ಹೆಣ್ಣು ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಲಿ

 ತುಮಕೂರು ತಾಲೂಕಿನ ಹೆಬ್ಬೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಡಾ.ಜ್ಯೋತಿ, ಡಾ.ಪ್ರೀತಿರನ್ನು ಅಭಿನಂದಿಸಲಾಯಿತು. ಪ್ರೊ.ಡಿ.ಕೃಷ್ಣ, ಡಾ.ಸಿ.ದಿನೇಶ್​ ಕುಮಾರ್​, ಡಾ.ಎನ್​.ಗೋವಿಂದರಾಜು, ಬಿ.ಎಸ್​. ಮೋಹನ್​ಕುಮಾರ್​, ಎಂ.ಎಸ್​.ಜಗದೀಶ್​ , ಕೆ.ಪಿ. ಮಧುಸೂಧನ , ಡಾ. ರವೀಶ್​, ಡಿ.ನಂದ, ಬಿ.ಕೆ. ಮಂಜುಳ ಮತ್ತಿತರರು ಇದ್ದರು.
ತುಮಕೂರು ತಾಲೂಕಿನ ಹೆಬ್ಬೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಡಾ.ಜ್ಯೋತಿ, ಡಾ.ಪ್ರೀತಿರನ್ನು ಅಭಿನಂದಿಸಲಾಯಿತು. ಪ್ರೊ.ಡಿ.ಕೃಷ್ಣ, ಡಾ.ಸಿ.ದಿನೇಶ್​ ಕುಮಾರ್​, ಡಾ.ಎನ್​.ಗೋವಿಂದರಾಜು, ಬಿ.ಎಸ್​. ಮೋಹನ್​ಕುಮಾರ್​, ಎಂ.ಎಸ್​.ಜಗದೀಶ್​ , ಕೆ.ಪಿ. ಮಧುಸೂಧನ , ಡಾ. ರವೀಶ್​, ಡಿ.ನಂದ, ಬಿ.ಕೆ. ಮಂಜುಳ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೆಬ್ಬೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು
  • ಅಂತಾರಾಷ್ಟ್ರೀಯ ಮಹಿಳಾ ದಿನ
  • ತುಮಕೂರು ವಿವಿ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿ
ತುಮಕೂರು: ಮಹಿಳೆಯರು ಆರ್ಥಿಕವಾಗಿ ಸಬಲರಾದಾಗ ಜೀವನದ ಎಲ್ಲ ಕ್ಷೇತ್ರದಲ್ಲೂ ಪಗ್ರತಿ ಹಾಗೂ ಸಮಾಜದಲ್ಲಿ ಸಮಾನತೆ ಸಾಧಿಸಬಹುದು ಎಂದು ತುಮಕೂರು ವಿಶ್ವವಿದ್ಯಾಲಯ ಇಂಗ್ಲೀಷ್​ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿ ಹೇಳಿದರು.
ತಾಲೂಕಿನ ಹೆಬ್ಬೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮಹಿಳಾ ದಿನಾಚರಣೆಗೆ ಒಂದು ಅರ್ಥ ಬರಬೇಕಾದರೆ ಎಲ್ಲಾ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಆ ಮೂಲಕ ಅವರು ಸ್ವಾಲಂಬನೆಯ, ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಬೇಕು ಎಂದರು.
ಹೆಣ್ಣುಮಕ್ಕಳಿಗೆ ಕೌಟುಂಬಿಕ ಜವಾಬ್ದಾರಿಗಳ ಜತೆಗೆ ಶಿಕ್ಷಣವೂ ಮುಖ್ಯ. ಶಿಕ್ಷಣದ ಮೂಲಕ ಆರಿವು. ಆರಿವಿನ ಮೂಲಕ ಸ್ವಾಲಂಬನೆ ಸಾಧಿಸಿಸುವ ಮೂಲಕ ಆರ್ಥಿಕವಾಗಿ ಸಬಲೀಕರಣರಾಗಿ ಸಬಲೀಕರಣದ ಮೂಲಕ ಸಮಾನತೆಯ ಸಮಾಜ ನಿಮಾರ್ಣ ಸಾಧ್ಯ. ಜ್ಯೋತಿ ಬಾಪುಲೆಯವರು ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಬೇಕು. ಬಾಪುಲೆಯವರ ಶ್ರಮ, ಅವರು ಎದುರಿಸಿದ ಕಠಿಣ ಪರಿಸ್ಥಿತಿ ಹಾಗೂ ಸಮಾಜಕ್ಕೆ ಅವರ ಕೊಡುಗೆಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಹೆಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರೀತಿ ಮಾತನಾಡಿ, ವೈದ್ಯಾಧಿಕಾರಿಗಳು, ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆಗಳು ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು. ಮಹಿಳೆಯರು ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಸಾಧಿಸಬಹುದು, ಸಾಧನೆಯ ಹಾದಿಯಲ್ಲಿ ಅಡ್ಡಿ ಅತಂಕಗಳನ್ನು ಮೆಟ್ಟಿ ನಿಲ್ಲುವ ಮೂಲಕ ಸಾಧನೆಯ ಶಿಖರವನ್ನು ಏರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಡಿ.ಕೃಷ್ಣ, ಎಲ್ಲಾ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆಗಳನ್ನು ನೀಡಬೇಕು ಎಂದು ತಿಳಿಸಿದರು.
ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಸಿ.ದಿನೇಶ್​ಕುಮಾರ್​, ಸಹಾಯಕ ಪ್ರಾಧ್ಯಾಪಕರುಗಳಾದ ಡಾ.ಎನ್​.ಗೋವಿಂದರಾಜು, ಬಿ.ಎಸ್​. ಮೋಹನ್​ಕುಮಾರ್​, ಎಂ.ಎಸ್​.ಜಗದೀಶ್​ , ಕೆ.ಪಿ. ಮಧುಸೂಧನ , ದೈಹಿಕ ಶಿಕ್ಷಣ ನಿರ್ದೇಶಕ ಡಾ. ರವೀಶ್​, ಎಸ್​.ಎಚ್​ ಭಾರತಿಸುತ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಡಿ.ನಂದ, ಬಿ.ಕೆ. ಮಂಜುಳ ಸ್ವಾಗತಿಸಿ, ಎಚ್​.ಕೆ.ರಾಕೇಶ್​ ವಂದಿಸಿದರು. ಡಿ.ನಂದ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net