್ಲಿ ರಾಜ್ಯಾದ್ಯಂತ ಸಾಕಷ್ಟು "ಸದ್ದು' ಮಾಡಿತ್ತು.
2021ರಲ್ಲಿ ಬೊಮ್ಮಾಯಿ ಸರ್ಕಾರದಲ್ಲಿ ಶಿಕ್ಷಣ ಇಲಾಖೆ ಹೊಣೆಗಾರಿಕೆಯನ್ನು ಹೊತ್ತಿಕೊಂಡ ಬಿ.ಸಿ.ನಾಗೇಶ್​ 15 ಸಾವಿರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಯಶಸ್ವಿಯಾಗಿ ನಿಭಾಯಿಸಿ "ಅಗ್ನಿ ಪಪರೀಕ್ಷೆ'ಯಲ್ಲಿ ಗೆದ್ದಿದ್ದರು. ಜತೆಗೆ ತನ್ವಿರ್​ ಸೇಠ್​ ಅವಧಿಯಲ್ಲಿ ನಡೆದಿದ್ದ 15 ಸಾವಿರ ಶಿಕ್ಷಕರ ನೇಮಕದಲ್ಲಿನ ಅಕ್ರಮ ಪ್ರಕರಣದಲ್ಲಿ ಹಲವು ಅಧಿಕಾರಿಗಳು ಜೈಲು ಶಿಕ್ಷೆಗೆ ಗುರಿಪಡಿಸಿ ಪರೀಕ್ಷಾ ಸುಧಾರಣೆಗೆ ಕ್ರಮವಹಿಸಿದ್ದರು. ಇದಲ್ಲದೆ, ಹೊಸ ಕೆಪಿಎಸ್​ ಶಾಲೆಗಳ ನಿರ್ಮಾಣ, ಮಕ್ಕಳು ಶಾಲಾ ಅವಧಿಯಲ್ಲಿ ಅಗತ್ಯ ಪ್ರಮಾಣದ ಶುದ್ಧ ಕುಡಿಯುವ ನೀರು ಕುಡಿಯಲು "ವಾಟರ್​ ಬೆಲ್​' ಯೋಜನೆ ಮರು ಜಾರಿಗೆ ತಂದಿದ್ದರು. ಶಿಕ್ಷಕರ ವರ್ಗಾವಣೆ ದಂಧೆ, ಅಕ್ರಮ ಶಾಲೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಾಗೇಶ್​ ದಿಟ್ಟ ಹೆಜ್ಜೆಯಿಟ್ಟಿದ್ದರು.
ಸಂಪರಿವಾರ (ಆರ್​ಎಸ್​ಎಸ್​) ಹಿನ್ನೆಲೆಯ ನಾಗೇಶ್​ ವಿದ್ಯಾರ್ಥಿ ದಿಸೆಯಲ್ಲಿ ಎಬಿವಿಪಿ ತೆಕ್ಕೆಗೆ ಸೆಳೆಯಲ್ಪಟ್ಟಿದ್ದರು. ಬಳಿಕ ಬಿಜೆಪಿ ಸಂಘಟನಾ ಜವಾಬ್ದಾರಿಯನ್ನು ವಹಿಸಿದ ಬಳಿಕ ತಳಮಟ್ಟದಿಂದಲೇ ಪಕ್ಷ ಸಂಘಟಿಸುವ ಮೂಲಕ ಸಂಘಟನಾ ಚತುರತೆಯನ್ನು ಬೆಳೆಸಿಕೊಂಡ ನಾಗೇಶ್​, ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಜತೆಗೆ 2004ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಬಿ.ನಂಜಾಮರಿ ಗೆಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆ ಬಳಿಕ ಸಂಪರಿವಾರ, ಪಕ್ಷದ ವರಿಷ್ಠರ ನಂಟು ಬೆಳೆಸಿಕೊಂಡಿದ್ದ ನಾಗೇಶ್​ಗೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ತೋರಿದ್ದ ದಕ್ಷತೆ, ಕಾರ್ಯಕ್ಷಮತೆ ಗುರುತಿಸಿ 2008ರ ಚುನಾವಣೆಯಲ್ಲಿ ಪಕ್ಷದ ಟಿಕೆಟ್​ ನೀಡಲಾಯಿತು.
ಮೊದಲ ಪ್ರಯತ್ನದಲ್ಲೇ ಶಕ್ತಿ ಸೌಧವನ್ನು ಪ್ರವೇಶಿಸಿದ ಬಿಜೆಪಿ-ಕೆಜೆಪಿ ಇಬ್ಬಾಗವಾದಾಗ ಬಿಜೆಪಿಯಲ್ಲೇ ನೆಲೆನಿಂತರು. ಇದು 2013ರಲ್ಲಿ ಸೋಲಿಗೆ ಕಾರಣವಾಯಿತು. ತದನಂತರ 2018 ರಲ್ಲಿ ಮತ್ತೆ ತಾಲೂಕಿನ ಜನತೆ ಇವರಿಗೆ ಮಣೆ ಹಾಕಿದ್ದಲ್ಲದೇ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ ನಾಗೇಶ್​ಗೆ 2021ರಲ್ಲಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಶಿಕ್ಷಣ, ಸಾಕ್ಷರತೆ ಮತ್ತು ಸಕಾಲ ಖಾತೆ ನಿಭಾಯಿಸುವ ಹೊಣೆಗಾರಿಕೆ ದೊರಕಿಸಿಕೊಟ್ಟಿತ್ತು. ನಾಗೇಶ್​ ತಂದೆ ಬಿ.ಸಿ.ಚಂದ್ರಶೇಖರಯ್ಯ 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ತಿಪಟೂರು ಕ್ಷೇತ್ರದಿಂದ ಶಾಸಕರಾಗಿದ್ದರು. ಬ್ರಾಹ್ಮಣ ಸಮುದಾಯದ ಬಿ.ಸಿ.ನಾಗೇಶ್​ ಜಾತಿ ಬಲವಿಲ್ಲದ ಈ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದು ಸರಳತೆ, ಸಜ್ಜನಿಕ, ಜನರೊಂದಿಗಿನ ಒಡನಾಟ ಮೂಲ ಕಾರಣ.
ಪಕ್ಷ, ಪರಿವಾರ ನಿಷ್ಠೆ ಎಬಿವಿಪಿಯಿಂದ ಎಜುಕೇಷನ್​ ಮಿನಿಸ್ಟರ್​ ಹುದ್ದೆವರೆಗೆ ನಾಗೇಶ್​ರನ್ನು ಕರೆತಂದು ನಿಲ್ಲಿಸಿತ್ತು.
ಸಚಿವರಾಗಿದ್ದಾಗಲು ರೈಲಿನಲ್ಲಿ ಓಡಾಡುತ್ತಿದ್ದ ನಾಗೇಶ್​
ಕೊಬ್ಬರಿ ವರ್ತಕರಾಗಿದ್ದ ಶ್ರೀಮಂತಿಕೆಯ ಕುಟುಂಬ ಹಿನ್ನೆಲೆಯ ಬಿ.ಸಿ.ನಾಗೇಶ್​ ಸರಳತೆ ಮೈ ಗೂಡಿಸಿಕೊಂಡಿದ್ದರು. ದುಂದು ವೆಚ್ಚಗಳಿಗೆ ಕಡಿವಾಣ ಹಾಕಲು ಶಾಸಕರಾಗಿದ್ದಾಗ ಸಚಿವರಾಗಿದ್ದಾಗಲು ವಿಧಾನಸೌದದ ಕೆಲಸ, ಕಾರ್ಯಗಳಿಗೆ ಹೋಗಿಬರಲು ರೈಲನ್ನೇ ಅವಲಂಬಿಸುತ್ತಿದ್ದು ಮಾದರಿ ಜನಪ್ರತಿನಿಧಿಯನ್ನಾಗಿಸಿತ್ತು. ತತ್ವಾದರ್ಶಗಳನ್ನು ಪಾಲಿಸಿಕೊಂಡು ಬರುತ್ತಿದ್ದ ನಾಗೇಶ್​ ಎರಡು ಬಾರಿ ಶಾಸಕರಾಗಿ ಒಮ್ಮೆ ಸಚಿವರಾಗಿದ್ದರು ಎಂದಿಗೂ ತಮ್ಮತನ ಬಿಟ್ಟುಕೊಟ್ಟವರಲ್ಲ.
ಸಹೋದರರ ಅಗಲಿಕೆಯ ಆಘಾತ
ಹಿರಿಯ ಸಹೋದರರಾದ ಬಿ.ಸಿ.ರವಿಶಂಕರ್​, ಬಿ.ಸಿ.ಪ್ರಕಾಶ್​ ಅಕಾಲಿಕ ಮರಣ ನಾಗೇಶ್​ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿದ್ದ ಹೊತ್ತಿನಲ್ಲೇ 2023ರ ವಿಧಾನಸಭಾ ಸೋಲಿನ ಬಳಿಕ ಮೆದುಳಿನಲ್ಲಿ ಸಣ್ಣ ಗೆಡ್ಡೆ ಕಾಣಿಸಿಕೊಂಡು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೆದುಳಿನ ಶಸ್ತ್ರ ಚಿಕಿತ್ಸೆಗೊಳಪಟ್ಟಿದ್ದರು. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ನಾಗೇಶ್​ ವೈದ್ಯರ ದೀರ್ಘಕಾಲ ವಿಶ್ರಾಂತಿ ಪಡೆಯುವ ಸಲಹೆಯನ್ನು ಕಡೆಗಾಣಿಸಿ ಮತ್ತೆ ಸಾರ್ವಜನಿಕ ಸೇವೆಯಲ್ಲಿ ಮೊದಲಿನಂತೆ ತೊಡಗಿಸಿಕೊಂಡಿದ್ದು ಅವರನ್ನು ಮತ್ತೆ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡಿತ್ತು.
ತಿಪಟೂರು ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಬಿ.ಸಿ.ನಾಗೇಶ್​ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದರು. ಸರಳ, ಸಜ್ಜನಿಕೆಯ ಧೀಮಂತ ನಾಯಕರೆನಿಸಿದ್ದು ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗೂ ಅವರ ಕುಟುಂಬ ವರ್ಗಕ್ಕೆ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆ ದು@ಖವನ್ನು ಭರಿಸುವ ಶಕ್ತಿಯನ್ನು ಅನುಗ್ರಹಿಸಲಿ.
ಶ್ರೀ ಸಿದ್ದಲಿಂಗ ಸ್ವಾಮೀಜಿ
ಅಧ್ಯಕ್ಷರು, ಸಿದ್ದಗಂಗಾ ಮಠ

ಸಂ

ಟನೆಯಲ್ಲಿ ಬಹಳ ಶ್ರದ್ಧೆ ಇಟ್ಟುಕೊಂಡವರು ಬಿ.ಸಿ.ನಾಗೇಶ್​ . ಯಾವುದಕ್ಕು ರಾಜಿ ಆಗುತ್ತಿರಲಿಲ್ಲ. ಹೊಂದಾಣಿಕೆ ರಾಜಕೀಯಕ್ಕೆ ವ್ಯತಿರಿಕ್ತವಾಗಿದ್ದವರು. ಜನಾನುರಾಗಿ ಹಾಗೂ ಹೋರಾಟದ

ಲದಿಂದಾಗಿ ಈ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಬಲವಿಲ್ಲದರೂ ಎರಡು ಬಾರಿ ಶಾಸಕರಾಗಲು ಸಾಧ್ಯವಾಗಿತ್ತು. ಅವರ ತಂದೆ ಚಂದ್ರಶೇಖರಯ್ಯ ಜತೆ ಜನತಾ ಪಕ್ಷದಲ್ಲಿದ್ದಾಗ ನನ್ನ ಒಡನಾಟವಿತ್ತು. ಒಂದೇ ಕುಟುಂಬದವರಂತೆ ಇದ್ದೆವು.

ಜೆ.ಸಿ.ಮಾಧುಸ್ವಾಮಿ
ಮಾಜಿ ಸಚಿವ
ನಮ್ಮ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದ ಬಿ.ಸಿ.ನಾಗೇಶ್​ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಲು ಶ್ರಮಿಸಿದ್ದರು. ವಿವೇಕ ಯೋಜನೆ ಅವರ ಕನಸಿನ ಕೂಸಾಗಿತ್ತು. ಇಂತಹ ನಂಬಿಕಸ್ಥ ಗೆಳೆಯ, ಆದರ್ಶ ಸಾರ್ವಜನಿಕ ನಾಯಕ ಹಾಗೂ ರಾಜಕಾರಣಿಯನ್ನು ನಾವು ಕಳೆದುಕೊಂಡಿದ್ದೇವೆ. ರಾಜ್ಯಕ್ಕೆ ಮತ್ತು ವೈಯಕ್ತಿಕವಾಗಿ ನನಗೂ ತುಂಬಲರಾದ ನಷ್ಟ.
ಬಸವರಾಜ ಬೊಮ್ಮಾಯಿ
ಮಾಜಿ ಸಿಎಂ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net