ಆಗ್ನೇಯದಲ್ಲು ಎನ್​ಡಿಎ ಭರ್ಜರಿ ಗೆಲುವು

ಬಿಜೆಪಿಯ ಕೆ.ಎಂ.ಸುರೇಶ್​ಗೆ ಜಯ, ಶಶಿಗೆ ಕೈ ಹಿಡಿಯದ ಮತದಾರ
K.M.Suresh
ಕೆ.ಎಂ.ಸುರೇಶ್​
Published on: 

ತುಮಕೂರು: ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿ ಬಿಜೆಪಿಯ ಕೆ.ಎಂ.ಸುರೇಶ್​ ಪ್ರಚಂಡ ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ಕೆ.ಎಂ.ಸುರೇಶ್​ 66020 ಮತ ಪಡೆದರೆ, ಕಾಂಗ್ರೆಸ್​ ಅಭ್ಯರ್ಥಿ ಶಶಿಹುಲಿಕುಂಟೆಮಠ್​ 42922 ಮತಗಳಿಸಿದರು. ಸುರೇಶ್​ 23098 ಮತಗಳ ಅಂತರದಿಂದ ಜಯಗಳಿಸಿದ್ದು ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ರ್ನಿಣಯವಾಯಿತು. ಬಿಜೆಪಿ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಲಿ ಎಂಎಲ್ಸಿ ಚಿದಾನಂದ ಗೌಡ ಬದಲು ದಾವಣಗೆರೆ ಮೂಲದ ಸುರೇಶ್​ರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಕಾಂಗ್ರೆಸ್​ನಿಂದ ತುಮಕೂರಿನ ಶಶಿಹುಲಿಕುಂಟೆ ಮಠ್​ ಸ್ಪರ್ಧಿಸಿದ್ದರು. ಇಬ್ಬರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು ಈ ಬಾರಿ ಬಿಜೆಪಿ-ಕಾಂಗ್ರೆಸ್​ ನಡುವೆ ನೇರ ಸ್ಪರ್ಧೆ ಏರ್ಪಟಿತ್ತು. ಅಂತಿಮವಾಗಿ ಎನ್​ಡಿಎ ಒಕ್ಕೂಟ ಗೆಲುವಿನ ನಗೆಬೀರಿತು.

20076 ಮತ ತಿರಸತ: ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ 20076 ಮತಗಳು ತಿರಸತಗೊಂಡಿವೆ. ಕಣದಲ್ಲಿ ಬಿಜೆಪಿ, ಕಾಂಗ್ರೆಸ್​ ಸೇರಿ ಅಭ್ಯರ್ಥಿಗಳಿದ್ದು ಒಟ್ಟು 132138 ಮತ ಚಲಾವಣೆ ಆಗಿತ್ತು.

ರಾತ್ರಿ ಇಡೀ ಏಣಿಕೆ: ಮಂಗಳವಾರ ಸಂಜೆ 4ಕ್ಕೆ ಮತ ಎಣಿಕೆ ಪ್ರಾರಂಭವಾಗಿದ್ದು ಬುಧವಾರ ಬೆಳಗ್ಗೆ ಅಂತಿಮ ಸುತ್ತಿನ ಎಣಿಕೆ ಪೂರ್ಣಗೊಂಡಿತು. ಮೊದಲ ಸುತ್ತಿನಿಂದಲೇ ಬಿಜೆಪಿ ಸುರೇಶ್​ ಮುನ್ನಡೆ ಸಾಧಿಸಿಕೊಂಡು ಬಂದಿದ್ದು ಪ್ರತಿ ಸುತ್ತಿನಲ್ಲು ಮುನ್ನಡೆ ಅಂತರ ಹೆಚ್ಚಿಸಿಕೊಂಡು ಬಂದರು. ಅಂತಿಮ ಹಾಗೂ 10ನೇ ಸುತ್ತಿನ ಏಣಿಕೆ ಬಳಿಕ ಸುರೇಶ್​ 66020 ಮತಗಳಿಸಿ ಜಯದ ನಗೆಬೀರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net