ಇಂದು ಸಂಜೆ ಪ್ರಾಜೆಕ್ಟ್​ ಪಂಚತಂತ್ರ

ಪ್ರಾಜೆಕ್ಟ್​ ಪಂಚತಂತ್ರ ನಾಟ
ಪ್ರಾಜೆಕ್ಟ್​ ಪಂಚತಂತ್ರ ನಾಟ
Published on

ಪ್ರಮುಖ ಮುಖ್ಯಾಂಶಗಳು

  • ನಾಟಕ ಅಕಾಡೆಮಿ, ಝೆನ್​ ಟೀಮ್​ ಸಹಯೋಗ
  • ಜಿಲ್ಲಾ ನಾಟಕೋತ್ಸವ
  • ಪ್ರಸ್ತುತಪಡಿಸಲಿದೆ ನಿರ್ದಿಗಂತ ತಂಡ

ತುಮಕೂರು: ರಾಜ್ಯ ನಾಟಕ ಅಕಾಡೆಮಿ ವತಿಯಿಂದ ಝೆನ್​ ಟೀಮ್​ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಯೋಗದಲ್ಲಿ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆ. 31 ರಂದು ಸಂಜೆ 6.45 ಕ್ಕೆ ಜಿಲ್ಲಾ ನಾಟಕೋತ್ಸವದ ಅಂಗವಾಗಿ "ಪ್ರಾಜೆಕ್ಟ್​ ಪಂಚತಂತ್ರ' ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಜಿಲ್ಲಾ ನಾಟಕೋತ್ಸವವನ್ನು ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜಮೂರ್ತಿ ಉದ್ಘಾಟಿಸುವರು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್​. ಸಿದ್ಧಲಿಂಗಪ್ಪ ಅಧ್ಯಕ್ಷತೆವಹಿಸುವರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಸೋನಿಯಾ ವರ್ಣೇಕರ್​, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್​ ಕು.ಮಿರ್ಜಿ, ಕಲಾವಿದ ಗೋಮಾರದಹಳ್ಳಿ ಮಂಜುನಾಥ್​ ಉಪಸ್ಥಿತರಿರುವರು ಎಂದು ನಾಟಕ ಅಕಾಡೆಮಿ ರಿಜಿಸ್ಟ್ರಾರ್​ ಬಿ. ನೀಲಮ್ಮ ಹಾಗೂ ಸದಸ್ಯ ಉಗಮ ಶ್ರೀನಿವಾಸ್​ ತಿಳಿಸಿದರು.
ಪ್ರಾಜೆಕ್ಟ್​ ಪಂಚತಂತ್ರ: ನಟ ಪ್ರಕಾಶ್​ ರಾಜ್​ ಅವರ ನಿರ್ದಿಗಂತ ತಂಡ ಪ್ರಸ್ತುತಪಡಿಸುತ್ತಿರುವ ಈ ನಾಟಕದ ನಿರ್ದೇಶನ ಅರುಣಲಾಲ್​ ನಿರ್ದೇಶನ ಇದೆ. ಪಂಚತಂತ್ರದ ಕಥೆಗಳನ್ನು ಸಮಕಾಲೀನ ರಂಗಭಾಷೆಯಲ್ಲಿ ಕಟ್ಟಿಕೊಡುವ ಪ್ರಯತ್ನವಾಗಿ ಈ ನಾಟಕ ರೂಪುಗೊಂಡಿದೆ. ಪ್ರೇಕ್ಷಕರು ಕೇವಲ ಮನೋರಂಜನೆಗೆ ಸೀಮಿತವಾಗದೆ ಪ್ರಶ್ನಿಸಲು, ಕ್ರಿಯಾಶೀಲರಾಗಲು ಈ ನಾಟಕ ಪ್ರೇರೇಪಿಸುತ್ತದೆ.
ೊಟೋ:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net