ಹದಿಹರೆಯ ಜೀವನದ ವರ್ಣರಂಜಿತ ಸಮಯ

ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರಿಪ್ರಸಾದ್​ ಅನಿಸಿಕೆ
The colorful phase of teenage life
ಶಿರಾ ತಾಲೂಕಿನ ನವ್ಯದಿಶ&ಸುಶಿಣ ಕಾರ್ಯಕ್ರಮ ಹಾಗೂ ಸಿದ್ಧಾರ್ಥ ಪ್ರೌಢಶಾಲೆ, ತಾಳಗುಂದ ಸಹಯೋಗದಲ್ಲಿ ಆಯೋಜಿಸಿದ್ದ ಉಜ್ವಲ ಭವಿಷ್ಯ ಹದಿಹರೆಯದ ಹೆಜ್ಜೆಗಳಿಂದ ಸುರತ ಪಯಣದೆಡೆಗೆ ಅರಿವು ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರಿಪ್ರಸಾದ್​, ಶಾಲೆ ಪ್ರಾಂಶುಪಾಲ ಅಶೋಕ್​ ಇದ್ದರು.The colorful phase of teenage life
Published on: 

ಶಿರಾ: ಹದಿಹರೆಯದ ಪಯಣದಲ್ಲಿ ಡಿಜಿಟಲ್​ ಯುಗದ ಸವಾಲಿನ ಜತೆ ನಮ್ಮ ಉಜ್ವಲ ಭವಿಷ್ಯವೂ ಒಗ್ಗೂಡಿರುತ್ತದೆ. ಹದಿಹರೆಯ ಜೀವನದ ವರ್ಣರಂಜಿತ ಸಮಯ ಎಂದು ಶಿರಾ ತಾಲೂಕಿನ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರಿಪ್ರಸಾದ್​ ತಿಳಿಸಿದರು.

ತಾಲೂಕಿನ ನವ್ಯದಿಶ&ಸುಶಿಣ ಕಾರ್ಯಕ್ರಮ ಹಾಗೂ ಸಿದ್ಧಾರ್ಥ ಪ್ರೌಢಶಾಲೆ, ತಾಳಗುಂದ ಸಹಯೋಗದಲ್ಲಿ ಶಾಲೆಯಲ್ಲಿ ಆಯೋಜಿಸಿದ್ದ ಸುರತ ಹದಿಹರೆಯ ಮತ್ತು ಉಜ್ವಲ ಭವಿಷ್ಯ ಹದಿಹರೆಯದ ಹೆಜ್ಜೆಗಳಿಂದ ಸುರತ ಪಯಣದೆಡೆಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ವಯಸ್ಸಿನಲ್ಲಿ ಶಾರೀರಿಕ ಹಾಗೂ ಮಾನಸಿಕ ಬದಲಾವಣೆಯಿಂದ ಮನಸ್ಸಿನಲ್ಲಿ ತಳಮಳ ಬಾಹ್ಯ ವಿಷಯಗಳಿಗೆ ಆಕರ್ಷಿತರಾಗುವುದು ಸಹಜ. ಇಂದಿನ ಡಿಜಿಟಲ್​ ಯುಗದಲ್ಲಿ ಆಕರ್ಷಣೆ ಹೊರಜಗತ್ತಿಗೆ ಸೀಮಿತವಾಗಿರದೆ, ಸಾಮಾಜಿಕ ಮಾಧ್ಯಮಗಳ ರೂಪದಲ್ಲಿ ಮನೆಮಾಡಿವೆ ಎಂದರು.

ಜೆ.ಎಸ್​.ವಿದ್ಯಾಭಾನ್​ ಮಾತನಾಡಿ, ಹದಿಹರೆಯದ ಪ್ರತಿ ಹೆಜ್ಜೆಯನ್ನೂ ಜಾಗರೂಕತೆಯಿಂದ ಇರಬೇಕು. ಆನ್​ಲೈನ್​ ಅಪಾಯಗಳಿಂದ ದೂರವಿದ್ದು, ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ ಹೆತ್ತವರ ಕನಸಿನ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಬಹುದು ಎಂದರು.

ಜೆ.ಎಸ್​ ಜನಾರ್ಧನ್​ ಮಾತನಾಡಿ, ಹದಿಹರೆಯ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ವರ್ಣರಂಜಿತ ಹಾಗೂ ಸೂಕ್ಷ$್ಮಟ್ಟ ನವ್ಯದಿಶ ಸಂಸ್ಥೆಯು ಪ್ರಸ್ತುತ 16 ಪ್ರೌಢಶಾಲೆಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ 10 ಪ್ರಮುಖ ಜೀವನ ಕೌಶಲ ವಿವಿಧ ಚಟುವಟಿಕೆಗಳಿಂದ ವಿದ್ಯಾರ್ಥಿಗಳಿಗೆ ತಲುಪಿಸುತ್ತಿದೆ ಎಂದರು.