ಐಜಿಪಿ ವರ್ಗಾವಣೆ ಕಾರಣ ಹೇಗಾದರು ತಿಳಿದುಕೊಳ್ಳಿ

ತುಮಕೂರಿನ ಸಿರಿಧಾನ್ಯ ಮೇಳದಲ್ಲಿ ಭಾಗವಹಿಸಿದ್ದ ಸಚಿವ ಪರಮೇಶ್ವರ್​
ತುಮಕೂರಿನ ಸಿರಿಧಾನ್ಯ ಮೇಳದಲ್ಲಿ ಭಾಗವಹಿಸಿದ್ದ ಸಚಿವ ಪರಮೇಶ್ವರ್​
Published on

ಪ್ರಮುಖ ಮುಖ್ಯಾಂಶಗಳು

  • ಬಳ್ಳಾರಿ ಪ್ರಕರಣ
  • ಐಜಿಪಿ ವರ್ಣಿಕಾ ಕಟೀಯಾರ್​ ವರ್ಗಾವಣೆ
  • ಗೃಹ ಸಚಿವ ಪರಮೇಶ್ವರ
ತುಮಕೂರು: ಬಳ್ಳಾರಿ ಜಿಲ್ಲೆಯಲ್ಲಿ ನಡೆದಿರುವ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು ಐಜಿಪಿ ವರ್ಣಿಕಾ ಕಟೀಯಾರ್​ ಅವರನ್ನು ವರ್ಗಾವಣೆ ಮಾಡಿ ಅವರ ಜಾಗಕ್ಕೆ ಡಾ.ಪಿ.ಎಸ್​.ಹರ್ಷ ನೇಮಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ವರ್ಗಾವಣೆ ಕಾರಣವನ್ನು ನೀವು ಹೇಗಾದರೂ ತಿಳಿದುಕೊಳ್ಳಿ, ಸಿಎಂ ಸಿದ್ದರಾಮಯ್ಯ ಅವರನ್ನು ವರ್ಗಾವಣೆ ಮಾಡಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಫೊಲೀಸರು ಥಳಿಸಿದ ಆರೋಪದ ಬಗ್ಗೆ ಕಮಿಷನರ್​ ಶಶಿಕುಮಾರ್​ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ, ಅದನ್ನು ಬಿಟ್ಟು ನಾನೇನು ಹೇಳುವುದಿಲ್ಲ ಎಂದರು.
ತುಮಕೂರು ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ಪ್ರಭಾರ ಹುದ್ದೆ ನೀಡಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಗಮನಿಸಿದ್ದೇನೆ ಆಡಳಿತ ವ್ಯವಸ್ಥೆಯಲ್ಲಿ ಇದೆಲ್ಲಾ ತಾತ್ಕಾಲಿಕ ಕ್ರಮವಾಗಿರಲಿದೆ. ರಾಜ್ಯದಲ್ಲಿ ದಕ್ಷ ಅಧಿಕಾರಿಗಳ ಕೊರತೆ ಇಲ್ಲ ಹಾಗಾಗಿ, ಶೀಘ್ರದಲ್ಲಿಯೇ ತುಮಕೂರು ಜಿಲ್ಲೆಯಲ್ಲಿಯೂ ಖಾಲಿ ಉಳಿದಿರುವ ಹುದ್ದೆಗಳಿಗೆ ಶೀಘ್ರ ನೇಮಕವಾಗಲಿದೆ ಎಂದರು.
.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net