ಪಾವಗಡ ತಾಲೂಕಿನ ಸಿ.ಎಚ್. ಪಾಳ್ಯದ ನಿವಾಸಿಗಳಾದ ನರಸಿಂಹಪ್ಪ ಹಾಗೂ ಅಂಬಿಕಾ, ಪುತ್ರಿ ಜಾನವಿ, ಪೂಜಾ ಸಮೇತ ನೆಲಮಂಗಲ ಸಮೀಪ ಸಂಬಂಧಿಕರ ಕಾರ್ಯಕ್ರಮಕ್ಕೆ ತೆರಳಿ ಮರಳುತ್ತಿದ್ದಾಗ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಿದೆ. ನರಸಿಂಹಪ್ಪ, ಅಂಬಿಕಾ, ಪೂಜಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.