ವೈಜ್ಞಾನಿಕ ರೇಷ್ಮೆ ಕೃಷಿಯಿಂದ ಹೆಚ್ಚಿನ ಆದಾಯ

ತಿಪಟೂರು ತಾಲೂಕಿನ ಹೊನ್ನವಳ್ಳಿಯ ಪಾಂಡುರಂಗ ರಾಜ್ ಅರಸ್ ರೇಷ್ಮೆ ತೋಟದಲ್ಲಿ ಹಮ್ಮಿಕೊಂಡಿದ್ದ ರೇಷ್ಮೆ ಕೃಷಿ ವಿಚಾರ ಸಂಕಿರಣ ಹಾಗೂ ಗುಂಪು ಚರ್ಚೆ ಕಾರ್ಯಕ್ರಮದಲ್ಲಿ ರೇಷ್ಮೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ, ಪ್ರಗತಿಪರ ರೇಷ್ಮೆ ಬೆಳೆಗಾರ ನೇತ್ರಾನಂದ, ಮೊಹನ್, ಸುಧಾಕರ್, ಕಾಂತರಾಜು, ಬಾಬು, ಮಂಜುನಾಥ್, ಮಧು ಇದ್ದರು.
ತಿಪಟೂರು ತಾಲೂಕಿನ ಹೊನ್ನವಳ್ಳಿಯ ಪಾಂಡುರಂಗ ರಾಜ್ ಅರಸ್ ರೇಷ್ಮೆ ತೋಟದಲ್ಲಿ ಹಮ್ಮಿಕೊಂಡಿದ್ದ ರೇಷ್ಮೆ ಕೃಷಿ ವಿಚಾರ ಸಂಕಿರಣ ಹಾಗೂ ಗುಂಪು ಚರ್ಚೆ ಕಾರ್ಯಕ್ರಮದಲ್ಲಿ ರೇಷ್ಮೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ, ಪ್ರಗತಿಪರ ರೇಷ್ಮೆ ಬೆಳೆಗಾರ ನೇತ್ರಾನಂದ, ಮೊಹನ್, ಸುಧಾಕರ್, ಕಾಂತರಾಜು, ಬಾಬು, ಮಂಜುನಾಥ್, ಮಧು ಇದ್ದರು.
Published on
ತಿಪಟೂರು: ವೈಜ್ಞಾನಿಕ ರೇಷ್ಮೆ ಕೃಷಿಯಿಂದ ಹೆಚ್ಚಿನ ಆದಾಯ ಸಾಧ್ಯ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕಿ ಶೈಲಾ ಹೇಳಿದರು.
ತಾಲೂಕಿನ ಹೊನ್ನವಳ್ಳಿಯ ಪಾಂಡುರಂಗ ರಾಜ್ ಅರಸ್ ರೇಷ್ಮೆತೋಟದಲ್ಲಿ ಗುರುವಾರ ರೇಷ್ಮೆ ಇಲಾಖೆ ಹಾಗೂ ತಾಂತ್ರಿಕ ಸೇವಾ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೇಷ್ಮೆ ಕೃಷಿ ವಿಚಾರಸಂಕಿರಣ ಹಾಗೂ ಗುಂಪು ಚರ್ಚೆ ಕಾರ್ಯಕ್ರಮದಲ್ಲಿ ವಾತನಾಡಿ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ರೇಷ್ಮೆ ಕೃಷಿಗೆ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದ್ದು, ರೈತರು ಸುಲಭವಾಗಿ ಉತ್ತಮ ಆದಾಯಗಳಿಸಲು ಸಾಧ್ಯವಾಗಿದೆ ಎಂದರು.
ಹಿಪ್ಪುನೇರಳೆ ತೋಟವನ್ನು ಯಾವ ರೀತಿಯಲ್ಲಿ ನಿರ್ವಹಿಸುತ್ತೇವೆ ಎಂಬುದರ ಮೇಲೆ ರೈತರ ಆದಾಯ ನಿರ್ಧಾರವಾಗುತ್ತದೆ. ರೇಷ್ಮೆ ಹುಳು ಸಾಕಾಣಿಕೆ ಸಂದರ್ಭದಲ್ಲಿ ಸ್ವಚ್ಛತೆ, ಸೂಕ್ತ ಗಾಳಿ, ಬೆಳಕು, ತಾಪವಾನ ಹಾಗೂ ತೇವಾಂಶದ ನಿರ್ವಹಣೆ ಅತ್ಯಂತ ಮುಖ್ಯ. ಆಧುನಿಕ ಸಾಕಾಣಿಕೆ ಮನೆಗಳು ಇಂತಹ ಪರಿಸರವನ್ನು ಸಮರ್ಪಕವಾಗಿ ನಿರ್ವಹಿಸಲು ಸಹಕಾರಿಯಾಗುತ್ತವೆ ಎಂದರು.
ಕೊನೇಹಳ್ಳಿಯ ಕೆವಿ.ಕೆ. ಬೇಸಾಯ ಶಾಸದ ವಿಜ್ಞಾನಿ ತಸ್ಮಿಯ ಕೌಸರ್ ವಾತನಾಡಿ, ಹಿಪ್ಪುನೇರಳೆ ಬೆಳೆಯಲ್ಲಿ ಉತ್ತಮ ಎಲೆ ಇಳುವರಿ ಹಾಗೂ ಗುಣಮಟ್ಟದ ಎಲೆಗಳನ್ನು ಪಡೆಯಲು ಸಮರ್ಪಕ ಪೋಷಕಾಂಶ ನಿರ್ವಹಣೆ ಅಗತ್ಯ ಎಂದರು.
ಕೊರಟಗೆರೆಯ ರೇಷ್ಮೆ ಸಹಾಯಕ ನಿರ್ದೇಶಕ ಕೆ.ಸಿ.ರಾಜಣ್ಣ ವಾತನಾಡಿ, ರೇಷ್ಮೆ ಕೃಷಿಯಲ್ಲಿ ಹಿಪ್ಪುನೇರಳೆ ಬೆಳೆಯುವುದು, ರೇಷ್ಮೆ ಹುಳುಗಳ ಸಾಕಾಣಿಕೆ ಹಾಗೂ ಗುಣಮಟ್ಟದ ಗೂಡು ಉತ್ಪಾದನೆ ಪ್ರಮುಖ ಹಂತಗಳಾಗಿವೆ. ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ರೇಷ್ಮೆ ಹುಳುಗಳ ಆರೋಗ್ಯಕರ ಬೆಳವಣಿಗೆ ಹಾಗೂ ಗೂಡಿನ ಗುಣಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net