ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಕರ್ನಾಟಕ ಕ್ರೀಡಾಕೂಟದ ಅಂತಿಮದಿನ ಪುರುಷರ 100 ಮೀ., ಓಟದ ಸ್ಪರ್ಧೆಯಲ್ಲಿ ಗೌತಮ್ 10.40 ಸೆಕೆಂಡ್ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದುಕೊಂಡರು. ಉಡುಪಿಯ ಡಿ.ಧನುಶ್ (10.70 ಸೆ.) ಬೆಳ್ಳಿ ಗೆದ್ದರೆ, ಉಡುಪಿಯ ಪಿ.ಭವಿಶ್ (10.80 ಸೆ.) ಕಂಚಿನ ಪದಕ ಪಡೆದರು.