ಸಾಹಿತಿಗಳಿಂದ ಸಮಾಜ ನಿರ್ಮಾಣ

ಗುಬ್ಬಿ ಪಟ್ಟಣದಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಚಂದ್ರಶೇಖರ ಕಂಬಾರ, ಎಸ್​.ಆರ್​.ಶ್ರೀನಿವಾಸ್​, ಎಲ್​.ಎನ್​.ಮುಕುಂದರಾಜ್​, ಕೆ.ಎಂ.ಗಾಯತ್ರಿ,  ಕರಿಯಪ್ಪ, ಕೆ.ಎಸ್​.ಸಿದ್ದಲಿಂಗಪ್ಪ, ಸುಮಾಸತೀಶ್​ ಮತ್ತಿತರರು ಇದ್ದರು.
ಗುಬ್ಬಿ ಪಟ್ಟಣದಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಚಂದ್ರಶೇಖರ ಕಂಬಾರ, ಎಸ್​.ಆರ್​.ಶ್ರೀನಿವಾಸ್​, ಎಲ್​.ಎನ್​.ಮುಕುಂದರಾಜ್​, ಕೆ.ಎಂ.ಗಾಯತ್ರಿ, ಕರಿಯಪ್ಪ, ಕೆ.ಎಸ್​.ಸಿದ್ದಲಿಂಗಪ್ಪ, ಸುಮಾಸತೀಶ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಸಾಹಿತ್ಯ ಅಕಾಡೆಮಿ
  • ಕೆಎಸ್​ಆರ್​ಟಿಸಿ ನಿಗಮದ ಅಧ್ಯಕ್ಷ ಎಸ್​.ಆರ್​.ಶ್ರೀನಿವಾಸ್​
  • ಸಾಹಿತ್ಯಶ್ರೀ, ಗೌರವ ಪ್ರಶಸ್ತಿ ಸೇರಿ ವಿವಿಧ ಪ್ರಶಸ್ತಿ ಪ್ರದಾನ
ಗುಬ್ಬಿ: ಸಾಹಿತಿಗಳು ಇಲ್ಲದಿದ್ದರೆ ಸುಮುಧುರ ಸಮಾಜ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಬರಹಗಳ ಮೂಲಕ ಸಾಹಿತಿಗಳು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಆದ ಶಾಸಕ ಎಸ್​.ಆರ್​.ಶ್ರೀನಿವಾಸ್​ ಹೇಳಿದರು.
ಪಟ್ಟಣದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ&-2024, ಸಾಹಿತ್ಯಶ್ರಿ ಪ್ರಶಸ್ತಿ & 2024, ಪುಸ್ತಕ ಪ್ರದಾನ-2023, ದತ್ತಿ ಬಹುಮಾನ -2023 ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲೂಕುಮಟ್ಟದಲ್ಲಿ ಆಯೋಜಿಸುವ ಸಾಹಿತ್ಯವಲಯದ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ನೀಡಿದರೆ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಅನುಕೂಲಾಗಲಿದೆ ಎಂದರು.
ಸಾಹಿತ್ಯದಲ್ಲಿ ನನಗೆ ಆಸಕ್ತಿಯಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಸೇವಾನಿರತನಾಗಿದ್ದೇನೆ. ಯಾರು ಯಾವ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುತ್ತೇವೋ ಅದರದ್ದೇ ಅಭಿರುಚಿ, ಆಸಕ್ತಿಯನ್ನು ರೂಢಿಸಿಕೊಳ್ಳಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವರು ಸಮಾಜಮುಖಿಯಾಗಿರುತ್ತಾರೆ. ಅವರು ಸಾಹಿತ್ಯದ ಮೂಲಕ ಸಮಾಜದಲ್ಲಿ ಬದಲಾವಣೆ ತರುತ್ತಿದ್ದಾರೆ ಎಂದು ತಿಳಿಸಿದರು.
ಗುಬ್ಬಿ ತಾಲೂಕು ಕಲೆ , ಸಂಸತಿಗೆ ಅಪಾರ ಕೊಡುಗೆ ಕೊಟ್ಟಿದೆ. ಕಲೆಗೆ ಹೆಚ್ಚು ಕಾಣಿಕೆ ನೀಡಿದಂತಹ ಗುಬ್ಬಿ ರಾಜ್ಯಕ್ಕೆ ಮಾದರಿಯಾಗಿದೆ. ಚಂದ್ರಶೇಖರ ಕಂಬಾರ ಅವರಂತಹ ಹಿರಿಯ ಸಾಹಿತಿಗಳ ಜತೆ ಕೂರುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಜೀವನದಲ್ಲಿ ಎರಡು ಘಟನೆಗಳನ್ನು ಎಂದಿಗೂ ಮರೆಯುವಂತಿಲ್ಲ. 1972ರಲ್ಲಿ ನನಗೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಆ ಸಂದರ್ಭ ಮತ್ತು ಇವತ್ತು ಸಾಹಿತಿಗಳಿಗೆ ಗುಬ್ಬಿಯಲ್ಲಿ ಸನ್ಮಾನಿಸಿ, ಪ್ರಶಸ್ತಿ ಪ್ರದಾನ ಮಾಡುವ ಅವಕಾಶ ಸಿಕ್ಕಿದ್ದನ್ನು ಯಾವತ್ತು ಮರೆಯಲಾಗುವುದಿಲ್ಲ ಎಂದರು.
ಕನ್ನಡ ಮತ್ತು ಸಂಸತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯತ್ರಿ, ರಾಜ್ಯ ಸಾಹಿತ್ಯ ಅಕಾಡೆಮಿಯು ಮೈಸೂರು, ಹಾವೇರಿ ಇನ್ನೂ ಮುಂತಾದ ಕಡೆ ಕಾರಾಗೃಹಗಳಲ್ಲಿ ಕವಿಕಾವ್ಯ ಕಮ್ಮಟಗಳನ್ನು ಇನ್ನೂ ಮುಂತಾದ ಸಾಹಿತ್ಯ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಯುವ ಕವಿಗಳು,ಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರ ಪುಸ್ತಕಗಳನ್ನು ಪ್ರಕಟಿಸುವ ಕೆಲಸ ಮಾಡುತ್ತಿದೆ. ಸಾಹಿತ್ಯ ಆಸಕ್ತರನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುತ್ತಿದೆ. ಸಾಹಿತ್ಯ ಅಕಾಡೆಮಿ ಅನುದಾನವನ್ನು ಅತ್ಯಂತ ಕ್ರಿಯಾಶೀಲವಾಗಿ ಬಳಕೆ ಮಾಡಿಕೊಂಡು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ ಎಂದರು.
ಜ್ಞಾನಪೀಠ ಪ್ರಶಸ್ತಿ ಪುರಸತ ಸಾಹಿತಿ ಡಾ.ಚಂದ್ರಶೇಕರ ಕಂಬಾರ, ರಾಜ್ಯಸಭಾ ಮಾಜಿ ಸದಸ್ಯೆ ಹಿರಿಯ ಕಲಾವಿದೆ ಬಿ.ಜಯಶ್ರೀ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್​.ಎನ್​.ಮುಕುಂದರಾಜ್​, ರಿಜಿಸ್ಟಾರ್​ ಕರಿಯಪ್ಪ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ ಕು.ಮಿರ್ಜಿ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ, ಅಕಾಡೆಮಿ ಸದಸ್ಯೆ ಸುಮಾಸತೀಶ್​, ಡಿಡಿಪಿಯು ಡಾ.ಬಾಲಗುರುಮೂರ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸತೆ ಡಾ.ಲಕ್ಷ$್ಮಣದಾಸ್​, ಗುಬ್ಬಿ ರಾಜೇಶ್​ ಮತ್ತಿತರರು ಉಪಸ್ಥಿತರಿದ್ದರು.

ಸಾಹಿತ್ಯ ಅಕಾಡೆಮೆ ಪ್ರಶಸ್ತಿ ಪುರಸ್ಕೃತರು

ಗೌರವ ಪ್ರಶಸ್ತಿ : ಡಾ.ಎಂ.ಬಸವಣ್ಣ, ಶೂದ್ರ ಶ್ರೀನಿವಾಸ್​, ಪ್ರತಿಭಾ ನಂದಕುಮಾರ್​, ಡಾ.ಡಿ.ಬಿ.ನಾಯಕ, ಡಾ.ವಿಶ್ವನಾಥ ಕಾರ್ನಾಡ್​
ಸಾಹಿತ್ಯಶ್ರಿ ಪುರಸ್ಕಾರ : ಡಾ.ಬಿ.ಎಂ.ಪುಟ್ಟಯ್ಯ, ಪದ್ಮಾಲಯ ನಾಗರಾಜ, ಡಾ.ಕೆ.ವೈ.ನಾರಾಯಸ್ವಾಮಿ, ಡಾ.ಎಚ್​.ಎಸ್​.ಅನುಪಮಾ, ಡಾ.ಸಬಿತಾ ಬನ್ನಾಡಿ, ಡಾ.ಮಮತಾ ಜಿ.ಸಾಗರ, ಡಾ.ಗುರುಲಿಂಗಪ್ಪ ಧಬಾಲೆ, ಅಬ್ದುಲ್​ ಹೈ ತೋರಣಗಲ್ಲು, ಡಾ.ಬಿ.ಯು.ಸುಮಾ, ಡಾ.ಅಮರೇಶ ಯತಗಲ ಸೇರಿದಂತೆ ಒಟ್ಟು 41 ಮಂದಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net