ಕಾರಣ ಕೇಳಿ ನೊಟೀಸ್​ ಜಾರಿ ಮಾಡಿ

ತುಮಕೂರಿನಲ್ಲಿ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಸಚಿವ ಡಾ.ಜಿ.ಪರಮೇಶ್ವರ್​ ಮಾತನಾಡಿದರು. ಶುಭಕಲ್ಯಾಣ್​, ಬಿ.ವಿ.ಅಶ್ವಿಜ, ಕೆ.ವಿ.ಅಶೋಕ್​ ಮತ್ತಿತರರು ಇದ್ದರು.
ತುಮಕೂರಿನಲ್ಲಿ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಸಚಿವ ಡಾ.ಜಿ.ಪರಮೇಶ್ವರ್​ ಮಾತನಾಡಿದರು. ಶುಭಕಲ್ಯಾಣ್​, ಬಿ.ವಿ.ಅಶ್ವಿಜ, ಕೆ.ವಿ.ಅಶೋಕ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಮಗಾರಿ ಆರಂಭಿಸುವಲ್ಲಿ ವಿಳಂಬಧೋರಣೆ
  • ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ
  • ಸಚಿವ ಪರಮೇಶ್ವರ್​ ಪ್ರಗತಿ ಪರಿಶೀಲನೆ
ತುಮಕೂರು: ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಕಾಮಗಾರಿಗಳನ್ನು ಆರಂಭಿಸುವಲ್ಲಿ ವಿಳಂಬಧೋರಣೆ ಅನುಸರಿಸಿರುವ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ, ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಹಾಗೂ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಈ ಯೋಜನೆಗಳ ಕಾಮಗಾರಿಗಳನ್ನು ತಿಂಗಳಾಂತ್ಯದೊಳಗೆ ಆರಂಭಿಸಿ ಪೂರ್ಣಗೊಳಿಸದಿದ್ದರೆ ನಿರ್ದಾಕ್ಷಣ್ಯ ಕ್ರಮವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿಯವರನ್ನು ಕಾಡಿಬೇಡಿ 636 ಕಾಮಗಾರಿಗಳನ್ನು ಜಿಲ್ಲೆಗೆ ತರಲಾಗಿದೆ. ಸಂಬಂಧಿಸಿದ ಮೊದಲ ಕಂತಿನ ಅನುದಾನವನ್ನು ಬಿಡುಗಡೆ ಮಾಡಿ ಒಂದು ವರ್ಷವಾಗಿದ್ದರೂ ಕಾಮಗಾರಿ ಆರಂಭಿಸುವಲ್ಲಿ ಉದಾಸೀನ ತೋರುತ್ತಿರುವ ಅಧಿಕಾರಿಗಳು ಈ ಜಿಲ್ಲೆಯಲ್ಲಿ ಇರಬೇಕೇ? ಈ ತಿಂಗಳೊಳಗೆ ಅಷ್ಟೂ ಕಾಮಗಾರಿಗಳನ್ನು ಆರಂಭಿಸಿ ಮುಗಿಸದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮಕ್ಕೂ ಸಿದ್ಧ ಎಂದು ಚಾಟಿ ಬೀಸಿದರು.
ಕಾರಣಕೇಳಿ ನೊಟೀಸ್​: ಪಂಚಾಯತ್​ ರಾಜ್​ ಇಂಜಿನಿಯರಿಂಗ್​ ಮಧುಗಿರಿ ವಿಭಾಗದ 137 ಕಾಮಗಾರಿಗಳು, ತುಮಕೂರು ವಿಭಾಗದ 86 ಕಾಮಗಾರಿಗಳು, ಪಿಡಬ್ಲೂಡಿ ಮಧುಗಿರಿ ವಿಭಾಗದ 105 ಕಾಮಗಾರಿಗಳು, ತುಮಕೂರು ವಿಭಾಗದ 50 ಕಾಮಗಾರಿಗಳು ಹಾಗೂ ನಿರ್ಮಿತಿ ಕೇಂದ್ರ, ಕೆಆರ್​ಐಡಿಎಲ್​ನ 205 ಕಾಮಗಾರಿಗಳು ಸೇರಿದಂತೆ ಒಟ್ಟು 636 ಕಾಮಗಾರಿಗಳಿಗೆ ಮೊದಲ ಕಂತಿನ ಅನುದಾನವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಿದ್ದು ಒಂದು ವರ್ಷದ ಹಿಂದೆಯೇ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಆದರೂ ಕಾಮಗಾರಿಗಳನ್ನು ಈವರೆಗೆ ಆರಂಭಿಸಿಲ್ಲ ಮತ್ತು ಬಿಡುಗಡೆಯಾದ ಅನುದಾನವನ್ನು ವೆಚ್ಚ ಮಾಡದೆ ಅಧಿಕಾರಿಗಳು ರ್ನಿಲಕ್ಷ್ಯವಹಿಸುತ್ತಿದ್ದು, ಇಷ್ಟೂ ಅಧಿಕಾರಿಗಳಿಗೆ ಕಾರಣಕೇಳಿ ನೋಟೀಸ್​ ಜಾರಿ ಮಾಡುವಂತೆ ಜಿಲ್ಲಾಧಿಕಾರಿಯವರಿಗೆ ಸಚಿವ ಪರಮೇಶ್ವರ್​ ಸೂಚನೆ ನೀಡಿದರು.
ರಸ್ತೆ, ಒಳಚರಂಡಿ, ಕುಡಿಯುವ ನೀರು ಇತ್ಯಾದಿ ಮೂಲ ಸೌಲಭ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮುಖ್ಯಮಂತ್ರಿಯವರನ್ನು ಜಿಲ್ಲೆಗೆ ಅನುದಾನ ತರಲಾಗಿದೆ. ಅಧಿಕಾರಿಗಳ ಇಂತಹ ರ್ನಿಲಕ್ಷ$್ಯದಿಂದ ಸಿಎಂ ಮುಂದೆ ಬಾಕಿ ಅನುದಾನ ಬಿಡುಗಡೆ ಮಾಡುವಂತೆ ಹೇಗೆ ಕೇಳುವುದು? ತಿಂಗಳೊಳಗಾಗಿ ಎಲ್ಲಾ ಕಾಮಗಾರಿಗಳನ್ನು ಆರಂಭಿಸಿ ಪೂರ್ಣಗೊಳಿಸಬೇಕು. ಮೇ ಮೊದಲ ವಾರದಲ್ಲಿ ನಡೆಯುವ ಈ ಸಭೆಯಲ್ಲಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ತಾಕೀತು ಮಾಡಿದರು.
ಶಾಸಕರ ಪ್ರದೇಶಾಭಿವೃದ್ಧಿ ಮತ್ತು ಸಂಸದರ ಪ್ರದೇಶಾಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ 2023ರ ಸಾಲಿನಿಂದ ಬಾಕಿಯಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್​, ಜಿಪಂ ಸಿಇಒ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್​ ಅಧೀಕ್ಷಕ ಕೆ.ವಿ. ಅಶೋಕ್​, ಅಪರ ಜಿಲ್ಲಾಧಿಕಾರಿ ಡಾ.ಎನ್​. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net