ಎಸ್ಸೆಸ್ಸೆಲ್ಸಿಯಲ್ಲಿ ಶೈಕ್ಷಣಿಕ ಜಿಲ್ಲೆಯ ಹೊಸ ದಾಖಲೆ

ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದಿರುವ ತುಮಕೂರಿನ ಶ್ರೀದೇವಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾದಿಯಾಬಾನು ಅವರನ್ನು ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್​.ಹುಲಿನಾಯ್ಕರ್​ ಅಭಿನಂದಿಸಿದರು. ಡಾ.ರಮಣ್​ ಹುಲಿನಾಯ್ಕರ್​, ಡಾ.ಲಾವಣ್ಯ, ಮುಖ್ಯಶಿಕ್ಷಕ ವಿಜಯಕುಮಾರ್​ ಮತ್ತಿತರರು ಇದ್ದರು.
ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದಿರುವ ತುಮಕೂರಿನ ಶ್ರೀದೇವಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾದಿಯಾಬಾನು ಅವರನ್ನು ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್​.ಹುಲಿನಾಯ್ಕರ್​ ಅಭಿನಂದಿಸಿದರು. ಡಾ.ರಮಣ್​ ಹುಲಿನಾಯ್ಕರ್​, ಡಾ.ಲಾವಣ್ಯ, ಮುಖ್ಯಶಿಕ್ಷಕ ವಿಜಯಕುಮಾರ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯಕ್ಕೆ ಸಾದಿಯಾಬಾನು ದ್ವೀತಿಯ, ಹರ್ಷಿತಾ ತೃತೀಯ
  • ತುಮಕೂರು-29, ಮಧುಗಿರಿ-34ನೇ ಸ್ಥಾನ
  • 73 ಸರ್ಕಾರಿ ಶಾಲೆಗಳಿಗೆ ಶೇಕಡ ನೂರು ಫಲಿತಾಂಶ
ತುಮಕೂರು: ಶೈಕ್ಷಣಿಕ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ತುಮಕೂರು ಹಾಗೂ ಮಧುಗಿರಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರಾಸರಿ ಫಲಿತಾಂಶದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿವೆಯಾದರೂ ಒಟ್ಟಾರೆ ಸ್ಥಾನದಲ್ಲಿ ತುಮಕೂರು-29 ಹಾಗೂ ಮಧುಗಿರಿ -34ನೇ ಸ್ಥಾನ ಕುಸಿದಿವೆ.
ತುಮಕೂರು ಶೈಕ್ಷಣಿಕ ಜಿಲ್ಲೆ ಶೇ.92.20 ದಾಖಲೆ ಫಲಿತಾಂಶ ಪಡೆದು ಕಳೆದ ಬಾರಿಗಿಂತ ಶೇ.24.90 ರಷ್ಟು ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಆದರೂ, ರಾಜ್ಯದಲ್ಲಿ 29ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ 20ನೇ ಸ್ಥಾನದಲ್ಲಿತ್ತು.
ಮಧುಗಿರಿ ಶೈಕ್ಷಣಿಕ ಜಿಲ್ಲೆ ಶೇ.90.24 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಶೇ.29.25ರಷ್ಟು ಸರಾಸರಿ ಫಲಿತಾಂಶ ಹೆಚ್ಚಳವಾಗಿದೆಯಾದರೂ, ರಾಜ್ಯಕ್ಕೆ 34ನೇ ಸ್ಥಾನ ಪಡೆದಿದೆ. ಕಳೆದ ಬಾರಿ 28ನೇ ಸ್ಥಾನಗಳಿಸಿತ್ತು. ಒಟ್ಟಾರೆ ಸರಾಸರಿ ಫಲಿತಾಂಶದಲ್ಲಿ ಉತ್ತಮ ಸುಧಾರಣೆ ಕಂಡಿದೆಯಾದರೂ ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳು ಇಡೀ ರಾಜ್ಯದಲ್ಲಿ ಸ್ಥಾನಗಳಿಕೆಯಲ್ಲಿ ಪತನ ಕಂಡಿವೆ.
ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆಗೆ 20466 ವಿದ್ಯಾರ್ಥಿಗಳು ಹಾಜರಾಗಿದ್ದು 18869 ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದಿದ್ದು ಸರಾಸರಿ ಶೇ.92.24 ಫಲಿತಾಂಶಗಳಿಸಿದೆ. ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 11037 ವಿದ್ಯಾರ್ಥಿಗಳ ಪೈಕಿ 9960 ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದಿದ್ದಾರೆ.
ತುಮಕೂರು ನಗರದ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಶ್ರೀದೇವಿ ವಿದ್ಯಾಮಂದಿರದ ಸಾದಿಯಾಬಾನು (624) ರಾಜ್ಯಕ್ಕೆ ದ್ವೀತಿಯ ಟಾಪರ್​ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಕುಣಿಗಲ್​ ತಾಲೂಕಿನ ಸ್ಟೆಲ್ಲಾ ಮೇರಿಸ್​ನ ಜಿ.ವಿ.ಭೈರವಿ (622), ಬಿ.ಜಿ.ಚಂದನ (622), ಚಿಕ್ಕನಾಯಕನಹಳ್ಳಿ ತಾಲೂಕಿನ ಮೇಲನಹಳ್ಳಿ ಮೊರಾರ್ಜಿ ದೇಸಾಯಿ ವಸತಿಶಾಲೆಯ ಕೆ.ಯಶ್ವಂತ್​ (622) ಅಂಕಗಳಿಸಿದ್ದಾರೆ. ಇನ್ನೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಚಿರಾಗ್​ ಶಾಲೆಯ ಹರ್ಷಿತಾ (623) ರಾಜ್ಯಕ್ಕೆ ತೃತೀಯ ಟಾಪರ್​ ಆಗಿದ್ದಾರೆ.
73 ಸರ್ಕಾರಿ ಶಾಲೆಗಳಿಗೆ ಶೇ.100: ಈ ಬಾರಿ ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 73 ಸರ್ಕಾರಿ ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ. 29 ಅನುದಾನಿತ, 54 ಅನುದಾನರಹಿತ ಶಾಲೆಗಳು ಶೇ.100 ಫಲಿತಾಂಶಗಳಿಸಿರುವುದು ವಿಶೇಷವೆನಿಸಿದೆ.
ವಿದ್ಯಾರ್ಥಿನಿಯರೇ ಮೇಲುಗೈ
ಎಂದಿನಂತೆ ಎಸ್ಸೆಸ್ಸೆಲ್ಸಿಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 9758 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು 9214 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ. ಶೇ.94.43ರಷ್ಟು ಬಾಲಕಿಯರು ಪಾಸಾಗಿದ್ದಾರೆ. ಇನ್ನೂ 10708 ಬಾಲಕರಲ್ಲಿ 9655 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಶೇ.90.17 ಫಲಿತಾಂಶ ದಾಖಲಿಸಿದ್ದಾರೆ. ಶೇ.94.01ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶೇ.89.02 ನಗರ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಬಾಕ್ಸ್​
ತಾಲೂಕುವಾರು ಫಲಿತಾಂಶ
ತಾಲೂಕು ಶೇಕಡ ಫಲಿತಾಂಶ
ತಿಪಟೂರು 97.29
ತುರುವೇಕೆರೆ 95.19
ಚಿ.ನಾ.ಹಳ್ಳಿ 94.29
ಕುಣಿಗಲ್​ 93.69
ಗುಬ್ಬಿ 91.79
ತುಮಕೂರು 89.23
ಒಟ್ಟು 92.20
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net