ಕನಿಕಲಬಂಡೆ ಬಳಿ ನಾಡಬಾಂಬ್​ ಸ್ಫೋಟ

 ಸ್ಥಳ ಶೋಧ ನಡೆಸುತ್ತಿರುವ ಬಾಂಬ್​ ನಿಷ್ಕ್ರಿಯ ದಳ
ಸ್ಥಳ ಶೋಧ ನಡೆಸುತ್ತಿರುವ ಬಾಂಬ್​ ನಿಷ್ಕ್ರಿಯ ದಳ
Published on

ಪ್ರಮುಖ ಮುಖ್ಯಾಂಶಗಳು

  • ಪಾವಗಡ ತಾಲೂಕು ಪೊನ್ನಸಮುದ್ರ
  • ತೋಟದ ಪಂಪ್​ಹೌಸ್​ನಲ್ಲಿ ಬಾಂಬ್​ ಸ್ಫೋಟ
  • ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ
ಪಾವಗಡ:

ತಾಲೂಕಿನ ಪೊನ್ನಸಮುದ್ರದ ಕನಿಕಲಬಂಡೆಯ ತೋಟದ ಪಂಪ್​ಹೌಸ್​ನಲ್ಲಿ ನಾಡಬಾಂಬ್​ ಸ್ಫೋಟಗೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರೈತ ಕರಿಯಣ್ಣ ಎಂಬುವರು ಜಮೀನಿನ ಬೆಳೆಗೆ ನೀರು ಹಾಯಿಸಲು ಶುಕ್ರವಾರ ಬೆಳಗ್ಗೆ ತೆರಳಿದ್ದ ವೇಳೆ ತೋಟದ ಮನೆಯಲ್ಲಿ ಪಂಪ್​ಹೌಸ್​ನಲ್ಲಿನ ಸ್ಟಾರ್ಟರ್​ ಸ್ವಿಚ್​ ಆನ್​ ಮಾಡುತ್ತಿದ್ದಂತೆ ಏಕಾಏಕಿ ನಾಡಬಾಂಬ್​ ಸ್ಫೋಟಗೊಂದ್ದು ಸ್ಫೋಟದ ಶಬ್ದಕ್ಕೆ ಬೆಚ್ಚಿಬಿದ್ದ ಕರಿಯಣ್ಣ ಕೂಡಲೇ ಹೊರಗೆ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಂತರ ಪಂಪ್​ಹೌಸ್​ ಪರಿಶೀಲಿಸಿದಾಗ ಮತ್ತೊಂದು ಬಾಂಬ್​ ಇಟ್ಟಿರುವುದು ಪತ್ತೆಯಾಗಿದೆ. ಸ್ಫೋಟದ ಶಬ್ದ ಹಾಗೂ ದಟ್ಟ ಹೊಗೆ ಹರಡುತ್ತಿದ್ದಂತೆ ಸುತ್ತಮುತ್ತಲಿನ ಜಮೀನುಗಳಲ್ಲಿದ್ದ ರೈತರು ಸ್ಥಳಕ್ಕೆ ಧಾವಿಸಿ, ನಾಡಬಾಂಬ್​ ಸ್ಫೋಟದ ಟನೆ ಎಲ್ಲರಲ್ಲು ಆತಂಕ ಮನೆಮಾಡುವಂತೆ ಮಾಡಿದೆ.
ಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್​ ಅಧೀಕ್ಷಕ ಕೆ.ವಿ.ಅಶೋಕ್​, ಮಧುಗಿರಿ ಉಪವಿಭಾಗದ ಡಿವೈಎಸ್ಪಿ ಪಿ.ಮಂಜುನಾಥ್​, ಪಾವಗಡ ಠಾಣೆಯ ಸಿಪಿಐ ಸುರೇಶ್​ಗೌಡ ಪೊಲೀಸ್​ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಬಾಂಬ್​ ನಿಷ್ಕ್ರಿಯ ದಳ: ಈ ಸಂಬಂಧ ತುಮಕೂರಿನಿಂದ ಬಾಂಬ್​ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಪರಿಶೀಲನೆ ನಡೆಸಿದ್ದಲ್ಲದೆ, ಮತ್ತೊಂದು ಬಾಂಬ್​ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ. ನಾಡ ಬಾಂಬ್​ನ ತೀವ್ರತೆ, ಗುಣಮಟ್ಟ ತಿಳಿದುಬಂದಿಲ್ಲ. ಬಾಂಬ್​ ಮಾದರಿ ಸಂಗ್ರಹಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಜಮೀನು ವಿವಾದದ ಹಿನ್ನೆಲೆ: ಕರಿಯಣ್ಣ ಹಾಗೂ ವೆಂಕಟೇಶ್​ ಎನ್ನುವರು ನಡುವೆ ಜಮೀನು ವಿವಾದ ಇದ್ದು 3 ತಿಂಗಳ ಹಿಂದಷ್ಟೇ ಇದೇ ಗ್ರಾಮದ ವೆಂಕಟೇಶ್​ ಎಂಬಾತ ಜಮೀನಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡುವಂತೆ ಇಲ್ಲವಾದರೆ ಪ್ರಾಣಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. ಈ ಸಂಬಂಧ ಪಾವಗಡ ಪೊಲೀಸ್​ ಠಾಣೆಗೆ ಕರಿಯಣ್ಣ ದೂರು ನೀಡಿದ್ದು ಈವರೆಗೆ ಯಾವುದೇ ಕ್ರಮವಾಗಿರಲಿಲ್ಲ. ಈ ದ್ವೇಷದ ಹಿನ್ನೆಲೆ ವೆಂಕಟೇಶ್​ ಪಂಪ್​ಹೌಸ್​ನಲ್ಲಿ ನಾಡ ಬಾಂಬ್​ ಇಟ್ಟಿರುವ ಶಂಕೆ ಇದೆ ಎಂದು ಕರಿಯಣ್ಣ ಆರೋಪಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net