‘ಪುನುಗುಬೆಕ್ಕು ಸಾಗಾಟ ಪತ್ತೆ’ ಮೂವರ ಬಂಧನ

ಸಾಂದರ್ಭೀಕ ಚಿತ್ರ
ಸಾಂದರ್ಭೀಕ ಚಿತ್ರ
Published on
ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಸಂರಕ್ಷಿತ ವನ್ಯಜೀವಿಯಾದ ಪುನುಗು ಬೆಕ್ಕು ಸಾಗಾಟ ಪತ್ತೆಯಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಿದ್ದರಾಮನಗರದ ಪಿ.ಟಿ.ಅಶೋಕ್, ಗಾಳಿರಂಗಯ್ಯನಹಟ್ಟಿ ಗ್ರಾಮದ ರವಿಕುವಾರ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ದೊಡ್ಡಎಣ್ಣೆಗೆರೆ ಗ್ರಾಮದ ಪರೇಶ್ ಬಂಧಿತರು. ಹಾಲಗೋಣ ಗ್ರಾಮದ ಬಳಿ ಸಂರಕ್ಷಿತ ವನ್ಯಪ್ರಾಣಿಯನ್ನು ಅಕ್ರಮವಾಗಿ ಸಾಗಾಟ ವಾಡುತ್ತಿರುವ ಖಚಿತ ವಾಹಿತಿಯ ಮೇರೆಗೆ ಚಿಕ್ಕನಾಯಕನಹಳ್ಳಿ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಹಾಲಗೋಣ ಗ್ರಾಮದ ವ್ಯಾಪ್ತಿಯಲ್ಲಿ ಗಸ್ತು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅನುವಾನಾಸ್ಪದವಾಗಿ ನಿಂತಿದ್ದ ಕಾರನ್ನು ಪರಿಶೀಲಿಸಿದಾಗ ಕಾರಿನ ಡಿಕ್ಕಿಯಲ್ಲಿ ಜೀವಂತ ಪುನುಗು ಬೆಕ್ಕು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅದನ್ನು ಸುರಕ್ಷಿತವಾಗಿ ವಶಕ್ಕೆ ಪಡೆದುಕೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net