ತೊಣಚಗೊಂಡನಹಳ್ಳಿಯಲ್ಲಿ ಹೃದಯ ಆಸ್ಪತ್ರೆ ನಿರ್ಮಾಣ

ಸುದ್ದಿಗೋಷ್ಠಿಯಲ್ಲಿ  ಶ್ರೀ ಕೃಪಾನಿಧಿ ಸ್ವಾಮೀಜಿ ಮಾತನಾಡಿದರು. ರಾಜಮೋಹನ ಸ್ವಾಮಿ, ಸ್ಥಳಿಯರಾದ ಸುದ್ದೇಕುಂಟೆ ಮೂರ್ತಿ, ಅರುಣ್​, ಕಶ್ಯಪ್​, ನಾರಾಯಣ್​, ತಿಮ್ಮಾರೆಡ್ಡಿ, ಶ್ರೀಹರಿ ಇತರರಿದ್ದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಕೃಪಾನಿಧಿ ಸ್ವಾಮೀಜಿ ಮಾತನಾಡಿದರು. ರಾಜಮೋಹನ ಸ್ವಾಮಿ, ಸ್ಥಳಿಯರಾದ ಸುದ್ದೇಕುಂಟೆ ಮೂರ್ತಿ, ಅರುಣ್​, ಕಶ್ಯಪ್​, ನಾರಾಯಣ್​, ತಿಮ್ಮಾರೆಡ್ಡಿ, ಶ್ರೀಹರಿ ಇತರರಿದ್ದರು.
Published on

ಮಧುಗಿರಿ/ದೊಡ್ಡೇರಿ:

ಶ್ರೀ ಸಾಮ್ರಾಜ್ಯ ಲಕ್ಷಿ$್ಮ ಫೌಂಡೇಷನ್​ನಿಂದ ತಾಲೂಕಿನ ತೊಣಚಗೊಂಡನಹಳ್ಳಿಯಲ್ಲಿ ಉಚಿತ ಹೃದಯ ಆಸ್ಪತ್ರೆಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಶ್ರೀ ಕೃಪಾನಿಧಿ ಸ್ವಾಮೀಜಿ ತಿಳಿಸಿದರು.

ತಾಲೂಕಿನ ದೊಡ್ಡೇರಿ ಹೋಬಳಿಯ ತೊಣಚಗೊಂಡನಹಳ್ಳಿ ಶ್ರೀ ಸಾಮ್ರಾಜ್ಯ ಲಕ್ಷಿ$್ಮ ದೇವಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಗ್ರಾಮಕ್ಕೆ ದೈವಿಕ ಶಕ್ತಿ ನೀಡಿ ಗ್ರಾಮಸ್ಥರ ಬಡತನ ನಿವಾರಣೆಗೆಸಂಕಲ್ಪ ಮಾಡಲಾಗಿದೆ. ಮಧುಗಿರಿ ತಾಲೂಕಿನಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ಈ ಭಾಗದಲ್ಲಿ ಉಚಿತವಾಗಿ ಹೈಟೆಕ್​ ಮಾದರಿಯ ಆಸ್ಪತ್ರೆ ನಿಮಾರ್ಣಕ್ಕೆ ಸಂಕಲ್ಪ ಮಾಡಲಾಗಿದೆ. ಶ್ರೀ ಸಾಮ್ರಾಜ್ಯ ಲಕ್ಷ್ಮೀ ದೇವಸ್ಥಾನ ಪೂರ್ಣಗೊಂಡ ನಂತರ ಹೈಟೆಕ್​ ಆಸ್ಪತ್ರೆ ನಿಮಾರ್ಣಕ್ಕೆ ಚಾಲನೆ ನೀಡಲಾಗುವುದು ಎಂದರು.
ಈಗ ಸಾಮ್ರಾಜ್ಯ ಲಕ್ಷಿ$್ಮ ದೇವಿ ಮೂರ್ತಿಯು ಜಲದಲ್ಲಿದ್ದು, ಆ.9ರಂದು ಧಾನ್ಯದ ವಾಸದಲ್ಲಿ ಪ್ರತಿಷ್ಠಾಪಿಸಿ ಶ್ರೀ ಅಮ್ಮನವರ ವಿಗ್ರಹದ ಧಾರ್ಮಿಕ ಪೂಜೆ ನಡೆಸಲಾಗುವದು. 2027 ಫೆ.25ರಂದು ಕುಂಬಾಭಿಷೇಕ ಪೂಜೆ ನಡೆಸಿ ದೇವಸ್ಥಾನ ಲೋಕಾರ್ಪಣೆಗೊಳಿಸಲಾಗುವುದು ಎಂದರು.

ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸ ಮೂರ್ತಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net