ಲೋಕಸಭೆಗೆ ಸ್ಫರ್ಧೆ ರಾಜಣ್ಣ ಇಂಗಿತ

ಕ್ಯಾತಸಂದ್ರ ಕೆ.ಎನ್​.ರಾಜಣ್ಣ ನಿವಾಸದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭೋಜನ ಸವಿದರು.
ಕ್ಯಾತಸಂದ್ರ ಕೆ.ಎನ್​.ರಾಜಣ್ಣ ನಿವಾಸದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭೋಜನ ಸವಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸದ್ಯ ರಾಜಕೀಯ ನಿವೃತ್ತಿ ಇಲ್ಲ
  • ರಾಜಕೀಯ ವೈರಿಗಳಿಗೆ ಸಂದೇಶ
  • ಮಹಿಳಾ ಮೀಸಲಾತಿ ಖಚಿತ
ತುಮಕೂರು: ಕ್ಷೇತ್ರ ಮರುವಿಂಗಡಣೆಯಾದರೆ ಲೋಕಸಭೆಗೆ ಸ್ಪರ್ಧಿಸುವೆ ಎಂದು ಪುನರುಚ್ಚಿಸುವ ಮೂಲಕ ಮಾಜಿ ಸಚಿವ ಕೆ.ಎನ್​.ರಾಜಣ್ಣ ಸದ್ಯ ಚುನಾವಣಾ ಕಣದಿಂದ ಸದ್ಯ ನಿವೃತ್ತಿಯಾಗುವುದಿಲ್ಲ ಎಂದು ಪರೋಕ್ಷ$ವಾಗಿ ರಾಜಕೀಯ ವೈರಿಗಳಿಗೆ ಸಂದೇಶ ರವಾನಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಮುಂದೆ ಚುನಾವಣೆಗೆ ನಿಲ್ಲುತ್ತೇನೆ. ಕ್ಷೇತ್ರ ಮರುವಿಂಗಡಣೆ ಆಗುವುದು ಖಚಿತ. ಮಧುಗಿರಿ ಲೋಕಸಭಾ ಕ್ಷೇತ್ರವಾದಲ್ಲಿ ಅಲ್ಲಿಂದ ಸ್ಪರ್ಧಿಸುವೆ. ವಿಧಾನಸಭಾ ಕ್ಷೇತ್ರಕ್ಕೆ ಮಹಿಳಾ ಮೀಸಲಾತಿ ಬರಲಿದ್ದು ನಾನು ಬೆಂಬಲಿಸುವೆ. ಕೇಂದ್ರ ಸರ್ಕಾರ ಮನಸು ಮಾಡಿದರೆ ಯಾವುದೇ ಮಸೂದೆ ಜಾರಿ ತರುವುದಾಗಲಿ, ಕಾರ್ಯಕ್ರಮ ರೂಪಿಸುವುದು ಶರವೇಗದಲ್ಲಿ ಆಗಲಿದೆ ಎಂದರು.
ನನ್ನ ಮಾತು ನಡೆಯಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕೆಎನ್ನಾರ್​, ಈಗ ಸಿದ್ದರಾಮಯ್ಯನವರದ್ದು ಏನಿಲ್ಲ. ಎಲ್ಲಾ ಡಿ.ಕೆ.ಶಿವಕುಮಾರ್​ ಅವರದ್ದೆ.
ಒಕ್ಕಲಿಗರ ಓಟು ಪೂರ್ತಿ ಬರಲಿವೆ. ಸಿದ್ದರಾಮಯ್ಯ ಇದ್ದಾಗ ಕುರುಬ ಸಮುದಾಯದ ಓಟು ಪೂರ್ತಿ ಬರಲಿಲ್ಲವಾ ಹಾಗೇ ಒಕ್ಕಲಿಗರು ನಮ್ಮ ಪಕ್ಷಕ್ಕೆ ಹಾಕುತ್ತಾರೆ. ಕಾಂಗ್ರೆಸ್​ ಪಕ್ಷದಲ್ಲಿ ಶಿವಕುಮಾರ್​ರನ್ನು ಸಿಎಂ ಮಾಡಿದ್ದೇವೆ. ಅವರು ಕೂಡ ಪ್ರಬಲ ಕೋಮಿನ ನಾಯಕ ಅಂತ ಮಾಡಿದ್ದೇವೆ. ನಾಯಕರು ಅನ್ನುವುದನ್ನು ಜನ ಒಪ್ಪಿಕೊಳ್ಳುತ್ತಾರೋ ಬಿಡುತ್ತಾರೋ ತೀರ್ಮಾನ ಆಗುವುದು ಚುನಾವಣೆಯಲ್ಲಿ ತಾನೇ ನೋಡೋಣ ಎಂದು ತಿಳಿಸಿದರು.
ಸಿದ್ದರಾಮಯ್ಯ ಯಾಕೆ ಹಿಂದೆ ಸರಿಯುತ್ತಾರೆ. ಅವರು ಪ್ರಶ್ನಾತಿತ ನಾಯಕ. ಅದರಲ್ಲಿ ಅನುಮಾನವಿಲ್ಲ. ನೇಪಥ್ಯಕ್ಕೆ ಸರಿಯುವಂತಹ ಪರಿಸ್ಥಿತಿ ಸಿದ್ದರಾಮಯ್ಯಗೆ ಬಂದಿಲ್ಲ. ಅವರು ಸಕ್ರಿಯವಾಗಿರುತ್ತಾರೆ. ರಾಜಕಾರಣದಲ್ಲಿ ಏರಿಳಿತ ಸಹಜ. ಅಹಿಂದ ಸಂಟನೆ ಇನ್ನೂ ಈಗ ಪ್ರೀ ಮೆಚ್ಯೂರ್​. ಮುಂದೆ ರಾಜಕೀಯ ಟನೆ ಯಾವ ರೀತಿ ಜರುಗುತ್ತವೆ, ಜನ ಯಾವ ರೀತಿ ನಿರೀೆ ಮಾಡುತ್ತಾರೆ. ಜನಾಭಿಪ್ರಾಯಯಾವ ರೀತಿ ಬರುತ್ತವೆ, ಅದಕ್ಕೆ ಪೂರಕವಾಗಿ ರ್ನಿಣಯ ಮಾಡಿಕೊಳ್ಳುತ್ತೇವೆ ಎಂದರು.
ಅಪೆಕ್ಸ್​ ಬ್ಯಾಂಕ್​ ಚುನಾವಣೆ ಮುಗಿದ ಅಧ್ಯಾಯ. ಸಿದ್ದರಾಮಯ್ಯ ಸಹ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ರಾಜಕಾರಣದಲ್ಲಿ ಪ್ರತಿನಿತ್ಯ ಹತ್ತಾರು ಸಮಸ್ಯೆಗಳು ಬರಲಿವೆ, ಕೆಲವೊಂದು ಸಮಸ್ಯೆ ಬಗೆಹರಿಯುತ್ತಾವೆ. ಕೆಲವೊಂದು ಬಗೆ ಹರಿಯಲಿಲ್ಲ. ಹಾಗಂತ ವೀಕ್​ ಅಂತಲ್ಲ.
ನನಗೆ ಯಾವುದೇ ಹಿನ್ನಡೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net