

ಶಿರಾ: ನಗರಸಭೆ ಅಧಿಕಾರಿಗಳು ಜಾಗ ಒದಗಿಸಿ ಅನುಮತಿ ನೀಡಿದರೆ ನನ್ನ ಸ್ವಂತ ಖರ್ಚಿನಿಂದ ಅತ್ಯಾಧುನಿಕ ಟ್ಯಾಕ್ಸಿ ಸ್ಟ್ಯಾಂಡ್ ನಿಲ್ದಾಣ ಹಾಗೂ ಚಾಲಕರಿಗೆ ವಿಶ್ರಾಂತಿ ಪಡೆಯಲು ಅಗತ್ಯ ಸೌಲಭ್ಯ ನಿರ್ಮಿಸಲಾಗುವುದು ಎಂದು ಜೀನಿ ಸಂಸ್ಥೆಯ ಮಾಲೀಕ ದಿಲೀಪ್ ಭರವಸೆ ನೀಡಿದರು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಶ್ರೀ ಕನ್ನಡಾಂಬೆ ಟ್ಯಾಕ್ಸಿ ನಿಲ್ದಾಣದಿಂದ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಪ್ರಸ್ತುತ ಟ್ಯಾಕ್ಸಿ ನಿಲ್ದಾಣದ ಪಕ್ಕದಲ್ಲಿರುವ ಚರಂಡಿಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯದೆ ನಿಂತುಕೊಂಡಿದ್ದು, ದುರ್ವಾಸನೆಯಿಂದ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ಬಂದರೆ ್ಲ ಪರಿಸ್ಥಿತಿ ಹದಗೆಡುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆ ಅನುಮತಿ ಹಾಗೂ ಜಾಗ ಎರಡು ತಿಂಗಳ ಕಾಲಾವಕಾಶ ನೀಡಿದರೆ, ಅತ್ಯಾಧುನಿಕ ಟ್ಯಾಕ್ಸಿ ನಿಲ್ದಾಣ ಹಾಗೂ ಚಾಲಕರ ವಿಶ್ರಾಂತಿ ಸ್ಥಳ ನಿರ್ಮಿಸಿಕೊಡುವುದಾಗಿ ಹೇಳಿದರು.
ನಗರಸಭೆ ಅಧ್ಯ ಜಿ ಶಾನ್ ಮಹಮ್ಮದ್ ಮಾತನಾಡಿ, ದರ್ಗಾದಿಂದ ಪ್ರವಾಸಿ ಮಂದಿರದ ವೃತ್ತದ ವರೆಗೆ ಇರುವ ಮುಖ್ಯರಸ್ತೆಯ ಪಕ್ಕದಲ್ಲಿ ಪಾದಚಾರಿ ಮಾರ್ಗ ಹಾಗೂಚರಂಡಿ ವ್ಯವಸ್ಥೆ ನಿರ್ಮಿಸಲು ಟೆಂಡರ್ ಕರೆಯಲಾಗಿದ್ದು, ಶ್ರೀದಲ್ಲೆ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಹೇಳಿದರು.
ನಗರಸಭೆ ಸದಸ್ಯ ಉಮಾ ವಿಜಯರಾಜ್ ಮಾತನಾಡಿ, ಟ್ಯಾಕ್ಸಿ ನಿಲ್ದಾಣದ ಚಾಲಕರು ಚರಂಡಿಯ ದುರ್ವಾಸನೆಯಿಂದ ಬೇಸತ್ತಿದ್ದಾರೆ. ಮಳೆ ಬಂದಾಗ ಅವರ ಸಂಕಷ್ಟ ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ ನಗರಸಭೆ ಅಧ್ಯರು ಹಾಗೂ ಅಧಿಕಾರಿಗಳು ಟ್ಯಾಕ್ಸಿ ಚಾಲಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.