ತುಮಕೂರು-ಊರುಕೆರೆ ಹಾಗೂ ಊರುಕೆರೆ-ತಿಮ್ಮರಾಜನಹಳ್ಳಿ ರೈಲ್ವೆ ಮಾರ್ಗದ ಸುರಕ್ಷತಾ ಪರಿಶೀಲನೆ ನಡೆಸಲಾಯಿತು. ಜನಕ್ ಕುಮಾರ್ ಗರ್ಗ್, ಅಜಯ್ಶರ್ಮ, ಆಶುತೋಷ್ಕುಮಾರ್ ಸಿಂಗ್, ಪದ್ರೀಪ್ ಪುರಿ , ಎಂ.ವಿ. ಪ್ರಸಾದ್, ಸೂರಜ್ಕುಮಾರ್ ಮತ್ತಿತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಊರುಕೆರೆ-ತಿಮ್ಮರಾಜನಹಳ್ಳಿ ಮಾರ್ಗ ಪರಿಶೀಲನೆ
ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದ ತಂಡ
ಈ ಮಾರ್ಗಗಳಲ್ಲಿ 24 ರಸ್ತೆ ಕೆಳಸೇತುವೆ ನಿರ್ಮಾಣ
ತುಮುಕೂರು: ತುಮಕೂರು-ರಾಯದುರ್ಗ ರೈಲ್ವೆ ಮಾರ್ಗ ಯೋಜನೆ ಭಾಗವಾದ ತುಮಕೂರು-ಊರುಕೆರೆ (11 ಕಿ.ಮೀ.,) ರೈಲ್ವೆ ಮಾರ್ಗ ಹಾಗೂ ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಮಾರ್ಗ ಯೋಜನೆಭಾಗವಾದ ಊರುಕೆರೆ-ತಿಮ್ಮರಾಜನಹಳ್ಳಿ (13 ಕಿ.ಮೀ.) ರೈಲ್ವೆ ಮಾರ್ಗದ ಸುರಕ್ಷತಾ ಪರಿಶೀಲನೆ ನಡೆಸಲಾಯಿತು. ವೇಗ ಹಾಗೂ ಕಡ್ಡಾಯ ತಪಾಸಣೆಯನ್ನು ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತ ಜನಕ್ ಕುಮಾರ್ ಗರ್ಗ್ ನೇತೃತ್ವದಲ್ಲಿ ಶುಕ್ರವಾರ ನಡೆಸಲಾಯಿತು.
ಮುಖ್ಯ ಆಡಳಿತಾಧಿಕಾರಿ ಅಜಯ್ಶರ್ಮ, ಬೆಂಗಳೂರು ವಿಭಾಗೀಯ ರೃಲ್ವೆ ವ್ಯವಸ್ಥಾಪಕ ಆಶುತೋಷ್ಕುಮಾರ್ ಸಿಂಗ್, ಮುಖ್ಯ ಇಂಜಿನಿಯರ್ ಗಳಾದ ಪದ್ರೀಪ್ ಪುರಿ, ಎಂ.ವಿ. ಪ್ರಸಾದ್, ಡೆಪ್ಯೂಟಿ ಚೀಫ್ ಇಂಜಿನಿಯರ್ ಸೂರಜ್ಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
207 ಕಿ.ಮೀ. ಉದ್ದದ ತುಮಕೂರು& ರಾಯದುರ್ಗ ರೈಲ್ವೆ ಮಾರ್ಗ ಯೋಜನೆಯಲ್ಲಿ ಈ ವರೆಗೆ 83 ಕಿ.ಮೀ., ಮಾರ್ಗವನ್ನು ಕಾರ್ಯನಿಯೋಜನೆಗೊಳಿಸಲಾಗಿದೆ. ತುಮಕೂರು-ಊರುಕೆರೆ ಹೊಸ ಮಾರ್ಗದಲ್ಲಿ 18 ಕಿರುಸೇತುವೆಗಳು, 2 ದೊಡ್ಡ ಸೇತುವೆಗಳು ಹಾಗೂ 18 ರಸ್ತೆ ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ. ಊರುಕೆರೆ ನಿಲ್ದಾಣ ಯಾರ್ಡ್ 4 ಲೈನ್ಗಳನ್ನು ಹೊಂದಿದೆ.
ಊರುಕೆರೆ-ತಿಮ್ಮರಾಜನಹಳ್ಳಿ ಹೊಸ ಮಾರ್ಗದಲ್ಲಿ 5 ದೊಡ್ಡಸೇತುವೆಗಳು, 17 ಕಿರುಸೇತುವೆಗಳು, 4 ರಸ್ತೆ ಮೇಲ್ಸೆತುವೆಗಳು, 6 ರಸ್ತೆ ಕೆಳಸೇತುವೆಗಳು ಹಾಗೂ ತಿಮ್ಮರಾಜನಹಳ್ಳಿಯಲ್ಲಿ ಒಂದು ಪ್ರಯಾಣಿಕರ ಸಬ್ವೇಯನ್ನು ನಿರ್ಮಿಸಲಾಗಿದೆ. ತಿಮ್ಮರಾಜನಹಳ್ಳಿ ನಿಲ್ದಾಣ 5 ಲೈನ್ಗಳನ್ನು ಹೊಂದಿದೆ.