ಗಣಿಬಾಧಿತ ನಿಧಿಯ ಕಾಮಗಾರಿ ಕಳಪೆ

ಡಾ.ಸಂಜಯ್​ ಎಸ್​.ಬಿಜ್ಜೂರಗೆ ಸ್ಥಳಿಯರ ದೂರು / ಗುಣಮಟ್ಟವಿಲ್ಲ ಕೆಎಂಆರ್​ಸಿಎಲ್​ ಯೋಜನೆ ಕೆಲಸ
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಗಣಿಬಾಧಿತ ಪ್ರದೇಶದ ಪುನಶ್ಚೇನತ ನಿಧಿಯಿಂದ ನಿರ್ಮಿಸಿರುವ ರಸ್ತೆ ಕಾಮಗಾರಿಯನ್ನು ಯೋಜನೆ ಮೇಲುಸ್ತುವಾರಿ ಪ್ರಾಧಿಕಾರದ ಸಲಹೆಗಾರ ಡಾ.ಸಂಜಯ್​ ಎಸ್​.ಬಿಜ್ಜೂರ ನೇತೃತ್ವದ ತಂಡ ಪರಿಶೀಲಿಸಿತು.
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಗಣಿಬಾಧಿತ ಪ್ರದೇಶದ ಪುನಶ್ಚೇನತ ನಿಧಿಯಿಂದ ನಿರ್ಮಿಸಿರುವ ರಸ್ತೆ ಕಾಮಗಾರಿಯನ್ನು ಯೋಜನೆ ಮೇಲುಸ್ತುವಾರಿ ಪ್ರಾಧಿಕಾರದ ಸಲಹೆಗಾರ ಡಾ.ಸಂಜಯ್​ ಎಸ್​.ಬಿಜ್ಜೂರ ನೇತೃತ್ವದ ತಂಡ ಪರಿಶೀಲಿಸಿತು.
Published on: 

ವಿಜಯವಾಣಿ ಸುದ್ದಿಜಾಲ ತುಮಕೂರು

ಗಣಿಬಾಧಿತ ಪ್ರದೇಶದ ಪುನಶ್ಚೇನತ ನಿಧಿಯಿಂದ ನೂರಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಾಮಗಾರಿ ಕಳಪೆಯಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮೂರನೇ ವ್ಯಕ್ತಿ ಪರಿಶೀಲನೆಗೆ ಶಿಾರಸು ಮಾಡಲಾಗುವುದು ಎಂದು ಯೋಜನೆ ಮೇಲುಸ್ತುವಾರಿ ಪ್ರಾಧಿಕಾರದ ಸಲಹೆಗಾರ ಡಾ.ಸಂಜಯ್​ ಎಸ್​.ಬಿಜ್ಜೂರ ಭರವಸೆ ನೀಡಿದರು.

ಜಿಲ್ಲೆಯ ವಿವಿಧ ಗಣಿಬಾಧಿತ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ್ದ ಸಂಜಯ್​ ಎಸ್​.ಬಿಜ್ಜೂರ ನೇತೃತ್ವದ ತಂಡದೆದುರು ಚಿಕ್ಕನಾಯಕನಹಳ್ಳಿ ತಾಲೂಕು ಕೈಮರ&ಚಿಕ್ಕನಾಯಕನಹಳ್ಳಿ ರಸ್ತೆಯ ಬಗ್ಗೆ ಸ್ಥಳಿಯರು ದೂರುಗಳನ್ನೇಳಿದರು. ರಸ್ತೆಯನ್ನು ಅವೈಜ್ಞಾನಿಕವಾಗಿ ಮನಬಂದಂತೆ ಮಾಡಲಾಗಿದ್ದು, ಕೆಲವು ಕಡೆಗಳಲ್ಲಿ ಬಿರುಕುಬಿಟ್ಟಿದೆ ಎಂದು ಜನರು ಗಮನಕ್ಕೆ ತಂದರು.

ಹೋಯ್ಸಳಕಟ್ಟೆ ಐಟಿಐ ಕಾಲೇಜು ಕಾಂಪೌಂಡ್​ ಮಳೆಗೆ ಬಿದ್ದು ಹೋಗಿದ್ದು ಹಾಗೂ ಈಗ ಏಕಾಏಕಿ ಯಾವುದೇ ಅನುಮೋದನೆ ಇಲ್ಲದೆ ಮರು ನಿರ್ಮಿಸಿರುವ ಬಗ್ಗೆಯೂ ಸ್ಥಳಿಯರು ತಂಡದ ಗಮನಕ್ಕೆ ತಂದರು.

ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕೆಎಂಆರ್​ಸಿಎಲ್​ ಅಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿವೆ. ಅಲ್ಲದೆ, ಇವು ಪರಿಸರಕ್ಕೆ ಹಾನಿಯನ್ನುಂಟುಮಾಡಿದ್ದು, ಇದು ದೀರ್ಘಕಾಲೀನ ಗಂಭೀರ ಪರಿಣಾಮಗಳಿಗೆ ಎಡೆಮಾಡಿಕೊಡಬಹುದು. ಆದ್ದರಿಂದ, ಈ ಕಾಮಗಾರಿಗಳ ಗುಣಮಟ್ಟ ಮತ್ತು ಪರಿಸರದ ಮೇಲಾಗಿರುವ ಹಾನಿಯನ್ನು ಸರಿಯಾಗಿ ಮೌಲ್ಯಮಾಪನ ಮಾಡಲು ಒತ್ತಾಯಿಸಿ ನಾಗರಿಕರು ಮನವಿ ಸಲ್ಲಿಸಿದರು.

ಪಾರದರ್ಶಕವಾದ "ತೃತೀಯ ಪಕ್ಷದ ಪರಿಶೀಲನೆ'ಯನ್ನು ನಡೆಸಬೇಕು, ಸುಮಾರು ಒಂಬತ್ತು ತಿಂಗಳ ಹಿಂದೆ ತುಮಕೂರು ಜಿಲ್ಲಾಧಿಕಾರಿಗಳಿಗೆ ನಿಧಿಯ ದುರ್ಬಳಕೆಯ ಆರೋಪದ ಕುರಿತು ಮನವಿ ಸಲ್ಲಿಸಿದ್ದರೂ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದರು.

ಕೆಎಂಆರ್​ಸಿಎಲ್​ನಿಂದ ಮಂಜೂರಾದ ಅನುದಾನವನ್ನು ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಮತ್ತು ನಿಗದಿತ ಉದ್ದೇಶಕ್ಕಾಗಿಯೇ ಬಳಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಏಕೈಕ ಉದ್ದೇಶದಿಂದ, ಮನವಿ ಸಲ್ಲಿಸುತ್ತಿದ್ದೇವೆ ಎಂದು ಚಿಕ್ಕನಾಯಕನಹಳ್ಳಿಯಲ್ಲಿ ತಿಳಿಸಿದರು.

ಸಂಜಯ್​ ಎಸ್​.ಬಿಜ್ಜೂರ ಅವರ ತಂಡ ಬುಧವಾರ ಬೆಳಗ್ಗೆ ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಜಿಟಿಟಿಸಿನಿಂದ ನಿರ್ಮಿಸಲಾಗಿರುವ ವಿದ್ಯಾರ್ಥಿಗಳ ಹಾಸ್ಟೆಲ್​ ಹಾಗೂ ವರ್ಕ್​ಶಾಪ್​, ತುಮಕೂರು ನಗರದಲ್ಲಿ ನಿಮಾರ್ಣ ಹಂತದಲ್ಲಿರುವ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ, ಗುಬ್ಬಿ ಹಾಗೂ ನಿಟ್ಟೂರುಗಳಲ್ಲಿ ನಿರ್ಮಿಸಲಾಗುತ್ತಿರುವ ಅಂಗನವಾಡಿ ಕಟ್ಟಡ ಅವರು ಪರಿಶೀಲಿಸಿತು.

ಗುಬ್ಬಿ ಹಾಗೂ ತಿಪಟೂರು ತಾಲೂಕುಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗಿರುವ ರಸ್ತೆ ಕಾಮಗಾರಿ ಪ್ರಗತಿ ವೀಕ್ಷಿಸಿದ ನಂತರ ಅರಣ್ಯ ಇಲಾಖೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತೋರಿಸಿರುವ ಪ್ಲಾಂಟೇಶನ್​ ಕಾಮಗಾರಿ, ಆರ್​ಡಿಪಿಆರ್​ ಇಲಾಖೆಯ ಬೈಲಪ್ಪನ ಮಠ ಹಾಗೂ ಮುದ್ದೇನಹಳ್ಳಿ ರಸ್ತೆ ಕಾಮಗಾರಿ ಮತ್ತು ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗಿರುವ ಕೈಮರ-&ಬೆಳ್ಳಾರ ರಸ್ತೆ ಕಾಮಗಾರಿಗಳನ್ನು ಸಹ ಸಲಹೆಗಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕ್ಷೇತ್ರ ಭೇಟಿ ಸಂದರ್ಭದಲ್ಲಿ ವಿವಿಧ ಕಾಮಗಾರಿಗಳ ಗುಣಮಟ್ಟ, ಪ್ರಗತಿ, ಅನುಷ್ಠಾನದ ಹಂತ, ಲೋಗೋ ಬೋರ್ಡ್​ ಇತ್ಯಾದಿ ಕುರಿತಂತೆ ಹಾಗೂ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಕುರಿತು ಆಯಾ ಇಲಾಖೆಗಳ ತಾಂತ್ರಿಕ ಅಧಿಕಾರಿಗಳು ಹಾಗೂ ಮುಖ್ಯಸ್ಥರಿಗೆ ಡಾ.ಸಂಜಯ್​ ಎಸ್​.ಬಿಜ್ಜೂರ ಅಗತ್ಯ ಸಲಹೆ ಮತ್ತು ಸೂಚನೆ ನೀಡಿದರು.

ಕಾಮಗಾರಿಗಳ ಅನುಷ್ಠಾನದಲ್ಲಿ ಎದುರಾಗುವ ತಾಂತ್ರಿಕ ಅಥವಾ ಆಡಳಿತಾತ್ಮಕ ಸಮಸ್ಯೆಗಳನ್ನು ತಕ್ಷಣವೇ ಗಮನಕ್ಕೆ ತಂದು ಪರಿಹರಿಸಿಕೊಳ್ಳುವಂತೆ ಸೂಚಿಸಿದರು. ಕೆಲವು ಕಾಮಗಾರಿಗಳಿಗೆ ಅರಣ್ಯ ಇಲಾಖೆ ತಕರಾರು ಮಾಡುತ್ತಿರುವ ಬಗ್ಗೆಯೂ ಅಧಿಕಾರಿಗಳು ತಂಡದ ಗಮನಕ್ಕೆ ತಂದರು. ಭೇಟಿ ಸಂದರ್ಭದಲ್ಲಿ ಆಯಾ ಇಲಾಖೆ ಮುಖ್ಯಸ್ಥರು ಖುದ್ದು ಹಾಜರಿದ್ದು ಕಾಮಗಾರಿ ಬಗ್ಗೆ ವಿವರಣೆ ನೀಡಿದರು.