ಮೆಟ್ರೋ ರೈಲು ವಿಸ್ತರಣೆ ಇನ್ನಷ್ಟು ಪ್ರಗತಿ

ಡಿಸಿಎಂ ಡಾ.ಜಿ.ಪರಮೇಶ್ವರ
DCM G.Parameshwar with Siddalinga Swamiji
ಡಾ.ಜಿ.ಪರಮೇಶ್ವರ
Published on: 

ತುಮಕೂರು: ತುಮಕೂರಿಗೆ ಮೆಟ್ರೋ ರೈಲು ಯೋಜನೆಯ ಕಾರ್ಯಸಾಧ್ಯತಾ ವರದಿ ಬಳಿಕ ವಿವಿರವಾದ ಯೋಜನಾ ವರದಿ (ಡಿಪಿಆರ್​) ಸಿದ್ಧಪಡಿಸಿದ್ದು ಇದೀಗ ಆಸಕ್ತ ಸಂಸ್ಥೆಗಳಿಂದ ಅಭಿವೃಕ್ತಿ ಆಸಕ್ತಿ (ಎಕ್ಸ್​ಪ್ರೆಷನ್​ ಆ್​ ಇಂಟರೆಸ್ಟ್​ ) ಆಹ್ವಾನಿಸುವ ಹಂತಕ್ಕೆ ಸಿದ್ಧತೆ ನಡೆದಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ನಡೆದ ಧಾನ್ಯ ವ್ಯಾಪಾರಿಗಳ ಸಂದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಮೆಟ್ರೋ ರೈಲು ಸಂಪರ್ಕ ಕಲ್ಪಿಸುವುದು ತಮ್ಮ ಪ್ರಮುಖ ಆಶಯಗಳಲ್ಲಿ ಒಂದಾಗಿದೆ. ಕಳೆದ ಐದಾರು ವರ್ಷಗಳಿಂದ ಈ ಉದ್ದೇಶಕ್ಕಾಗಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಯೋಜನೆ ಸಾಕಾರಗೊಂಡರೆ ಬೆಂಗಳೂರು ಮತ್ತು ತುಮಕೂರು ನಗರಗಳ ನಡುವಿನ ಸಂಪರ್ಕ ಹಾಗೂ ಅಭಿವೃದ್ಧಿಗೆ ಹೊಸ ಆಯಾಮದೊರೆಯಲಿದೆ. ಇದರಿಂದ ಎರಡೂ ನಗರಗಳು ಇನ್ನಷ್ಟು ಹತ್ತಿರವಾಗಲಿದ್ದು, ತುಮಕೂರಿನ ಬೆಳವಣಿಗೆಗೆ ದೊಡ್ಡ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.

ಜಿಎಸ್ಟಿ 2ನೇ ಸ್ಥಾನ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ವ್ಯಾಪಾರ ಮತ್ತು ಕೈಗಾರಿಕಾ ಚಟುವಟಿಕೆಗಳು ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದಕ್ಕೆ ಇದು ಒಂದು ಸೂಚಕವಾಗಿದೆ. ರಾಜ್ಯ ಕೈಗಾರಿಕೆ, ಉತ್ಪಾದನೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯ್ತ ಸಾಗುತ್ತಿದೆ. ಪಕ್ಷಾತಿತವಾಗಿ ಕರ್ನಾಟಕದ ಆಡಳಿತ ಪರಂಪರೆಯನ್ನು ಗಮನಿಸಿದಾಗ, ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ಸದಾ ಮುಂಚೂಣಿಯಲ್ಲಿರುವುದನ್ನು ಕಾಣಬಹುದು ಎಂದರು.

ಎಲೆಕ್ಟ್ರಾನಿಕ್ಸ್​, ಕಂಪ್ಯೂಟರ್​ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರಗಳಲ್ಲಿ ಕರ್ನಾಟಕ ವೇಗವಾಗಿ ಮುನ್ನಡೆಯುತ್ತಿದೆ. ದೇಶದ ಎಐ ಸಂಸ್ಥೆಗಳ ಪೈಕಿ ಸುಮಾರು ಶೇ.60ರಷ್ಟು ಸಂಸ್ಥೆಗಳು ಕರ್ನಾಟಕದಲ್ಲಿವೆ. ಸುಮಾರು 600 ಎಐ ಸ್ಟಾರ್ಟ್​ ಅಪ್​ಗಳು ಆರಂಭವಾಗಿರುವುದು ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗೆ ಸಾಕ್ಷಿಯಾಗಿದೆ. ಈ ಪ್ರಗತಿಯ ಹಿಂದೆ ವ್ಯಾಪಾರ ವಲಯದಲ್ಲಿರುವ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಯು ಪ್ರಮುಖಪಾತ್ರವಹಿಸುತ್ತವೆ.

ಡಾ.ಜಿ.ಪರಮೇಶ್ವರ

ಡಿಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net