ಬೆಂಗಳೂರು, ಮೈಸೂರು ಖೋಖೋ ಚಾಂಪಿಯನ್​

ಖೋಖೋ ಪಂದ್ಯದಲ್ಲಿ ದಕ್ಷಿಣ  ಕನ್ನಡದ ಆಟಗಾರನ ಪೋಲ್​ ಡೈವ್​.
ಖೋಖೋ ಪಂದ್ಯದಲ್ಲಿ ದಕ್ಷಿಣ ಕನ್ನಡದ ಆಟಗಾರನ ಪೋಲ್​ ಡೈವ್​.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಕ್ರೀಡಾಕೂಟ
  • ಶಿವಮೊಗ್ಗ, ಮಂಡ್ಯಕ್ಕೆ ಕಂಚು
  • ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯ
ತುಮಕೂರು: ಬೆಂಗಳೂರು ನಗರ ಮತ್ತು ಮೈಸೂರು ತಂಡಗಳು ಕರ್ನಾಟಕ ಕ್ರೀಡಾಕೂಟದಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದ ಖೋಖೋ ಸ್ಪರ್ಧೆಯಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದವು.
ನಗರದ ಸರ್ಕಾರಿ ಜೂನಿಯರ್​ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಪುರುಷರ ಖೋಖೋ ಫೈನಲ್​ ಪಂದ್ಯದಲ್ಲಿ ಬೆಂಗಳೂರು ನಗರ ತಂಡ 18-&15 ರಿಂದ ದಕ್ಷಿಣಕನ್ನಡ ವಿರುದ್ಧ ಜಯ ಸಾಧಿಸಿ ಚಿನ್ನದ ಪದಕ ಗೆದ್ದಿತು. ಶಿವಮೊಗ್ಗ ಪುರುಷರ ತಂಡ ಕಂಚಿನ ಪದಕ ಪಡೆಯಿತು.
ಮಹಿಳೆಯರ ಫೈನಲ್ ​ನಲ್ಲಿ ಮೈಸೂರು ತಂಡ ಇನ್ನಿಂಗ್ಸ್​ ಹಾಗೂ 3 ಅಂಕಗಳಿಂದ ಬೆಂಗಳೂರು ನಗರ ತಂಡವನ್ನ ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿತು.
ಬೆಂಗಳೂರು ನಗರ ಬೆಳ್ಳಿ ಹಾಗೂ ಮಂಡ್ಯ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net